ಬಾವಿಯಿಂದ ದುರ್ವಾಸನೆ, ಪರಿಶೀಲಿಸಿದಾಗ ತೇಲುತ್ತಿತ್ತು ವ್ಯಕ್ತಿಯ ಮೃತದೇಹ, ಏನಿದು ಕೇಸ್‌?

ಸಾಗರ: ನಗರದ ಗಣಪತಿ ದೇವಸ್ಥಾನ ಸಮೀಪದ ಸರ್ಕಾರಿ ಬಾವಿಯಲ್ಲಿ ಸುಮಾರು 40 ರಿಂದ 45 ವರ್ಷದ ಪುರುಷನ ಶವ ಪತ್ತೆಯಾಗಿದೆ. ಬಾವಿಯಿಂದ ಕೆಟ್ಟ ವಾಸನೆ ಬರುತ್ತಿದ್ದ ಹಿನ್ನೆಲೆ ಪಕ್ಕದಲ್ಲಿ ಸಿಮೆಂಟ್ ಅನ್‌ಲೋಡ್ ಮಾಡುತ್ತಿದ್ದ ಕಾರ್ಮಿಕರು ಪರಿಶೀಲಿಸಿದಾಗ ಶವ ತೇಲುತ್ತಿರುವುದು ಕಂಡುಬಂದಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಶವವನ್ನು ಮೇಲೆತ್ತಿದ್ದಾರೆ.

ಶವವು ಅರೆನಗ್ನ ಸ್ಥಿತಿಯಲ್ಲಿದ್ದು, ಎರಡೂ ಕೈಗಳನ್ನು ಹಿಂಭಾಗಕ್ಕೆ ಕಟ್ಟಿ ಬಾವಿಗೆ ಎಸದಿರುವ ಶಂಕೆ ಇದೆ. ಬಾವಿ ಮೇಲ್ಬಾಗದಲ್ಲಿದ್ದ ಕಬ್ಬಿಣದ ಬಾಗಿಲನ್ನು ತೆರೆದು ವ್ಯಕ್ತಿಯನ್ನು ಬಾವಿಗೆ ಹಾಕಿ, ನಂತರ ಮುಚ್ಚಿರುವ ಅನುಮಾನ ವ್ಯಕ್ತವಾಗಿದೆ. ಸಾಗರ ಟೌನ್‌ ಠಾಣೆ ವ್ಯಾಪ್ತಿಯಲ್ಲಿ ಮೃತದೇಹ ಪತ್ತೆಯಾಗಿದೆ.

Crime-News-General-Image