ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ಗುಡುಗು, ಮಿಂಚು ಸಹಿತ ಮಳೆ, ಇನ್ನಷ್ಟು ದಿನ ಮಳೆಯ ಎಚ್ಚರಿಕೆ

ಶಿವಮೊಗ್ಗ: ಜಿಲ್ಲೆಯ ವಿವಿಧೆಡೆ ಗುಡುಗು, ಮಿಂಚು ಸಹಿತ ಮಳೆಯಾಗುತ್ತಿದೆ. ಶಿವಮೊಗ್ಗ ನಗರದಲ್ಲಿ ಸಂಜೆ ವೇಳೆಗೆ ಮಳೆ ಸುರಿದಿದೆ. ಅಕ್ಟೋಬರ್‌ 10ರವರೆಗೆ ಶಿವಮೊಗ್ಗ ಸೇರಿದಂತೆ ರಾಜ್ಯದ ವಿವಿಧೆಡೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. (ಈ ಸುದ್ದಿಯನ್ನು ಇನ್ನು 58 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)

ಜಿಲ್ಲೆಯ ವಿವಿಧೆಡೆ ಮಳೆ ಅಬ್ಬರ

ಸಂಜೆ ವೇಳೆಗೆ ಜಿಲ್ಲೆಯ ವಿವಿಧೆಡೆ ಗುಡುಗು ಸಹಿತ ಮಳೆಯಾಗುತ್ತಿದೆ. ಶಿವಮೊಗ್ಗ ತಾಲ್ಲೂಕಿನ ಹಾರನಹಳ್ಳಿ, ಆಯನೂರು, ಮುದ್ದಿನಕೊಪ್ಪ, ಹೊಳೆಬೆನವಳ್ಳಿ, ಸೋಗಾನೆ, ಕೊರ್ಲಹಳ್ಳಿ, ಹೊಸಹಳ್ಳಿ, ಕಡೇಕಲ್‌. ಭದ್ರಾವತಿ ತಾಲ್ಲೂಕಿನ ಎಮ್ಮೇಹಟ್ಟಿ, ಯಡೇಹಳ್ಳಿ, ಅರಕೆರೆ, ಕೂಡ್ಲಿಗೆರೆಯಲ್ಲಿ ಮಳೆಯಾಗುತ್ತಿದೆ.

Rain-in-Shimoga-city-night.

ತೀರ್ಥಹಳ್ಳಿಯ ದೇಮ್ಲಾಪುರ, ತ್ರಯಂಬಕಪುರ, ಬಸವಾನಿ, ತೀರ್ಥಮತ್ತೂರು, ಅರೇಹಳ್ಳಿ, ಹೊನ್ನೇತಾಳು, ಆಗುಂಬೆ, ನಾಲೂರು ಕೋಳಿಗೆ, ಮೇಗರವಳ್ಳಿ. ಹೊಸನಗರದ ತ್ರಿಣಿವೆ, ರಾಮಚಂದ್ರಾಪುರ, ಮೇಲಿನಬೆಸಿಗೆ, ಹೊಸನಗರ, ಕರೀಮನೆ, ಸುಳಗೋಡು, ಯಡೂರು, ಮುಂಬಾರು, ಜೇನಿ. ಸಾಗರದ ಭೀಮನಕೋಣೆ, ಕೋಳೂರು, ಗೌತಮಪುರ, ತ್ಯಾಗರ್ತಿ, ಕೆಳದಿ, ಅರಳಗೋಡು. ಶಿಕಾರಿಪುರ ತಾಲ್ಲೂಕಿನ ಕಾಗಿನಲ್ಲಿ, ಮುದ್ದನಹಳ್ಳಿ, ನೆಲವಾಗಿಲು, ಗೊಡ್ಡನಕೊಪ್ಪ, ಹಿರೇಜಂಬೂರು, ಉಡುಗಣಿ, ಅಮಟೆಕೊಪ್ಪ. ಸೊರಬ ತಾಲ್ಲೂಕಿನ ಉದ್ರಿ, ಹಳೆ ಸೊರಬ, ಹೆಚ್ಚೆ ಭಾಗದಲ್ಲಿ ಮಳೆಯಾಗುತ್ತಿದೆ.  

ಕರಾವಳಿ, ಮಲೆನಾಡು ಭಾಗಗಳಲ್ಲಿ ಮಳೆ

ಅರಬ್ಬಿ ಸಮುದ್ರ ಹಾಗೂ ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ಮೇಲ್ಮೈ ಸುಳಿಗಾಳಿಯಿಂದಾಗಿ ಕರಾವಳಿ ಹಾಗೂ ಮಲೆನಾಡು ಭಾಗಗಳಲ್ಲಿ ದಿಢೀರ್ ಮಳೆಯಾಗಲಿದೆ. ಜಿಲ್ಲೆಯಾದ್ಯಂತ ಹಗಲಿನ ವೇಳೆ ಭಾಗಶಃ ಮೋಡ ಕವಿದ ವಾತಾವರಣವಿರಲಿದೆ. ಸಂಜೆ ಅಥವಾ ರಾತ್ರಿ ವೇಳೆಯಲ್ಲಿ ಸಿಡಿಲು ಹಾಗೂ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ಅಕ್ಟೋಬರ್ 10ರವರೆಗೆ ಜಿಲ್ಲೆಯಲ್ಲಿ ಮಳೆಯ ವಾತಾವರಣ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಗೂಗಲ್‌ನಲ್ಲಿ ಶಿವಮೊಗ್ಗ ಲೈವ್ ಸುದ್ದಿಗಳು ನಿಮಗೆ ಮೊದಲು ಸಿಗಬೇಕೆ? ಕೆಳಗಿನ ಬಟನ್ ಒತ್ತಿ: