ಶಿವಮೊಗ್ಗ ಲೈವ್
ಸೊರಬ: ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ಗುಡುಗು, ಮಿಂಚು ಸಹಿತ ಮಳೆಯಾಗುತ್ತಿದೆ. ಸೊರಬ ತಾಲ್ಲೂಕಿನಲ್ಲಿ ಮಳೆಯಾಗುವ ಹೊತ್ತಿಗೆ ಸಿಡಿಲು ಬಡಿದು ಎಂಟು ಕುರಿಗಳು ಸಾವನ್ನಪ್ಪಿವೆ. ಸೊರಬ ತಾಲ್ಲೂಕಿನ ಉಳವಿ ಹೋಬಳಿ ಕಾನಹಳ್ಳಿ ಗ್ರಾಮದ ಬಸಪ್ಪ ಎಂಬುವರ ತೋಟದಲ್ಲಿ ಘಟನೆ ಸಂಭವಿಸಿದೆ. ಕೊಟ್ಟಿಗೆ ಮನೆಯಲ್ಲಿ ಕಟ್ಟಿದ್ದ 8 ಕುರಿಗಳು ಸಿಡಿಲು ಬಡಿದು ಮೃತಪಟ್ಟಿವೆ. ಇದರಿಂದ ಲಕ್ಷಾಂತರ ರುಪಾಯಿ ನಷ್ಟವಾಗಿದೆ ಎಂದು ರೈತ ಆರೋಪಿಸಿದ್ದಾರೆ. ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
