ಶಿವಮೊಗ್ಗ ಲೈವ್
ಶಿವಮೊಗ್ಗ: ಅಣ್ಣಾನಗರ ಚಾನೆಲ್ ಏರಿ ರಸ್ತೆಯಲ್ಲಿ ಯುವಕನ ಹತ್ಯೆ ಪ್ರಕರಣ ಸಂಬಂಧ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಅಶೋಕನಗರ 3ನೇ ಕ್ರಾಸ್ ನಿವಾಸಿ, ಟೈಲ್ಸ್ ಕೆಲಸ ಮಾಡುತ್ತಿದ್ದ ಸೈಯ್ಯದ್ ಜಿಲಾನ್ ಅಲಿಯಾಸ್ 360 (23) ಬಂಧಿತ ಆರೋಪಿ.
ಅಕ್ಟೋಬರ್ 3ರ ರಾತ್ರಿ ಅಣ್ಣಾನಗರ ಚಾನೆಲ್ ಏರಿ ರಸ್ತೆಯಲ್ಲಿ ಮೊಹಮದ್ ಅಲಿ (37) ಎಂಬುವವರನ್ನು ಕೊಲೆ ಮಾಡಿ ರಸ್ತೆಯ ಬದಿಯಲ್ಲಿ ಹಾಕಿ ದುಷ್ಕರ್ಮಿಗಳು ಪರಾರಿಯಾಗಿದ್ದರು. ಈ ಕುರಿತು ಮೃತನ ಸಹೋದರ ನೀಡಿದ ದೂರಿನ ಮೇರೆಗೆ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ತನಿಖೆ ನಡೆಸಿದ ಪೊಲೀಸರು ಅಕ್ಟೋಬರ್ 5ರಂದು ಆರೋಪಿ ಸೈಯ್ಯದ್ ಜಿಲಾನ್ನನ್ನು ಬಂಧಿಸಿದ್ದಾರೆ. ಆರೋಪಿಯಿಂದ ಕೃತ್ಯಕ್ಕೆ ಬಳಸಿದ್ದ ಆಯುಧ ಹಾಗೂ ಬೈಕ್ ಅನ್ನು ವಶಪಡಿಸಿಕೊಂಡಿದ್ದು, ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.