ನ್ಯೂ ಮಂಡ್ಲಿಯಲ್ಲಿ ಬೆಳಿಗ್ಗೆ ಮನೆಯಿಂದ ಹೊರಗೆ ಬಂದು ನೋಡಿದ ವ್ಯಕ್ತಿ ಕಂಗಾಲು, ಏನಾಯ್ತು?

ಶಿವಮೊಗ್ಗ: ಮನೆಯ ಮುಂಭಾಗದಲ್ಲಿ ನಿಲ್ಲಿಸಲಾಗಿದ್ದ ಪೊಲೀಸ್‌ ಸಿಬ್ಬಂದಿಯೊಬ್ಬರ ಬೈಕ್‌ ಕಳ್ಳತನವಾಗಿದೆ. ನಗರದ ನ್ಯೂಮಂಡ್ಲಿ 2ನೇ ಅಡ್ಡರಸ್ತೆಯಲ್ಲಿ ಘಟನೆ ಸಂಭವಿಸಿದೆ.

ಪೊಲೀಸ್‌ ಸಿಬ್ಬಂದಿ ಫಾರೂಖ್ ಅಹಮ್ಮದ್ ಹೀರೊ ಹೋಂಡಾ ಸ್ಪೆಂಡರ್ ಬೈಕ್ ಅನ್ನು ತಮ್ಮ ಮನೆಯ ಮುಂಭಾಗದಲ್ಲಿ ನಿಲ್ಲಿಸಿದ್ದರು. ಮರುದಿನ ಬೆಳಿಗ್ಗೆ ಮನೆಯಿಂದ ಹೊರಗೆ ಬಂದು ನೋಡಿದಾಗ, ಬೈಕ್ ನಾಪತ್ತೆಯಾಗಿತ್ತು. ಎಲ್ಲೆಡೆ ಹುಡುಕಿದರು ಬೈಕ್‌ ಸಿಗದೆ ಇದ್ದಾಗ ದೂರು ನೀಡಿದ್ದಾರೆ. ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

crime name image