ಬೈಕುಗಳು ಡಿಕ್ಕಿ, ವ್ಯಕ್ತಿಯ ಮೂಗಿನ ಮೂಳೆ ಮುರಿತ, ಕಾಲಿನ ಮೂಳೆಗಳು ಕಟ್‌, ಆಗಿದ್ದೇನು?

ಸಾಗರ: ಎರಡು ಬೈಕ್‌ಗಳ ನಡುವೆ ಸಂಭವಿಸಿದ ಅಪಘಾತದಲ್ಲಿ ದಂಪತಿ ಗಾಯಗೊಂಡಿದ್ದಾರೆ. ತಾಲ್ಲೂಕಿನ ಮಡಸೂರು ಗ್ರಾಮದ ಲಿಂಗದಹಳ್ಳಿ ರಸ್ತೆಯ ಶನೈಶ್ಚರ ದೇವಸ್ಥಾನದ ಬಳಿ ಘಟನೆ ಸಂಭವಿಸಿದೆ.

ಮಡಸೂರು ಗ್ರಾಮದ ನಿವಾಸಿ ರಾಮಚಂದ್ರಪ್ಪ ಹಾಗೂ ಅವರ ಪತ್ನಿ ಲಲಿತಮ್ಮ ಅಪಘಾತದಲ್ಲಿ ಗಾಯಗೊಂಡಿದ್ದಾರೆ. ರಾಮಚಂದ್ರಪ್ಪ ಅವರು ತಮ್ಮ ಹೀರೊ ಡಿಲಕ್ಸ್ ಬೈಕ್‌ನಲ್ಲಿ ಪತ್ನಿ ಲಲಿತಮ್ಮ ಅವರನ್ನು ಹಿಂಬದಿಯಲ್ಲಿ ಕೂರಿಸಿಕೊಂಡು ಮಡಸೂರು ಗ್ರಾಮದ ತಮ್ಮ ಮನೆಯಿಂದ ತೋಟದ ಕಡೆಗೆ ತೆರಳುತ್ತಿದ್ದರು. ಲಿಂಗದಹಳ್ಳಿ ಕಡೆಯಿಂದ ಬಂದ ಟಿವಿಎಸ್ ಸ್ಟಾರ್ ಸಿಟಿ ಬೈಕ್ ಸವಾರ ದಂಪತಿ ತೆರಳುತ್ತಿದ್ದ ಬೈಕ್‌ಗೆ ಡಿಕ್ಕಿ ಹೊಡೆಸಿದ್ದಾನೆ ಎಂದು ಆರೋಪಿಸಲಾಗಿದೆ.

ACCIDENT-NEWS-GENERAL-IMAGE.

ಅಪಘಾತದಲ್ಲಿ ರಾಮಚಂದ್ರಪ್ಪ ಅವರ ಮುಖಕ್ಕೆ ಪೆಟ್ಟಾಗಿದ್ದು, ಮೂಗಿನ ಮೂಳೆ ಮುರಿದಿದೆ. ದವಡೆ ಒಡೆದು ಹಲ್ಲುಗಳು ಮುರಿದಿವೆ. ಅಲ್ಲದೆ ಎರಡೂ ಕಾಲುಗಳ ಮೂಳೆ ಮುರಿದು ತೀವ್ರ ರಕ್ತಸ್ರಾವವಾಗಿದೆ. ಪತ್ನಿ ಲಲಿತಮ್ಮ ಅವರ ತಲೆಯ ಹಿಂಭಾಗ, ಬಲಕೈ ಹಾಗೂ ಸೊಂಟಕ್ಕೆ ಬಲವಾದ ಪೆಟ್ಟು ಬಿದ್ದಿದೆ ಎಂದು ಆರೋಪಿಸಲಾಗಿದೆ. ಘಟನೆ ಸಂಬಂಧ ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.