ಯಶವಂತಪುರ – ಶಿವಮೊಗ್ಗ ರೈಲು ವಿಸ್ತರಣೆಗೆ ಒತ್ತಾಯ, ಕಾರಣವೇನು?

ಸಾಗರ: ದಸರಾ ಮತ್ತು ದೀಪಾವಳಿ ಹಬ್ಬಗಳ ಹಿನ್ನೆಲೆ ಯಶವಂತಪುರ – ಶಿವಮೊಗ್ಗ ರೈಲನ್ನು ತಾಳಗುಪ್ಪದವರೆಗೂ ವಿಸ್ತರಿಸಬೇಕು ಎಂದು ಸಾಗರದ ರೈಲ್ವೆ ಹೋರಾಟ ಸಮಿತಿ ಒತ್ತಾಯಿಸಿದೆ.

ಈ ಕುರಿತು ರೈಲ್ವೆ ಹೋರಾಟ ಸಮಿತಿಯ ಕಾರ್ಯದರ್ಶಿ ಎಸ್.ಜಿ. ಕುಮಾರಸ್ವಾಮಿ ಅವರು ರೈಲ್ವೆ ಇಲಾಖೆಯ ಉನ್ನತಾಧಿಕಾರಿಗಳು ಹಾಗೂ ಸಂಸದ ಬಿ.ವೈ. ರಾಘವೇಂದ್ರ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ. ಹಬ್ಬದ ಸಂದರ್ಭ ಸಾಲು-ಸಾಲು ರಜೆಗಳು ಇರುವುದರಿಂದ ಪ್ರವಾಸಿಗರ ಸಂಖ್ಯೆ ಹೆಚ್ಚಿರಲಿದೆ. ಜೊತೆಗೆ ಶಾಲಾ ರಜೆಗಳೂ ಇರುವುದರಿಂದ ಪ್ರಯಾಣಿಕರ ಸಂಖ್ಯೆ ಹೆಚ್ಚಿರಲಿದೆ. ಆದ್ದರಿಂದ ಈ ಅವಧಿಯಲ್ಲಿ ರೈಲು ಸಂಚಾರವನ್ನು ತಾಳಗುಪ್ಪದವರೆಗೆ ವಿಸ್ತರಿಸಿದರೆ ಸಾರ್ವಜನಿಕರಿಗೆ ಅನುಕೂಲವಾಗಲಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

Train-Jan-Shatabdi-General-Image

ರೈಲು ಮಾರ್ಗ ತಾಳಗುಪ್ಪದವರೆಗೆ ವಿಸ್ತರಣೆಯಾದರೆ ಆನಂದಪುರಂ ಮತ್ತು ಸಾಗರ ಭಾಗದ ಪ್ರಯಾಣಿಕರು ಮಾತ್ರವಲ್ಲದೆ, ರಿಪ್ಪನ್‌ಪೇಟೆ, ತಾಳಗುಪ್ಪ, ಸಿದ್ದಾಪುರ ಹಾಗೂ ಶಿರಸಿ ಭಾಗದ ಜನರಿಗೂ ಅನುಕೂಲವಾಗಲಿದೆ ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.