ಶಿವಮೊಗ್ಗ ಲೈವ್
ಸಾಗರ: ತಾಲ್ಲೂಕು ಪಂಚಾಯಿತಿಗಳ ಕ್ಷೇತ್ರಗಳಿಗೆ ಮೀಸಲಾಗಿ ಪ್ರಕಟಿಸಲಾಗಿದೆ. ಸಾಗರ ತಾಲ್ಲೂಕಿನ ಯಾವೆಲ್ಲ ಕ್ಷೇತ್ರಕ್ಕೆ ಏನೆಲ್ಲ ಮೀಸಲಾಗಿತ ನಿಗದಿಪಡಿಸಲಾಗಿದೆ. ಇಲ್ಲಿದೆ ವಿವರ
ಹಿರೇನೆಲ್ಲೂರು ಸಾಮಾನ್ಯ ಮಹಿಳೆ, ಕೆಳದಿ ಮತ್ತು ನಾಡಕಲಸಿ ಸಾಮಾನ್ಯ, ಬರೂರು ಹಿಂದುಳಿದ ವರ್ಗ ‘ಅ’, ಹೊಸೂರು ಸಾಮಾನ್ಯ ಹಾಗೂ ತ್ಯಾಗರ್ತಿ ಹಿಂದುಳಿದ ವರ್ಗ ‘ಅ’ಗೆ ಮೀಸಲಾಗಿವೆ. ಆನಂದಪುರ ಪರಿಶಿಷ್ಟ ಜಾತಿ ಮಹಿಳೆ, ಹೆಗ್ಗೋಡು ಸಾಮಾನ್ಯ ಮಹಿಳೆ, ಆವಿನಹಳ್ಳಿ ಹಿಂದುಳಿದ ವರ್ಗ ‘ಬ’ ಮಹಿಳೆ, ಯಡಜಿಗಳೇಮನೆ ಮತ್ತು ತುಮರಿ ಸಾಮಾನ್ಯ, ಚನ್ನಗೊಂಡ ಸಾಮಾನ್ಯ ಮಹಿಳೆ, ತಲವಾಟ ಪರಿಶಿಷ್ಟ ಪಂಗಡ ಮಹಿಳೆ ಹಾಗೂ ತಾಳಗುಪ್ಪ ಮತ್ತು ಕಾನ್ಲೆ ಹಿಂದುಳಿದ ವರ್ಗ ‘ಅ’ ಮಹಿಳೆಗೆ ಮೀಸಲಿಡಲಾಗಿದೆ.
