ಶಿವಮೊಗ್ಗ ಲೈವ್.ಕಾಂ | SHIMOGA | 01 ಡಿಸೆಂಬರ್ 2019
ತೀವ್ರ ಕುತೂಹಲ ಮೂಡಿಸಿದ್ದ ಶಿವಮೊಗ್ಗ ವಕೀಲರ ಸಂಘಕ್ಕೆ ಎನ್.ದೇವೇಂದ್ರಪ್ಪ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಬೆಳಗ್ಗೆಯಿಂದ ನಡೆದ ಮತ ಎಣಿಕೆಯಲ್ಲಿ 303 ಮತಗಳನ್ನು ಪಡೆದು ದೇವೇಂದ್ರಪ್ಪ ಚುನಾಯಿತರಾಗಿದ್ದಾರೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಜಿಲ್ಲಾ ವಕೀಲರ ಸಂಘದ ವಿವಿಧ ಜವಾಬ್ದಾರಿಗಳಿಗೆ ನವೆಂಬರ್ 30ರಂದು ಚುನಾವಣೆ ನಡೆದಿತ್ತು. ಇವತ್ತು ಮತ ಎಣಿಕೆ ಕಾರ್ಯ ನಡೆಯಿತು.
ಕೊನೆವರೆಗೆ ಹಣಾಹಣಿ
ಅಧ್ಯಕ್ಷ ಸ್ಥಾನಕ್ಕೆ ಮೂವರು ಸ್ಪರ್ಧಿಸಿದ್ದರು. ಆದರೆ ದೇವೇಂದ್ರಪ್ಪ ಮತ್ತು ಬಸಪ್ಪಗೌಡ ಅವರ ನಡುವೆ ಮತ ಎಣಿಕೆಯ ಕೊನೆ ಹಂತದವರೆಗೂ ಹಣಾಹಣಿ ಇತ್ತು. ಅಂತಿಮವಾಗಿ ದೇವೇಂದ್ರಪ್ಪ ಅವರು 303 ಮತಗಳನ್ನ ಪಡೆದರೆ, ಬಸಪ್ಪಗೌಡ ಅವರು 290 ಮತಗಳನ್ನು ಪಡೆದುಕೊಂಡರು. 13 ಮತಗಳ ಅಂತರದಲ್ಲಿ ದೇವೇಂದ್ರಪ್ಪ ಅವರು ವಿಜಯಮಾಲೆ ಧರಿಸಿದರು. ಒಟ್ಟು 615 ಮತಗಳು ಚಲಾವಣೆಯಾಗಿತ್ತು.
ಕಾರ್ಯದರ್ಶಿ ಸ್ಥಾನಕ್ಕೂ ಬಿಗ್ ಫೈಟ್
ಕಾರ್ಯದರ್ಶಿ ಸ್ಥಾನಕ್ಕೂ ಭಾರೀ ಪೈಪೋಟಿ ನಡೆಯಿತು. ಆರು ವಕೀಲರು ಚುನಾವಣಾ ಕಣದಲ್ಲಿದ್ದರು. ಅಂತಿಮವಾಗಿ ಶಾಂತರಾಜು.ಕೆ.ಆರ್ ಅವರು 168 ಮತ ಪಡೆದು ಗೆಲುವು ಸಾಧಿಸಿದ್ದಾರೆ.
ಖಜಾಂಚಿಯಾಗಿ ಮಾರುತಿ
ಖಜಾಂಚಿ ಜವಾಬ್ದಾರಿಗೆ ಚಂದನ್ ಪಟೇಲ್, ಜನಾರ್ದನ್ ಮತ್ತು ಮಾರುತಿ ಸ್ಪರ್ಧಿಸಿದ್ದರು. ಅಂತಿಮವಾಗಿ 304 ಮತಗಳನ್ನು ಪಡೆದು, ಮಾರುತಿ ಜಯಶಾಲಿಯಾದರು. ಇನ್ನು, ನಿರ್ದೇಶಕ ಸ್ಥಾನಕ್ಕೆ 15 ಅಭ್ಯರ್ಥಿಗಳು ಕಣದಲ್ಲಿದ್ದರು. ಈ ಪೈಕಿ, ಭವಾನಿರಾವ್ (239), ಚಂದ್ರಶೇಖರಪ್ಪ (247), ಪೂರ್ಣಿಮಾ (349), ರಾಜಾರಾಮ್ (251), ಶಿವಪ್ಪ (236), ಶಿವಕುಮಾರ್ (247) ಆಯ್ಕೆಯಾಗಿದ್ದಾರೆ.
ಬೆಂಬಲಿಗರ ಸಂಭ್ರಮ, ಸೆಲ್ಫಿ
ತಮ್ಮ ಅಭ್ಯರ್ಥಿಗಳು ಗೆಲುವು ಸಾಧಿಸುತ್ತಿದ್ದಂತೆ ಅವರ ಸ್ನೇಹಿತರು ಮತ್ತು ಬೆಂಬಲಿಗರು ಸಂಭ್ರಮಾಚರಿಸಿದರು. ಗೆದ್ದ ಅಭ್ಯರ್ಥಿಗಳಿಗೆ ಹಾರ ಹಾಕಿ, ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂತಸಪಟ್ಟರು.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ – 7411700200
ಸುದ್ದಿಗಾಗಿ ಕರೆ ಮಾಡಿ – 9964634494
ಈ ಮೇಲ್ ಐಡಿ | [email protected]
New president has been elected for Shimoga Advocates Union. Advocates Celebrate over the new general body. Shivamogga News.