ಶಿವಮೊಗ್ಗ: ಮೈಸೂರು – ತಾಳಗುಪ್ಪ – ಮೈಸೂರು ಎಕ್ಸ್ಪ್ರೆಸ್ (16227/16228), ತಾಳಗುಪ್ಪ – ಶಿವಮೊಗ್ಗ ಟೌನ್ – ತಾಳಗುಪ್ಪ (56217/56218) ರೈಲುಗಳಿಗೆ ಸಾಂಪ್ರದಾಯಿಕ ರೇಕ್ (ಬೋಗಿ)ಗಳನ್ನು ತೆಗೆದು, ಹೆಚ್ಚು ಸುರಕ್ಷಿತ ಹಾಗೂ ಆಧುನಿಕ ‘ಲಿಂಕೆ ಹಾಫ್ಮನ್ ಬುಷ್’ (LHB) ಬೋಗಿಗಳನ್ನು ಅಳವಡಿಸಲಾಗುತ್ತಿದೆ ಎಂದು ನೈಋತ್ಯ ರೈಲ್ವೆ ಪ್ರಕಟಣೆಯಲ್ಲಿ ತಿಳಿಸಿದೆ.
ಅಕ್ಟೋಬರ್ 20 ಅಥವಾ 21ರಿಂದ ಹೊಸ ಬೋಗಿ ಜಾರಿಯಾಗಲಿದೆ. ಪ್ರಸ್ತುತ ಈ ರೈಲುಗಳು ಒಟ್ಟು 21 ಬೋಗಿಗಳನ್ನು ಹೊಂದಿದ್ದು, ಅವುಗಳಲ್ಲಿ 1 ಎಸಿ ಫಸ್ಟ್ ಕ್ಲಾಸ್, 1 ಎಸಿ 2-ಟೈರ್, 2 ಎಸಿ 3- ಟೈರ್, 10 ಸ್ಲೀಪರ್, 5 ಜನರಲ್ ಸೆಕೆಂಡ್ ಕ್ಲಾಸ್ ಜಕ ಹಾಗೂ 2 ಸೆಕೆಂಡ್ ಕ್ಲಾಸ್ -ಕಮ್-ಬ್ರೇಕ್ ವ್ಯಾನ್ ಸೇರಿದ್ದವು.

ಈಗ ಹೊಸ ವ್ಯವಸ್ಥೆಯಡಿ ಈ ರೈಲುಗಳು ಒಟ್ಟು 19 ಎಲ್.ಎಚ್ ಬಿ ಬೋಗಿಗಳನ್ನು ಅಳವಡಿಸಲಾಗುತ್ತಿದೆ. ಇದರಲ್ಲಿ 1 ಎಸಿ ಫಸ್ಟ್ ಕ್ಲಾಸ್, 1 ಎಸಿ 2-ಟೈರ್, 3 ಎಸಿ 3-ಟೈರ್, 7 ಸ್ಲೀಪರ್, 5 ಜನರಲ್ ಸೆಕೆಂಡ್ ಕ್ಲಾಸ್, 1 ದಿವ್ಯಾಂಗ ಸ್ನೇಹಿ ಬೋಗಿ ಹೊಂದಿರುವ ದ್ವಿತೀಯ ದರ್ಜೆ ಲಗೇಜ್ ಕಮ್ ಬ್ರೇಕ್ ವ್ಯಾನ್ ಹಾಗೂ 1 ಲಗೇಜ್ ಮತ್ತು ಬ್ರೇಕ್ ವ್ಯಾನ್-ಕಮ್-ಜನರೇಟರ್ ಕಾರ್ ಸೇರಿರಲಿವೆ. ಆದರೆ, ಶಿವಮೊಗ್ಗ ತಾಳಗುಪ್ಪ ರೈಲಿನಲ್ಲಿ ಎಸಿ ಬೋಗಿಗಳನ್ನು ಲಾಕ್ ಮಾಡಲಾಗಿರುತ್ತದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.