ಕಾಲುವೆಯಲ್ಲಿ ನವಜಾತ ಹೆಣ್ಣು ಶಿಶುವಿನ ಮೃತದೇಹ

ಹೊಳೆಹೊನ್ನೂರು: ಕಲ್ಲಿಹಾಳ್ ಗ್ರಾಮದ ಕಿರು ಕಾಲುವೆಯಲ್ಲಿ ಶುಕ್ರವಾರ ನವಜಾತ ಹೆಣ್ಣು ಶಿಶುವಿನ ಮೃತದೇಹ ಪತ್ತೆಯಾಗಿದೆ. ಕಲ್ಲಿಹಾಳ್ ಗ್ರಾಮ ಪಂಚಾಯಿತಿ ಬಿಲ್ ಕಲೆಕ್ಟರ್ ಬಿ.ಉಮೇಶ್ ಅವರು ಕರ ವಸೂಲಿಗೆ ಹೋಗಿದ್ದರು. ಆಗ ಗ್ರಾಮದ ಸುಭದ್ರಮ್ಮ ಅವರ ಮನೆ ಹಿಂದಿನ ಚಿಕ್ಕ ಕಾಲುವೆಯಲ್ಲಿ ನವಜಾತ ಶಿಶು ಕಂಡಿದ್ದು, ತಕ್ಷಣ ಸ್ಥಳೀಯರ ಸಹಾಯದಿಂದ ಹೊರ ತೆಗೆದಿದ್ದಾರೆ. ಈ ಬಗ್ಗೆ ಪಟ್ಟಣದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

holehonnur name graphics