ಶಿವಮೊಗ್ಗ: ದಸರಾ ಜಂಬೂ ಸವಾರಿಗೆ ಆಗಮಿಸಿದ್ದ ಸಕ್ರೆಬೈಲಿನ ಸಾಗರ್, ಸೋಮಣ್ಣ ಮತ್ತು ಬಹದ್ದೂರ್ ಅನೆಗಳು ತವರಿಗೆ ಮರಳಿದವರು. ಕಳೆದ ರಾತ್ರಿಯೇ ಆನೆಗಳನ್ನು ಬಿಡರಾಕ್ಕೆ ಕರೆದೊಯ್ಯಲಾಯಿತು. ಈ ಸಂದರ್ಭ ಅಲ್ಲಿದ್ದ ಜನರು ಅನೆಗಳ ಹಸರು ಕೂಗಿ ಶುಭ ಕೋರಿ ಬೀಳ್ಕೊಟ್ಟರು. (ಶಿವಮೊಗ್ಗ ಲೈವ್.ಕಾಂ | ಮುಂದಿನ 4 ಪ್ಯಾರಾಗಳು ಕೆಳಗಿವೆ)
ಅಂಬಾರಿ ಸಹಿತ ಓಡಿದ್ದ ಸೋಮಣ್ಣ ಆನೆ ಕೆಲವು ಹೊತ್ತು ಎಲ್ಲರನ್ನು ದಿಗಿಲುಗೊಳಿಸಿತ್ತು. ಆನಂತರ ಆನೆಯನ್ನು ನಿಯಂತ್ರಣಕ್ಕೆ ತರಲಾಗಿತ್ತು. ಜಿಲ್ಲಾ ತರಬೇತಿ ಸಂಸ್ಥೆ ಆವರಣಕ್ಕೆ ಆನೆಗಳನ್ನು ಕರೆದೊಯ್ದು ವಿಶ್ರಾಂತಿ ನೀಡಲಾಗಿತ್ತು. ಬಳಿಕ ರಾತ್ರಿ 10:30ಕ್ಕೆ ಆನೆಗಳನ್ನು ವಾಸವಿ ಶಾಲೆ ಎದುರು ಖಾಲಿ ಜಾಗಕ್ಕೆ ಕರೆತಂದು ಅಲ್ಲಿ ನಿರ್ಮಿಸಿದ್ದ ರಾಂಪ್ ಮೂಲಕ ಲಾರಿಗಳಿಗೆ ಹತ್ತಿಸಲಾಯಿತು.

ಆ ಹೊತ್ತಿನಲ್ಲಿಯು ಕೋಟೆ ರಸ್ತೆಯಲ್ಲಿ ಜನ ಸೇರಿದ್ದರು. ಲಾರಿಯಲ್ಲಿ ಆನೆಗಳನ್ನು ಕರೆದೊಯ್ಯುವಾಗ ಅವುಗಳ ಹೆಸರು ಕರೆದು ಶುಭ ಕೋರಿದರು. ಸದ್ಯ ಸೋಮಣ್ಣ ಆನೆ ನಿಯಂತ್ರಣದಲ್ಲಿದ್ದು ಜನರು ಹೆಸರು ಕರೆದಾಗ ಸೊಂಡಿಲನ್ನು ಮೇಲೆತ್ತಿ ಪ್ರತಿಕ್ರಿಯೆ ನೀಡಿತು.