ಶಿವಮೊಗ್ಗ: ದಸರಾ ಮೆರವಣಿಗೆಯಲ್ಲಿ ಭಯಗೊಂಡು ಅಂಬಾರಿ ಹೊತ್ತು ಓಡಿದ್ದ ಸೋಮಣ್ಣ ಆನೆಯ ಮಾವುತ, ಕಾವಾಡಿ ಪರಾಗಿದ್ದೆ ಪವಾಡ. ಇನ್ನು, ಆನೆ ನಿಯಂತ್ರಣ ತಪ್ಪಿ ಓಡಿದ್ದನ್ನು ಕಂಡು ಅರಣ್ಯ ಇಲಾಖೆ ಸಿಬ್ಬಂದಿ ಕಣ್ಣೀರು ಹಾಕಿದರು. (ಶಿವಮೊಗ್ಗ ಲೈವ್.ಕಾಂ | ಮುಂದಿನ 5 ಪ್ಯಾರಾಗಳು ಕೆಳಗಿವೆ)
ಶಿವಮೊಗ್ಗ ದಸರಾದ ಜಂಬೂ ಸವಾರಿ ವೇಳೆ ಸೋಮಣ್ಣ ಆನೆ ಅಂಬಾರ ಸಹಿತ ದಿಕ್ಕಾಪಾಲಾಗಿ ಓಡಿತ್ತು. ಇದನ್ನು ಕಂಡು ಸಾರ್ವಜನಿಕರು ಗಲಿಬಿಲಿಗೊಂಡರು. ಆದರೆ ಆನೆ ಮಾವುತ ಮತ್ತು ಮತ್ತು ಅಂಬಾರಿ ಅತ್ತಿತ್ತ ವಾಲದಿರಲಿ ಎಂದು ಅಂಬಾರಿಯ ಹಿಂಬದಿ ಆನೆಯ ಮೇಲೆ ಕುಳಿತಿದ್ದ ಸಕ್ರೆಬೈಲು ಬಿಡಾರದ ಸಿಬ್ಬಂದಿ ಪವಾಡ ರೂಪದಲ್ಲಿ ಪಾರಾಗಿದ್ದಾರೆ.

ಕೋಟೆ ರಸ್ತೆಯಲ್ಲಿ ಆನೆ ಓಡುತ್ತಿದ್ದಾಗ ಮಾವುತ ಆನೆಯನ್ನು ನಿಯಂತ್ರಣಕ್ಕೆ ತರಲು ಹರಸಾಹಸ ಪಟ್ಟರು. ಆದರೆ ಆನೆ ಸಿಕ್ಕ ಸಿಕ್ಕಲೆಲ್ಲ ನುಗ್ಗುತ್ತಿದ್ದಾಗ ಮಾವುತ ಆಯಾತಪ್ಪಿ ಜಿಗಿದಿದ್ದಾರೆ. ಇತ್ತ ವಾಸವಿ ಶಾಲೆ ಎದುರಿನ ಖಾಲಿ ಜಾಗದಲ್ಲಿ ಕಟ್ಟಡಗಳ ಮಧ್ಯೆ ಆನೆ ಸಿಲುಕಿದ್ದಾಗ ಅಂಬಾರಿಯ ಹಿಂಬದಿಯಲ್ಲಿದ್ದ ವ್ಯಕ್ತಿ ಕಟ್ಟವೊಂದರ ಮೇಲಕ್ಕೆ ಹತ್ತಿದ್ದ ಪಾರಾದರು. ಇನ್ನೊಂದೆಡೆ ಕಾರ್ಯಾಚರಣೆ ವೇಳೆ ಬಹದ್ದೂರ್ ಆನೆಯ ಮಾವುತ ಕೆಳಗೆ ಬಿದ್ದು ಅಸ್ವಸ್ಥರಾಗಿದ್ದರು. ಅವರನ್ನು ಮೆಗ್ಗಾನ್ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿ ಕರೆತರಲಾಗಿತ್ತು.
ಕಣ್ಣೀರಾದ ಸಿಬ್ಬಂದಿ
ಇನ್ನು, ಅಂಬಾರಿ ಹೊತ್ತ ಸೋಮಣ್ಣ ಆನೆ ದಿಕ್ಕಾಪಾಲಾಗಿ ಓಡುತ್ತಿದ್ದಾಗ ನಿಯಂತ್ರಿಸಲು ಅರಣ್ಯ ಇಲಾಖೆ ಸಿಬ್ಬಂದಿ ಹರಸಾಹಸ ಪಟ್ಟರು. ಅಂಬಾರಿ ಕೆಳಗೆ ಬೀಳುತ್ತಿದ್ದಂತೆ ಅರಣ್ಯ ಇಲಾಖೆ ಮತ್ತು ಸಕ್ರೆಬೈಲು ಬಿಡಾರದ ಸಿಬ್ಬಂದಿ ದಿಗ್ಭ್ರಮೆಗೊಂಡರು. ಕೆಲವು ಸಿಬ್ಬಂದಿ ನಡುರಸ್ತೆಯಲ್ಲೇ ಕಣ್ಣೀರು ಹಾಕಿದರು.