ಶಿವಮೊಗ್ಗ: ತಾಲೂಕಿನ ಹರಕೆರೆ ಗ್ರಾಮದ ಜಮೀನಿನಲ್ಲಿ ಎರಡು ಬಾರಿ ಶೆಡ್‌ನ ಬೀಗ ಮುರಿದು ಎರಡು ನೀರೆತ್ತುವ ಮೋಟಾರ್‌ಗಳನ್ನು ಕಳವು ಮಾಡಲಾಗಿದೆ. (ಈ ಸುದ್ದಿಯನ್ನು ಇನ್ನು 42 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)
ಶಿವಮೊಗ್ಗದ ವಿನೋಬನಗರದ ಸಾಗರ್ ಅವರು ಹರಕೆರೆ ಗ್ರಾಮದಲ್ಲಿ ಭತ್ತದ ಗದ್ದೆ ಹೊಂದಿದ್ದು, ಕಾನೆಹಳ್ಳದ ನೀರನ್ನು ಜಮೀನಿಗೆ ಹಾಯಿಸಲು ಹಳ್ಳದ ಪಕ್ಕದಲ್ಲಿ ಶೆಡ್ ನಿರ್ಮಿಸಿ 2 ನೀರೆತ್ತುವ ಮೋಟಾರ್‌ಗಳನ್ನು ಅಳವಡಿಸಿದ್ದರು. ಅಕ್ಟೋಬರ್ 5ರ ನಡುರಾತ್ರಿ ಶೆಡ್‌ನ ಬೀಗ ಒಡೆದು ₹10,000 ಮೌಲ್ಯದ 2 ಹೆಚ್‌ಪಿ ಮೋಟಾರ್ ಕಳ್ಳತನ ಮಾಡಲಾಗಿತ್ತು. ಬೆಳಿಗ್ಗೆ ಗದ್ದೆಗೆ ಬಂದಾಗ ಮೋಟರ್ ಕಳ್ಳತನ ಆಗಿರುವುದು ಗಮನಕ್ಕೆ ಬಂದಿತ್ತು.ಅಕ್ಟೋಬರ್ 22 ರ ಮಧ್ಯಾಹ್ನ ಗದ್ದೆಗೆ ಬಂದು ನೋಡಿದಾಗ ಶೆಡ್‌ನ ಬೀಗ ಮುರಿದು ಅದರಲ್ಲಿದ್ದ ₹25,000 ಮೌಲ್ಯದ 5 ಹೆಚ್‌ಪಿ ಮೋಟಾರ್ ಕಳ್ಳತನ ಮಾಡಲಾಗಿತ್ತು ಎಂದು ಆರೋಪಿಸಲಾಗಿದೆ.

ಗದ್ದೆಯಲ್ಲಿ ಎರಡು ಬಾರಿ ಶೆಡ್‌ನ ಬೀಗ ಒಡೆದು ಒಟ್ಟು ₹35,000 ಮೌಲ್ಯದ ಎರಡು ಮೋಟರ್ ಕಳ್ಳತನ ಮಾಡಲಾಗಿದೆ ಎಂದು ಗದ್ದೆ ಮಾಲೀಕ ಸಾಗರ್ ದೂರು ನೀಡಿದ್ದಾರೆ. ಘಟನೆ ಸಂಬಂಧ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.