ಸಾಗರ: ವಾಹನ ಡಿಕ್ಕಿ ಹೊಡೆದು ಎರಡು ಕಾಲುಗಳನ್ನು ಕಳೆದುಕಂಡು ತೀವ್ರ ಗಾಯಗೊಂಡಿದ್ದ ಕಾಡೆಮ್ಮೆ ಮೃತಪಟ್ಟಿದೆ. ತಾಲ್ಲೂಕಿನ ಕಾಸ್ಪಾಡಿ ಗ್ರಾಮ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾನುವಾರ ಬೆಳಿಗ್ಗೆ ಘಟನೆ ಸಂಭವಿಸಿದೆ. (ಈ ಸುದ್ದಿಯನ್ನು ಇನ್ನು 39 ಸೆಕೆಂಡ್ಗಳಲ್ಲಿ ಓದಿ ಮುಗಿಸಬಹುದು)
ಭಾರಿ ವಾಹನ ಡಿಕ್ಕಿಯಾಗಿ ಕಾಲುಗಳಿಗೆ ಎರಡು ಕಾಲುಗಳಿಗೆ ತೀವ್ರ ಪೆಟ್ಟಾಗಿದ್ದ ಕಾಡೆಮ್ಮೆ ರಸ್ತೆ ಬದಿಯಲ್ಲಿ ನರಳಾಡುತ್ತಿತ್ತು. ಸ್ಥಳೀಯರು ಕೂಡಲೇ ಅರಣ್ಯ ಇಲಾಖೆ ಸಿಬ್ಬಂದಿಗೆ ವಿಷಯ ತಲುಪಿಸಿದರೂ ಚಿಕಿತ್ಸೆಗೆ ವೈದ್ಯರು ಬರಲೇ ಇಲ್ಲ.

ಬೆಳಿಗೆ ಅಪಘಾತವಾಗಿದ್ದು, ಸಂಜೆಯಾದರೂ ಚಿಕಿತ್ಸೆ ಸಿಗಲೇ ಇಲ್ಲ. ಕಾಡೆಮ್ಮೆಗೆ ಚಿಕಿತ್ಸೆ ಕೊಡಿಸಲು ಜಿಲ್ಲೆಯಲ್ಲಿ ಅರಿವಳಿಕೆ ತಜ್ಞರು ಹಾಗೂ ಪಶುವೈದ್ಯರು ಲಭ್ಯವಿರದ ಕಾರಣ ಚಿತ್ರದುರ್ಗದಿಂದ ಕರೆಸಲಾಗಿತ್ತು. ಆದರೆ ಅವರು ಸ್ಥಳಕ್ಕೆ ಆಗಮಿಸುವ ಮುನ್ನ ಕಾಡೆಮ್ಮೆ ಸಾವಿಗೀಡಾಗಿದೆ.
‘ಅಪಘಾತ ಸಂಭವಿಸಿ 10 ಗಂಟೆ ಕಳೆದರೂ ಕಾಡೆಮ್ಮೆಗೆ ಚಿಕಿತ್ಸೆ ಕೊಡಿಸಲು ಅರಣ್ಯ ಇಲಾಖೆಗೆ ಸಾಧ್ಯವಾಗದಿರುವುದು ಖಂಡನೀಯ. ವನ್ಯಜೀವಿಗಳ ಬಗ್ಗೆ ಅರಣ್ಯ ಇಲಾಖೆಗೆ ಕನಿಷ್ಠ ಕಾಳಜಿ ಇದ್ದಿದ್ದರೆ ಇಂತಹ ನಿರ್ಲಕ್ಷ್ಯದ ಘಟನೆ ಸಂಭವಿಸುತ್ತಿರಲಿಲ್ಲ’
– ಅಖಿಲೇಶ್ ಚಿಪ್ಪಳಿ, ಪರಿಸರ ಕಾರ್ಯಕರ್ತ