ಶಿವಮೊಗ್ಗ ಲೈವ್
ಶಿವಮೊಗ್ಗ: ನಗರದ ಬಿ.ಹೆಚ್. ರಸ್ತೆಯಲ್ಲಿರುವ ಸರ್ಕಾರಿ ಸೈನ್ಸ್ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ನಿಲ್ಲಿಸಲಾಗಿದ್ದ ಬಜಾಜ್ ಪಲ್ಸರ್ ಬೈಕ್ ನಾಪತ್ತೆಯಾಗಿದೆ. ಆರ್‌ಎಂಎಲ್ ನಗರದ ಅದಿಲ್ ಪಾಷಾ ಎಂಬುವವರ ಬೈಕ್ ಕಳುವಾಗಿದೆ. (ಈ ಸುದ್ದಿಯನ್ನು ಇನ್ನು 24 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)
ಅದಿಲ್ ಪಾಷಾ ಅವರು ಅಕ್ಟೋಬರ್ 18ರ ರಾತ್ರಿ ಪಲ್ಸರ್ ಬೈಕ್ ಅನ್ನು ಸೈನ್ಸ್ ಮೈದಾನದಲ್ಲಿ ನಿಲ್ಲಿಸಿ ಕುರಿ ಕಾಳಗ ಕಾರ್ಯಕ್ರಮ ವೀಕ್ಷಿಸಲು ತೆರಳಿದ್ದರು. ಕಾರ್ಯಕ್ರಮ ಮುಗಿಸಿ ಹಿಂತಿರುಗಿದಾಗ ಸ್ಥಳದಲ್ಲಿ ಬೈಕ್ ಇರಲಿಲ್ಲ. ಎಲ್ಲೆಡೆ ಹುಡುಕಿದರು ಬೈಕ್ ಸಿಗದ ಹಿನ್ನೆಲೆ ದೂರು ನೀಡಿದ್ದಾರೆ. ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
