ತೀರ್ಥಹಳ್ಳಿಯಲ್ಲಿ ರಾತ್ರೋರಾತ್ರಿ 58 ಮೀಟರ್‌ ವೈರ್‌ ನಾಪತ್ತೆ, ದೂರು ನೀಡಿದ ಪಿಡಿಒ, ಏನಿದು ವೈರ್?

ತೀರ್ಥಹಳ್ಳಿ: ತಾಲ್ಲೂಕಿನ ಶೇಡ್ಗಾರ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೂರು ಗ್ರಾಮಗಳಲ್ಲಿ ಸಾರ್ವಜನಿಕ ಕುಡಿಯುವ ನೀರಿನ ಕೊಳವೆ ಬಾವಿಗಳಿಗೆ ಅಳವಡಿಸಲಾಗಿದ್ದ ಮೋಟಾರ್ ಕೇಬಲ್ ವೈರ್‌ ಕಳ್ಳತನವಾಗಿದೆ. (ಈ ಸುದ್ದಿಯನ್ನು ಇನ್ನು 28 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)

ಶೇಡ್ಗಾರ್ ಪಂಚಾಯಿತಿ ವ್ಯಾಪ್ತಿಯ ಮೃಗವಧೆ ಗ್ರಾಮದ ಆನಗೂಡು, ಕೊಳಗಿ ಹಾಗೂ ಬೆಳ್ಳಂಗಿ ಗ್ರಾಮದ ಕೋರಣಕಟ್ಟೆಯಲ್ಲಿರುವ ಕೊಳವೆ ಬಾವಿಗಳ ಮೋಟಾರ್‌ಗಳಿಗೆ ಸಂಪರ್ಕ ಕಲ್ಪಿಸಲಾಗಿದ್ದ ವೈರ್‌ಗಳು ಕಳ್ಳತನವಾಗಿವೆ. ಕಳ್ಳರು 58 ಮೀಟರ್ ಉದ್ದದ ಕೇಬಲ್ ವೈರ್‌ಗಳನ್ನು ಕದ್ದೊಯ್ದಿದ್ದಾರೆ. ಕಳುವಾದ ವೈರ್‌ನ ಅಂದಾಜು ಮೌಲ್ಯ ₹6,960 ಎಂದು ದೂರಿನಲ್ಲಿ ಆರೋಪಿಸಲಾಗಿದೆ.

Maluru-Police-Station-in-Thirthahalli-taluk.webp

ಈ ಕುರಿತು ಶೇಡ್ಗಾರ್ ಗ್ರಾಮ ಪಂಚಾಯಿತಿ ಪಿಡಿಒ ಶ್ರೀನಿವಾಸ ನಾಯಕ್ ಅವರು ಮಾಳೂರು ಪೊಲೀಸ್ ಠಾಣೆಗೆ ದೂರು ನೀಡಿದ್ದು, ತನಿಖೆ ನಡೆಯುತ್ತಿದೆ.