ತೀರ್ಥಹಳ್ಳಿಯಲ್ಲಿ ತುಂಗಾ ನದಿಯಲ್ಲಿ ದಾವಣಗೆರೆಯ ಇಬ್ಬರು ಯುವಕರು ನಾಪತ್ತೆ ಶಂಕೆ

ತೀರ್ಥಹಳ್ಳಿ: ಪಟ್ಟಣದ ಹೊಸ ಸೇತುವೆ ಬಳಿ ಸೋಮವಾರ ಸಂಜೆ ತುಂಗಾನದಿಯಲ್ಲಿ ಸ್ನಾನಕ್ಕೆ ಹೋಗಿದ್ದ ಇಬ್ಬರು ಯುವಕರು ನಾಪತ್ತೆಯಾಗಿದ್ದಾರೆ ಎಂದು ಶಂಕಿಸಲಾಗಿದೆ. 18 ವರ್ಷ ವಯಸ್ಸಿನ ಕಟ್ಟಡ ಕಾರ್ಮಿಕರಾದ ಶಿವು ಮತ್ತು ರುದ್ರೇಶ್ ಕಾಣೆಯಾದವರು ಎಂದು ಹೇಳಲಾಗುತ್ತಿದೆ. (ಈ ಸುದ್ದಿಯನ್ನು ಇನ್ನು 22 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)

ದಾವಣಗೆರೆ ಮೂಲದ ಇವರು ಕಟ್ಟಡ ನಿರ್ಮಾಣ ಕಾರ್ಯಕ್ಕೆ ಆಗಮಿಸಿದ್ದರು. ಕೆಲಸ ಮುಗಿಸಿ ಸ್ನಾನಕ್ಕೆಂದು ನದಿಗೆ ಇಳಿದಿದ್ದರು ಎನ್ನಲಾಗಿದೆ. ಯುವಕರು ಬಂದಿದ್ದ ಬೈಕ್ ಸೇತುವೆ ಮೇಲಿದೆ. ಸ್ಥಳಕ್ಕೆ ಪೋಲಿಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಧಾವಿಸಿದ್ದು ಶೋಧ ನಡೆಸಿದರು.

THIRTHAHALLI-NEWS-GRAPHICS-BY-SHIVAMOGGA-LIVE