ಶಿವಮೊಗ್ಗ: ಮನೆಯೊಂದರ ಬೀಗ ಮುರಿದು ₹2.35 ಲಕ್ಷ ಮೌಲ್ಯದ ಚಿನ್ನ, ಬೆಳ್ಳಿಯ ಆಭರಣ ಹಾಗೂ ನಗದು ಕಳ್ಳತನ ಮಾಡಲಾಗಿದೆ. ನಗರದ ಗೋಪಿಶೆಟ್ಟಿಕೊಪ್ಪ ಸಮೀಪದ ಚಾಲುಕ್ಯನಗರ ಮುಖ್ಯರಸ್ತೆಯಲ್ಲಿರುವ ವಿಜಯಕುಮಾರ್ ಎಸ್.ಆರ್. ಎಂಬುವವರ ಮನೆಯಲ್ಲಿ ಘಟನೆ ನಡೆದಿದೆ. (ಈ ಸುದ್ದಿಯನ್ನು ಇನ್ನು 43 ಸೆಕೆಂಡ್ಗಳಲ್ಲಿ ಓದಿ ಮುಗಿಸಬಹುದು)
ವಿಜಯಕುಮಾರ್ ಅವರು ಪತ್ನಿ ಮತ್ತು ತಾಯಿ ಜೊತೆಗೆ ಚಿತ್ರದುರ್ಗ ದೇವಾಲಯಕ್ಕೆ ತೆರಳಿದ್ದರು. ಮಗಳು ಕಾಲೇಜಿಗೆ ತೆರಳಿದ್ದಳು. ಸಂಜೆ ಮಗಳು ಕಾಲೇಜಿನಿಂದ ಮನೆಗೆ ಹಿಂತಿರುಗಿದಾಗ ಮನೆಯ ಬಾಗಿಲಿನ ಬೀಗ ಒಡೆದಿರುವುದು ಕಂಡುಬಂದಿದೆ. ಕೂಡಲೆ ಪೋಷಕರಿಗೆ ಫೋನ್ ಮಾಡಿ ವಿಷಯ ತಿಳಿಸಿದ್ದಳು.

ಚಿನ್ನ, ಬೆಳ್ಳಿ, ನಗದು ಕಳ್ಳತನ
ವಿಜಯಕುಮಾರ್ ಅವರು ಮನೆಗೆ ಹಿಂತಿರುಗಿ ಪರಿಶೀಲಿಸಿದಾಗ, ಕೊಠಡಿಯಲ್ಲಿದ್ದ ಬೀರುಗಳನ್ನು ಆಯುಧದಿಂದ ಮೀಟಿ ತೆಗೆದು ಅದರಲ್ಲಿದ್ದ 15.5 ಗ್ರಾಂ ತೂಕದ ಚಿನ್ನದ ಜುಮುಕಿ ಹಾಗೂ ಅಂದಾಜು 2 ಚೈನ್ಗಳು, ದೇವರ ಮನೆ ಹಾಗೂ ಬೀರುಗಳಲ್ಲಿದ್ದ 500 ಗ್ರಾಂ ತೂಕದ ಬೆಳ್ಳಿಯ ವಸ್ತುಗಳು ಹಾಗೂ ₹10,000 ನಗದು ಕಳ್ಳತನವಾಗತ್ತು. ಕಳ್ಳತನವಾಗಿರುವ ವಸ್ತುಗಳ ಒಟ್ಟು ಮೌಲ್ಯ ₹2,35,000 ಎಂದು ಅಂದಾಜಿಸಲಾಗಿದೆ. ಘಟನೆ ಸಂಬಂಧ ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.