ಶಿವಮೊಗ್ಗ ಲೈವ್
ಶಿವಮೊಗ್ಗ: ಡಾ. ಬಾಬು ಜಗಜೀವನ ರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದ (ಲಿಡ್ಕರ್) ವತಿಯಿಂದ ವಿಜಯದಶಮಿ ಹಾಗೂ ದೀಪಾವಳಿ ಹಬ್ಬಗಳ ಪ್ರಯುಕ್ತ ಅಪ್ಪಟ ಚರ್ಮದ ಉತ್ಪನ್ನಗಳ ಮೇಲೆ ಶೇ.20 ರವರೆಗೆ ರಿಯಾಯಿತಿ ಮಾರಾಟ ಆಯೋಜಿಸಲಾಗಿದೆ. (ಈ ಸುದ್ದಿಯನ್ನು ಇನ್ನು 24 ಸೆಕೆಂಡ್ಗಳಲ್ಲಿ ಓದಿ ಮುಗಿಸಬಹುದು)
ನಗರದ ನೆಹರು ರಸ್ತೆಯಲ್ಲಿರುವ ಬಸವಸದನ ಕಾಂಪ್ಲೆಕ್ಸ್ನಲ್ಲಿನ ಲಿಡ್ಕರ್ ಮಾರಾಟ ಮಳಿಗೆಯಲ್ಲಿ ನವೆಂಬರ್ 8 ರವರೆಗೆ ಈ ವಿಶೇಷ ರಿಯಾಯಿತಿ ಮಾರಾಟ ಲಭ್ಯವಿರಲಿದೆ. ಸಾರ್ವಜನಿಕರು ಈ ಅವಕಾಶದ ಸದುಪಯೋಗ ಪಡೆದುಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 8904510699 ಅನ್ನು ಸಂಪರ್ಕಿಸಬಹುದು ಎಂದು ಲಿಡ್ಕರ್ ಸಂಸ್ಥೆಯ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
