ಶಿವಮೊಗ್ಗದಲ್ಲಿ ವಿಜ್ಞಾನ ನಟಕ ಸ್ಪರ್ಧೆ, ಎಲ್ಲಿ? ಯಾರೆಲ್ಲ ಭಾಗವಹಿಸಿದ್ದರು?

ಶಿವಮೊಗ್ಗ: ವಿಜ್ಞಾನ ಬೋಧನೆಯು ಕೇವಲ ಪಠ್ಯಪುಸ್ತಕದ ಪಾಠಗಳನ್ನು ಯಾಂತ್ರಿಕವಾಗಿ ಕಲಿಸುವ ಪ್ರಕ್ರಿಯೆಯಾಗಬಾರದು. ಮಕ್ಕಳಲ್ಲಿ ಪ್ರಶ್ನಿಸುವ ಮನೋಭಾವ, ಕುತೂಹಲ ಮತ್ತು ಅನ್ವೇಷಣಾ ಪ್ರವೃತ್ತಿಯನ್ನು ಜಾಗೃತಗೊಳಿಸುವ ಪಠ್ಯಕ್ರಮಗಳು ಇಂದಿನ ಅಗತ್ಯವಾಗಿದೆ ಎಂದು ರಾಷ್ಟ್ರೀಯ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಎನ್.ಕೆ. ಚಿದಾನಂದ ಅಭಿಪ್ರಾಯಪಟ್ಟರು. (ಈ ಸುದ್ದಿಯನ್ನು ಇನ್ನು 54 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)

ನಗರದ ಜೆಪಿಎನ್ ಪ್ರೌಢಶಾಲೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿಗಳ ಕಚೇರಿ, ಶಾಲಾ ಶಿಕ್ಷಣ ಇಲಾಖೆ ಹಾಗೂ ರಾಷ್ಟ್ರೀಯ ಶಿಕ್ಷಣ ಸಮಿತಿಯ ಸಹಯೋಗದಲ್ಲಿ ಆಯೋಜಿಸಿದ್ದ ತಾಲೂಕು ಮಟ್ಟದ ವಿಜ್ಞಾನ ನಾಟಕ ಸ್ಪರ್ಧೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

science-drama-competition.webp

ದ್ಯುತಿ ಸಂಶ್ಲೇಷಣೆ, ಮಸೂರಗಳ ಕಾರ್ಯವಿಧಾನ ಸೇರಿದಂತೆ ವಿಜ್ಞಾನದ ಸಂಕೀರ್ಣ ಪರಿಕಲ್ಪನೆಗಳನ್ನು ರಂಗಭೂಮಿಯ ಮೂಲಕ ಸರಳವಾಗಿ ಮನದಟ್ಟು ಮಾಡಿಸಬಹುದು. ಇಂತಹ ಪ್ರಯೋಗಗಳು ವಿಜ್ಞಾನವನ್ನು ಮಕ್ಕಳಿಗೆ ಆಪ್ತವಾಗಿಸುವುದರ ಜೊತೆಗೆ ಕಲಿಕೆಯನ್ನು ಆಸಕ್ತಿದಾಯಕವಾಗಿಸುತ್ತವೆ. ಆಧುನಿಕ ವಿಜ್ಞಾನ ಮತ್ತು ತಂತ್ರಜ್ಞಾನದ ಬೆಳವಣಿಗೆಗಳಿಗೆ ಪೂರಕವಾಗಿ ಮಕ್ಕಳಿಗಾಗಿ ಇನ್ನಷ್ಟು ವಿಜ್ಞಾನ ನಾಟಕಗಳು ರಚನೆಯಾಗಬೇಕಿದೆ ಎಂದು ಅವರು ಹೇಳಿದರು.

ವಿದ್ಯಾರ್ಥಿಗಳು ವೈಜ್ಞಾನಿಕ ಮನೋಭಾವ, ಸೃಜನಶೀಲತೆ ಹಾಗೂ ಸಂಶೋಧನಾ ಪ್ರವೃತ್ತಿಯನ್ನು ಮೈಗೂಡಿಸಿಕೊಂಡು ಸಮಾಜದ ಪ್ರಗತಿಗೆ ಕೊಡುಗೆ ನೀಡಬೇಕು.

– ಸಿ.ಎಂ. ನೃಪತುಂಗ, ರಾಷ್ಟ್ರೀಯ ಶಿಕ್ಷಣ ಸಮಿತಿಯ ಸಾರ್ವಜನಿಕ ಸಂಪರ್ಕಾಧಿಕಾರಿ

ಶಾಲೆಯ ಮುಖ್ಯೋಪಾಧ್ಯಾಯ ಇಮ್ತಿಯಾಜ್ ಅಹಮದ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಬ್ಲಾಕ್ ಸಂಪನ್ಮೂಲ ಕೇಂದ್ರದ ಸಮನ್ವಯಾಧಿಕಾರಿ ಶಿವಪ್ಪ ಸಂಗಣ್ಣನವರ್, ಅಧಿಕಾರಿಗಳಾದ ಧನಂಜಯ ಎನ್., ರಾಜಪ್ಪ, ಶಶಿರೇಖಾ ಹಾಗೂ ತೀರ್ಪುಗಾರರಾಗಿ ಉಪನ್ಯಾಸಕರಾದ ಚೈತ್ರ, ಗೌರಿಶಂಕರ್ ಉಪಸ್ಥಿತರಿದ್ದರು.