ಶಿವಮೊಗ್ಗ: ‘ಹಾಪ್‌ಕಾಮ್ಸ್ ವತಿಯಿಂದ ‘ರೈತ ಮಿತ್ರ’ ಹಾಗೂ ‘ರೈತ ಸ್ನೇಹಿ’ ಹೆಸರಿನಲ್ಲಿ ಸಾವಯವ ಗೊಬ್ಬರ ಮಾರಾಟ ಮಾಡಲಾಗುತ್ತಿದೆ. ಕಳೆದ ಆರು–ಏಳು ತಿಂಗಳಲ್ಲಿ 40 ಕೆ.ಜಿ. ತೂಕದ ಸುಮಾರು 50ರಿಂದ 60 ಸಾವಿರ ಚೀಲಗಳು ಮಾರಾಟವಾಗಿವೆʼ ಎಂದು ಹಾಪ್‌ಕಾಮ್ಸ್ ಅಧ್ಯಕ್ಷ ವಿಜಯ್ ಕುಮಾರ್ ತಿಳಿಸಿದರು. (ಈ ಸುದ್ದಿಯನ್ನು ಇನ್ನು 42 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)
ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಳೆ ಕೊರತೆಯಿಂದ ಮಾರಾಟದ ಮೇಲೆ ಸ್ವಲ್ಪ ಪರಿಣಾಮ ಬೀರಿದೆ. ರೈತರಿಂದ ಗೊಬ್ಬರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಖರೀದಿಸಿದವರು ಮತ್ತೆ ಪಡೆಯುತ್ತಿದ್ದಾರೆ ಎಂದು ತಿಳಿಸಿದರು.

‘ಹೊಳಲ್ಕೆರೆ ಸಮೀಪದ ಘಟಕದಲ್ಲಿ ಗೊಬ್ಬರ ತಯಾರಿಸಲಾಗುತ್ತಿದೆ. 40 ಕೆ.ಜಿ. ಚೀಲಕ್ಕೆ ₹370 ದರ ನಿಗದಿಪಡಿಸಿದ್ದು, ಶಿವಮೊಗ್ಗ ಮತ್ತು ಭದ್ರಾವತಿ ಭಾಗದ ರೈತರಿಗೆ ಸಾಗಣೆ ವೆಚ್ಚವಿಲ್ಲದೆ ವಿತರಿಸಲಾಗುತ್ತಿದೆ. ಹೆಚ್ಚಿನ ಲಾಭ ಗಳಿಸುವುದಕ್ಕಿಂತ ರೈತರಿಗೆ ಕಡಿಮೆ ದರದಲ್ಲಿ ಗುಣಮಟ್ಟದ ಗೊಬ್ಬರ ಒದಗಿಸುವುದಕ್ಕೆ ಆದ್ಯತೆ ನೀಡಲಾಗಿದೆ’ ಎಂದರು.
‘ಚಿಕ್ಕಮಗಳೂರು, ಕೊಪ್ಪ ಸೇರಿದಂತೆ ಇತರ ಜಿಲ್ಲೆಗಳಲ್ಲಿಯೂ ಗೊಬ್ಬರಕ್ಕೆ ಬೇಡಿಕೆ ವ್ಯಕ್ತವಾಗುತ್ತಿದೆ. ಮಳೆ ಅನುಕೂಲಕರವಾಗಿದ್ದರೆ ಗೊಬ್ಬರದ ಮಾರಾಟ ಮತ್ತಷ್ಟು ಹೆಚ್ಚುವ ನಿರೀಕ್ಷೆ ಇದೆ’ ಎಂದು ಹೇಳಿದರು. ಇಲ್ಲಿದೆ ವಿಡಿಯೋ