ಶಿವಮೊಗ್ಗ ಲೈವ್
ಸೊರಬ: ತಾಲೂಕಿನ ಸೂರಣಗಿ ಗ್ರಾಮದಲ್ಲಿ ತಡರಾತ್ರಿ ಕುರಿ ಶೆಡ್ಗೆ ಬೆಂಕಿ ಬಿದ್ದು 300ಕ್ಕೂ ಹೆಚ್ಚು ಕುರಿ ಹಾಗೂ ಕೋಳಿ ಮರಿಗಳು ಸಜೀವವಾಗಿ ದಹನಗೊಂಡಿವೆ. ವಿದ್ಯುತ್ ಶಾರ್ಟ್ ಸರ್ಕ್ಯುಟ್ನಿಂದ ಘಟನೆ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ. (ಈ ಸುದ್ದಿಯನ್ನು ಇನ್ನು 24 ಸೆಕೆಂಡ್ಗಳಲ್ಲಿ ಓದಿ ಮುಗಿಸಬಹುದು)
ಗ್ರಾಮದ ರಾಮಣ್ಣ ಎಂಬುವವರಿಗೆ ಸೇರಿದ ಕುರಿ ಶೆಡ್ನಲ್ಲಿ ದುರ್ಘಟನೆ ಸಂಭವಿಸಿದೆ. ತಡರಾತ್ರಿ ಶೆಡ್ನಲ್ಲಿ ಬೆಂಕಿ ಕಾಣಿಸಿಕೊಂಡು ಕುರಿಗಳು ಮತ್ತು ಕೋಳಿಗಳು ಸಜೀವ ದಹನಗೊಂಡಿವೆ. ಇನ್ನು, ಶೆಡ್ಗೆ ಬೆಂಕಿ ತಗುಲಿದ ರೀತಿಯ ಬಗ್ಗೆ ಅನುಮಾನ ವ್ಯಕ್ತವಾಗಿದ್ದು, ಈ ಕುರಿತು ಕುರಿ ಮಾಲೀಕ ರಾಮಣ್ಣ ಆನವಟ್ಟಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
