ಬಾಳೇಬೈಲು ಹೊಸ ಸೇತುವೆ ಬಳಿ ತುಂಗಾ ನದಿಯಲ್ಲಿ ನಾಪತ್ತೆಯಾಗಿದ್ದ ಯುವಕರು ಶವವಾಗಿ ಪತ್ತೆ

ತೀರ್ಥಹಳ್ಳಿ: ಇಲ್ಲಿನ ಬಾಳೇಬೈಲಿನ ಹೊಸ ಸೇತುವೆ ಬಳಿ ತುಂಗಾ ನದಿಯಲ್ಲಿ ಈಜಲು ಹೋಗಿ ನಾಪತ್ತೆಯಾಗಿದ್ದ ಇಬ್ಬರು ಯುವಕರು ಶವವಾಗಿ ಪತ್ತೆಯಾಗಿದ್ದಾರೆ. ಇಂದು ಬೆಳಿಗ್ಗೆ ಇಬ್ಬರ ಮೃತದೇಹಗಳು ಪತ್ತೆಯಾಗಿವೆ. (ಈ ಸುದ್ದಿಯನ್ನು ಇನ್ನು 37 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)

ಹಾವೇರಿ ಜಿಲ್ಲೆಯ ರಾಣೆಬೆನ್ನೂರು ಸಮೀಪದ ಮೆಟ್ಲೇರಿಯ ಶಿವು (24) ಹಾಗೂ ದಾವಣಗೆರೆ ಜಿಲ್ಲೆಯ ಬಲ್ಲೂರು ಗ್ರಾಮದ ರುದ್ರೇಶ್ (22) ಶವವಾಗಿ ಪತ್ತೆಯಾಗಿದ್ದಾರೆ. ಕೂಲಿ ಕೆಲಸಕ್ಕಾಗಿ ತೀರ್ಥಹಳ್ಳಿಗೆ ಬಂದಿದ್ದ ಇವರಿಬ್ಬರೂ ಸೋಮವಾರ ತುಂಗಾ ನದಿಗೆ ಈಜಲು ತೆರಳಿದ್ದಾಗ ನದಿಯ ಸೆಳೆತಕ್ಕೆ ಸಿಲುಕಿ ನಾಪತ್ತೆಯಾಗಿದ್ದರು.

Thirthahalli-Two-Youth-Bodies-found-in-Tunga-River

ಈಶ್ವರ್ ಮಲ್ಪೆ ತಂಡದಿಂದ ಶೋಧ

ಯುವಕರು ನಾಪತ್ತೆಯಾದ ತಕ್ಷಣದಿಂದಲೇ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಈಶ್ವರ್ ಮಲ್ಪೆ ನೇತೃತ್ವದ ತಂಡ ನದಿಯಲ್ಲಿ ಶೋಧ ಕಾರ್ಯಾಚರಣೆ ಕೈಗೊಂಡಿತ್ತು. ಸತತ ಎರಡು ದಿನಗಳ ಕಾರ್ಯಾಚರಣೆಯ ನಂತರ ಬಾಳೇಬೈಲು ಹೊಸ ಸೇತುವೆ ಸಮೀಪ ನದಿಯಲ್ಲಿ ಇಬ್ಬರ ಶವಗಳು ಸಿಕ್ಕಿವೆ. ತೀರ್ಥಹಳ್ಳಿ ಟೌನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದ್ದು, ತನಿಖೆ ಮುಂದುವರೆದಿದೆ.