ನಡು ರಸ್ತೆಯಲ್ಲೇ ಮಲಗಿದ ರೈತರು, ಎರಡು ಗಂಟೆ ವಾಹನ ಸಂಚಾರ ಸ್ತಬ್ಧ

ಹೊಳೆಹೊನ್ನೂರು: ಭದ್ರಾ ಜಲಾಶಯದಿಂದ ಮೇಲ್ದಂಡೆ ಯೋಜನೆ ಕಾಲುವೆಗೆ ನೀರು ಹರಿಸುವುದನ್ನು ವಿರೋಧಿಸಿ ರೈತಸಂಘದ ಕಾರ್ಯಕರ್ತರು ಭದ್ರಾವತಿ ತಾಲೂಕಿನ ವಿವಿಧೆಡೆ ರಸ್ತೆತಡೆ ನಡೆಸಿದರು. (ಈ ಸುದ್ದಿಯನ್ನು ಇನ್ನು 56 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)

ಭದ್ರಾವತಿ ತಾಲೂಕು ಕಲ್ಲಿಹಾಳ್ ವೃತ್ತ, ಮಾರಶೆಟ್ಟಿಹಳ್ಳಿ ವೃತ್ತ, ಅರಹತೊಳಲು. ಕೈಮರ ಎನ್.ಡಿ.ಸುಂದರೇಶ್ ವೃತ್ತ, ಅಂತರಗಂಗೆ, ಭದ್ರಾ ಜಲಾಶಯ ಮುಂಭಾಗದಲ್ಲಿ ರಸ್ತೆ ತಡೆ ನಡೆಸಿದರು.

Farmers-Protest-against-release-of-Bhadra-Dam-water-to-canal at kallihal

ರೈತರ ಆಗ್ರಹವೇನು?

ಬೇಸಿಗೆ ಬೆಳೆಗೆ 120 ದಿನಕ್ಕೆ ಅಗತ್ಯವಾದ ನೀರು ಇಲ್ಲದೆ ಹೋದರೂ ಸರ್ಕಾರ ಭದ್ರಾ ಮೇಲ್ದಂಡೆ ಯೋಜನೆ ಕಾಲುವೆಗೆ ನೀರು ಹರಿಸುತ್ತಿದೆ. ಹಿರಿಯೂರು ಉಪ ಚುನಾವಣೆ ಪೂರ್ವದಲ್ಲಿ ಪೂರ್ಣವಾಗದ ನಾಲೆಗೆ ನೀರು ಹರಿಸಿ ಅಚ್ಚುಕಟ್ಟು ಪ್ರದೇಶದ ರೈತರನ್ನು ವಂಚಿಸಲಾಗುತ್ತಿದೆ ಎಂದು ರೈತರು ಆಪಾದಿಸಿದರು.

ರಸ್ತೆ ತಡೆ ಕಾರಣಕ್ಕಾಗಿ ಕೆಲವೆಡೆ ರೈತರು ಮತ್ತು ಪೊಲೀಸರ ನಡುವೆ ವಾಗ್ವಾದ ನಡೆಯಿತು. ಸಾಂಕೇತಿಕವಾಗಿ ಪ್ರತಿಭಟನೆ ನಡೆಸುವಂತೆ ಪೊಲೀಸರು ಸೂಚಿಸಿದರು. ಆದರೆ ಇದಕ್ಕೆ ಒಪ್ಪದ ರೈತರು ತಮ್ಮನ್ನು ಬಂಧಿಸುವಂತೆ ಆಗ್ರಹಿಸಿ ರಸ್ತೆ ತಡೆ ನಡೆಸಿದರು. ಕೈಮರದಲ್ಲಿ ಇದೇ ಕಾರಣಕ್ಕಾಗಿ ಪೊಲೀಸರು ಮತ್ತು ರೈತರ ನಡುವೆ ವಾಗ್ವಾದ ನಡೆಯಿತು. ಪೊಲೀಸರ ಆಕ್ಷೇಪದ ನಡುವೆಯೂ ರೈತರು ಎರಡು ಗಂಟೆ ರಸ್ತೆ ತಡೆ ನಡೆಸಿದರು.

ನೀವು ಲೇಖನದ ಮಧ್ಯಭಾಗದಲ್ಲಿದ್ದೀರಿ. ಈ ಸುದ್ದಿಯ ಮುಂದಿನ 1 ಪ್ಯಾರಾಗಳು ಕೆಳಗಿವೆ

ರೈತರ ರಸ್ತೆ ತಡೆಯನ್ನು ಬೆಂಬಲಿಸಿ ಕೈಮರ ಎನ್.ಡಿ.ಸುಂದರೇಶ್ ವೃತ್ತದಲ್ಲಿ ಶಾಸಕಿ ಶಾರದಾ ಪೂರ್ಯನಾಯ್ಕ ಅವರೂ ಪಾಲ್ಗೊಂಡಿದ್ದರು. ರಸ್ತೆ ತಡೆ ಮತ್ತು ಪ್ರತಿ ಭಟನೆಗಳಲ್ಲಿ ರೈತಸಂಘದ ಪ್ರಮುಖರಾದ ಯಶವಂತರಾವ್ ಘೋರ್ಪಡೆ, ಡಿ.ವಿ. ವೀರೇಶ್, ಮಂಜುನಾಥ್, ಪಾಪೇಗೌಡ, ಈರಣ್ಣ, ಕೃಷ್ಣಮೂರ್ತಿ, ರಾಮಚಂದ್ರ ರಾವ್ ಮತ್ತಿತರರು ಭಾಗವಹಿಸಿದ್ದರು.