ಶಿವಮೊಗ್ಗ ಲೈವ್
ಶಿವಮೊಗ್ಗ: ದಕ್ಷಿಣ ಭಾರತ ಪವರ್ ಲಿಫ್ಟಿಂಗ್ ಚಾಂಪಿಯನ್ಷಿಪ್ನಲ್ಲಿ ನಗರದ ಫಾಜಿಲ್ ಅವರು ಪುರುಷರ ಜೂನಿಯರ್ ವಿಭಾಗದ 59 ಕೆಜಿ ವಿಭಾಗದಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. ಕೇರಳದ ಕಣ್ಣೂರಿನಲ್ಲಿ ನವೆಂಬರ್ 1 ರಿಂದ 4 ರವರೆಗೆ ನಡೆದ ಚಾಂಪಿಯನ್ಷಿಪ್ನಲ್ಲಿ ಫಾಜಿಲ್ ಕರ್ನಾಟಕವನ್ನು ಪ್ರತಿನಿಧಿಸಿದ್ದರು. (ಈ ಸುದ್ದಿಯನ್ನು ಇನ್ನು 20 ಸೆಕೆಂಡ್ಗಳಲ್ಲಿ ಓದಿ ಮುಗಿಸಬಹುದು)
ಬೆಸ್ಟ್ ಲಿಫ್ಟರ್ ಆಫ್ ಸೌತ್ ಇಂಡಿಯಾ ಬಿರುದು ಮುಡಿಗೇರಿಸಿಕೊಂಡಿದ್ದಾರೆ. ಫಾಜಿಲ್ ಅವರು ನಗರದ ಫಿಟ್ ಕೇರ್ ಜಿಮ್ನಲ್ಲಿ ರಾಷ್ಟ್ರೀಯ ಕ್ರೀಡಾಪಟು ಸಲೀಂ.ಎಂ ಅವರಿಂದ ತರಬೇತಿ ಪಡೆಯುತ್ತಿದ್ದಾರೆ.
