ರಸ್ತೆಯಲ್ಲಿ ಎರಡು ವರ್ಷದ ಚಿರತೆ ಮರಿ ಮೃತದೇಹ

ತೀರ್ಥಹಳ್ಳಿ: ರಸ್ತೆ ದಾಟುವಾಗ ವಾಹನ ಹರಿದು ಚಿರತೆ ಮರಿ ಸಾವನ್ನಪ್ಪಿದೆ. ತೀರ್ಥಹಳ್ಳಿ ತಾಲ್ಲೂಕು ಮೇಳಿಗೆ ಪಂಚಾಯಿತಿ ವ್ಯಾಪ್ತಿಯ ಕೌರಿಬೈಲು ಗ್ರಾಮದಲ್ಲಿ ಶನಿವಾರ ಬೆಳಗಿನ ಜಾವ ಘಟನೆ ನಡೆದಿದೆ. (ಈ ಸುದ್ದಿಯನ್ನು ಇನ್ನು 18 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)

ಎರಡು ವರ್ಷದ ಚಿರತೆ ಮರಿ ಸಾವನ್ನಪ್ಪಿದ್ದು, ರಸ್ತೆ ದಾಟುವಾಗ ವಾಹನ ಹತ್ತಿಸಿರುವ ಶಂಕೆ ಇದೆ. ಸ್ಥಳಕ್ಕೆ ತೀರ್ಥಹಳ್ಳಿ ವಲಯ ಅರಣ್ಯ ವ್ಯಾಪ್ತಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಪ್ರಕರಣ ದಾಖಲಾಗಿದೆ.

leopard-cub-killed-in-an-road-accident-at-Thirthahalli.