ಶಿವಮೊಗ್ಗದಲ್ಲಿ ಬ್ಯಾಂಕ್‌ ಮ್ಯಾನೇಜರ್‌ ಮನೆಯಲ್ಲಿ ಲಕ್ಷ ಲಕ್ಷ ಆಭರಣ ನಾಪತ್ತೆ, ಆಗಿದ್ದೇನು?

ಶಿವಮೊಗ್ಗ: ಎಸ್‌ಬಿಐ ಬ್ಯಾಂಕ್ ಮ್ಯಾನೇಜರ್ ಮನೆಯಲ್ಲಿ ₹11.35 ಲಕ್ಷ ಮೌಲ್ಯದ ಚಿನ್ನ ಹಾಗೂ ಬೆಳ್ಳಿಯ ಆಭರಣಗಳು ಕಳ್ಳತನವಾಗಿವೆ. ಗೋಪಾಳದ ಮಲ್ಲಿಕಾರ್ಜುನ ಬಡಾವಣೆಯಲ್ಲಿರುವ ಮೇಘನಾ ಅವರ ಮನೆಯಲ್ಲಿ ಘಟನೆ ನಡೆದಿದೆ. (ಈ ಸುದ್ದಿಯನ್ನು ಇನ್ನು 37 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)

ಮೇಘನಾ ಅವರು ಕುಟುಂಬ ಸಹಿತ ಅಕ್ಟೋಬರ್‌ 23 ರಂದು ಮಂಗಳೂರಿಗೆ ತೆರಳಿದ್ದ. ಅಕ್ಟೋಬರ್ 26 ರಂದು ವಾಪಸ್ ಬಂದಿದ್ದರು. ನವೆಂಬರ್ 8 ರಂದು ಬೆಳಿಗ್ಗೆ ಲಾಕರ್ ತೆರೆದು ಪರಿಶೀಲಿಸಿದಾಗ ಆಭರಣ ನಾಪತ್ತೆಯಾಗಿರುವುದು ಅರಿವಿಗೆ ಬಂದಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.  

070426-Tunga-Nagara-Police-Station-General-Image.avif

ಲಾಕರ್‌ನಲ್ಲಿದ್ದ ಚಿನ್ನದ ಸರಗಳು, ಬಳೆಗಳು, ಬ್ರೇಸ್‌ಲೇಟ್, 10 ಚಿನ್ನದ ನಾಣ್ಯಗಳು ಹಾಗೂ ಬೆಳ್ಳಿಯ ಗಣೇಶ ಮೂರ್ತಿ ಸೇರಿದಂತೆ ಒಟ್ಟು ₹11,35,000 ಮೌಲ್ಯದ ವಸ್ತುಗಳು ಕಳ್ಳತನವಾಗಿವೆ. ಮನೆಯ ಬಾಗಿಲು, ಕಿಟಕಿ ಅಥವಾ ಲಾಕರ್ ಮುರಿದ ಗುರುತುಗಳು ಕಂಡುಬಂದಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ.

ನೀವು ಲೇಖನದ ಮಧ್ಯಭಾಗದಲ್ಲಿದ್ದೀರಿ. ಈ ಸುದ್ದಿಯ ಮುಂದಿನ 1 ಪ್ಯಾರಾಗಳು ಕೆಳಗಿವೆ

ದೂರಿನ ಮೇರೆಗೆ ತುಂಗಾ ನಗರ ಠಾಣೆ ಪೊಲೀಸರು ಬಿಎನ್‌ಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಚುರುಕುಗೊಳಿಸಿದ್ದಾರೆ.