ಕೃಷಿ ಪಂಪ್‌ಸೆಟ್‌ಗಳಿಗೆ ನಾಲ್ಕು ದಿನ ವಿದ್ಯುತ್‌ ವ್ಯತ್ಯಯ, ಎಲ್ಲೆಲ್ಲಿ? ಯಾವಾಗ?

ಶಿವಮೊಗ್ಗ: ತಾಲ್ಲೂಕಿನ ಕುಂಸಿ 110/11 ಕೆವಿ ವಿದ್ಯುತ್ ವಿತರಣಾ ಕೇಂದ್ರದ ವ್ಯಾಪ್ತಿಯ ಕುಂಸಿ ಹಾಗೂ ಹಾರನಹಳ್ಳಿ ಶಾಖೆಗಳಲ್ಲಿ ನವೆಂಬರ್ 16 ರಿಂದ 19 ರವರೆಗೆ 4 ದಿನಗಳ ಕಾಲ ನೀರಾವರಿ ಕೃಷಿ ಪಂಪ್‌ಸೆಟ್‌ಗಳಿಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಲಾಗಿದೆ. (ಈ ಸುದ್ದಿಯನ್ನು ಇನ್ನು 42 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)

ಹಳೆಯ ಪವರ್ ಕೇಬಲ್ ಹಾಗೂ ಹೊಸದಾಗಿ ಡಿ.ಪಿ ಸ್ಟ್ರಕ್ಚರ್‌ಗಳನ್ನು ಬದಲಾಯಿಸುವ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ. ಈ ಅವಧಿಯಲ್ಲಿ ಕೃಷಿ ಪಂಪ್‌ಸೆಟ್‌ಗಳಿಗೆ (ಐ.ಪಿ) ಸಂಜೆ 6 ಗಂಟೆಯಿಂದ ಬೆಳಿಗ್ಗೆ 10 ಗಂಟೆಯವರೆಗೆ ಮಾತ್ರ 3 ಫೇಸ್ ವಿದ್ಯುತ್ ನೀಡಲಾಗುತ್ತದೆ.

Power Cut

ಎಲ್ಲೆಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ?

ಕುಂಸಿ, ಬಾಳೇಕೊಪ್ಪ, ಚಿಕ್ಕಮರನ, ರೇಚಿಕೊಪ್ಪ, ಹಳೆ ಶಿಕಾರಿಪುರ ರಸ್ತೆ, ಹುಬ್ಬನಹಳ್ಳಿ, ಹೊಸಕೋಟೆ ದುರ್ಗಮ್ಮ ದೇವಸ್ಥಾನದ ಸುತ್ತಮುತ್ತಲ ಗ್ರಾಮಗಳು. ಹಾರನಹಳ್ಳಿ, ಮಲ್ಲಾಪುರ, ರಟ್ಟೆಹಳ್ಳಿ, ಸೊಟ್ಟುಕೋಟೆ, ಹಿಟ್ಟೂರು, ನಾರಾಯಣಪುರ, ಬೈರನಕೊಪ್ಪ, ಮುದುವಾಲ, ವಾಲಾಕೇಶಪುರ, ದೇವಬಾಳು, ಎಡವಾಲ, ತ್ಯಾಗವಳ್ಳಿ, ಕೊನಗವಳ್ಳಿ, ಚಾಮೇನಹಳ್ಳಿ ಹಾಗೂ ಸುತ್ತಮುತ್ತಲಿನ ಹಳ್ಳಿಗಳಲ್ಲಿ ವಿದ್ಯುತ್‌ ವ್ಯತ್ಯಯವಾಗಲಿದೆ ಎಂದು ಕುಂಸಿ ಮೆಸ್ಕಾಂ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಕೋರಿದ್ದಾರೆ.