ಶಿವಮೊಗ್ಗ ಲೈವ್
ಶಿವಮೊಗ್ಗ: ಬೆಂಗಳೂರಿನ ಅಂತರಂಗ ಬಹಿರಂಗ ತಂಡದ ‘ಬಾಯ್ಬಡ್ಕಿ’ ಹಾಸ್ಯ ನಾಟಕ ನ.16ರಂದು ಸಂಜೆ 6.45ಕ್ಕೆ ನಗರದ ಕುವೆಂಪು ರಂಗಮಂದಿರದಲ್ಲಿ ಪ್ರದರ್ಶನಗೊಳ್ಳಲಿದೆ. ನೇಟಿವ್ ಥಿಯೇಟರ್ ತಂಡ ಈ ಪ್ರದರ್ಶನ ಆಯೋಜಿಸಿದೆ. ನಾಟಕದ ರಚನೆ, ನಿರ್ದೇಶನ ಭೀಷ್ಮ ರಾಮಯ್ಯ ಅವರದ್ದು. ಪ್ರದರ್ಶನಕ್ಕೆ ಮುನ್ನ ವೇದಿಕೆ ಕಾರ್ಯಕ್ರಮ ಇರುವುದಿಲ್ಲ ಎಂದು ಪ್ರಕಟಣೆ ತಿಳಿಸಿದೆ. (ಈ ಸುದ್ದಿಯನ್ನು ಇನ್ನು 15 ಸೆಕೆಂಡ್ಗಳಲ್ಲಿ ಓದಿ ಮುಗಿಸಬಹುದು)
