ಬಾಳೇಬೈಲು ಬಳಿ ಅಪಘಾತ, ಸ್ಥಳದಲ್ಲೆ ವ್ಯಕ್ತಿ ಸಾವು, ಸಿಸಿಟಿವಿಯಲ್ಲಿ ದೃಶ್ಯ ಸೆರೆ

ತೀರ್ಥಹಳ್ಳಿ: ಬಾಳೇಬೈಲು ಸಮೀಪ ಮೊಪೆಡ್‌ ಮತ್ತು ಬೈಕ್ ನಡುವೆ ಶನಿವಾರ ಸಂಜೆ ಅಪಘಾತ ಸಂಭವಿಸಿದ್ದು ಮೊಪೆಡ್‌ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬಾಳೇಬೈಲಿನ ನಿವಾಸಿ ಶಬೀರ್ ಖಾನ್ (57) ಮೃತ ವ್ಯಕ್ತಿ. ಬೈಕ್ ಸವಾರರಿಗೂ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತೀರ್ಥಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನು, ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ವೈರಲ್‌ ಆಗಿದೆ. (ಈ ಸುದ್ದಿಯನ್ನು ಇನ್ನು 17 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)

Thirthahalli-Balebailu-bike-accidents-cctv-grab