ಭದ್ರಾವತಿಯ ವಿವಿಧೆಡೆ ಎರಡು ದಿನ ಕರೆಂಟ್‌ ಇರಲ್ಲ, ಎಲ್ಲೆಲ್ಲಿ? ಕಾರಣವೇನು?

ಭದ್ರಾವತಿ: ಮೆಸ್ಕಾಂ ನಗರ ಹಾಗೂ ಗ್ರಾಮೀಣ ಉಪವಿಭಾಗಗಳ ವ್ಯಾಪ್ತಿಯಲ್ಲಿ ವಿದ್ಯುತ್ ಮಾರ್ಗ ನಿರ್ವಹಣಾ ಕಾಮಗಾರಿ ಹಮ್ಮಿಕೊಳ್ಳಲಾಗಿದೆ. ಆದ್ದರಿಂದ ನವೆಂಬರ್ 17 ಹಾಗೂ 18 ರಂದು ಭದ್ರಾವತಿಯ ವಿವಿಧೆಡೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಾಸ ಉಂಟಾಗಲಿದೆ. ಎರಡು ದಿನವು ಬೆಳಿಗ್ಗೆ 10 ರಿಂದ ಸಂಜೆ 6 ಗಂಟೆಯವರೆಗೆ ವಿದ್ಯುತ್ ಸರಬರಾಜು ಸ್ಥಗಿತಗೊಳ್ಳಲಿದೆ. (ಈ ಸುದ್ದಿಯನ್ನು ಇನ್ನು 29 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)

ಚನ್ನಗಿರಿ ರಸ್ತೆ, ಹೊಳೆಹೊನ್ನೂರು ಮುಖ್ಯ ರಸ್ತೆ, ಇಂದಿರಾ ನಗರ, ಅನ್ವರ್ ಕಾಲೋನಿ, ದುರ್ಗಿನಗರ, ಅಮೀರ್‌ಜಾನ್ ಕಾಲೋನಿ, ಮೊಮಿನ್ ಮೊಹಲ್ಲಾ, ಖಲಂದರ್ ನಗರ, ಜಟ್‌ಪಟ್ ನಗರ, ಬಾಬಳ್ಳಿ, ಗೌಡ್ರಹಳ್ಳಿ, ಲಕ್ಷ್ಮೀಪುರ ಹಾಗೂ ಮಜ್ಜಿಗೇನಹಳ್ಳಿ ಸೇರಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್‌ ವ್ಯತ್ಯಯವಾಗಲಿದೆ ಎಂದು ನಗರ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

BHADRAVATHI-NEWS-GRAPHICS-BY-SHIVAMOGGA-LIVE.