ಹಾಸ್ಟೆಲ್‌ನಲ್ಲಿ ಟ್ರಂಕ್‌ ತೆಗೆದ ಇಂಜನಿಯರಿಂಗ್‌ ವಿದ್ಯಾರ್ಥಿಗೆ ಕಾದಿತ್ತು ಆಘಾತ, ತಡವಾಗಿ ದಾಖಲಾಯ್ತು ಪ್ರಕರಣ

ಶಿವಮೊಗ್ಗ: ಸರ್ಕಾರಿ ಹಾಸ್ಟೆಲ್‌ನಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬರ ಲ್ಯಾಪ್‌ಟಾಪ್ ಕಳ್ಳತನವಾಗಿದೆ. ನವುಲೆಯ ಸರ್ಕಾರಿ ಮೆಟ್ರಿಕ್ ನಂತರದ ಬಾಲಕರ ಹಾಸ್ಟೆಲ್‌ನಲ್ಲಿ ಘಟನೆ ಸಂಭವಿಸಿದೆ. (ಈ ಸುದ್ದಿಯನ್ನು ಇನ್ನು 40 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)

ಜೆಎನ್‌ಎನ್‌ಸಿಇ ಕಾಲೇಜಿನಲ್ಲಿ 7ನೇ ಸೆಮಿಸ್ಟರ್ ಇಂಜಿನಿಯರಿಂಗ್ ವಿದ್ಯಾರ್ಥಿ ರುದ್ರೇಶ್ ಎಂಬುವವರ ಲ್ಯಾಪ್‌ಟಾಪ್ ಕಳ್ಳತನವಾಗಿದೆ.

Police-Jeep-at-Shimoga-General-Image

ರಜೆ ಅವಧಿಯಲ್ಲಿ ಕಳ್ಳತನ

ದಸರಾ ರಜೆ ಹಿನ್ನೆಲೆಯಲ್ಲಿ ರುದ್ರೇಶ್ ಅವರು ಅಕ್ಟೋಬರ್ 14 ರಂದು ತಮ್ಮ ಹಾಸ್ಟೆಲ್ ಕೊಠಡಿಯಲ್ಲಿದ್ದ ಟ್ರಂಕ್‌ನಲ್ಲಿ ಹೆಚ್‌ಪಿ ವಿಕ್ಟಸ್ ಗೇಮಿಂಗ್ ಲ್ಯಾಪ್‌ಟಾಪ್ ಇಟ್ಟು ಊರಿಗೆ ತೆರಳಿದ್ದರು. ಮರುದಿನ ಅವರ ರೂಮ್‌ಮೇಟ್‌ಗಳು ಊರಿಗೆ ಹೋಗುವಾಗ ಗಡಿಬಿಡಿಯಲ್ಲಿ ಕೊಠಡಿಯ ಬಾಗಿಲಿಗೆ ಬೀಗ ಹಾಕಿರಲಿಲ್ಲ ಎಂದು ಆರೋಪಿಸಲಾಗಿದೆ. ಅಕ್ಟೋಬರ್ 23 ರಂದು ರೂಮ್‌ಮೇಟ್ ವಾಪಸ್ ಬಂದಾಗ ಟ್ರಂಕ್‌ನಲ್ಲಿದ್ದ ಲ್ಯಾಪ್‌ಟಾಪ್ ನಾಪತ್ತೆಯಾಗಿತ್ತು.

ರುದ್ರೇಶ್ ಅವರು ಅಕ್ಟೋಬರ್ 25 ರಂದು ಹಾಸ್ಟೆಲ್‌ಗೆ ಆಗಮಿಸಿ ಪರಿಶೀಲಿಸಿದಾಗ ಕಳವಾಗಿರುವುದು ಖಚಿತವಾಗಿತ್ತು. ಎಲ್ಲರ ಬಳಿ ವಿಚಾರಿಸಿದ ನಂತರ ರುದ್ರೇಶ್‌ ಅವರು ದೂರು ನೀಡಿದ್ದಾರೆ. ಲ್ಯಾಪ್‌ಟಾಪ್‌ನ ಮೌಲ್ಯ ₹53,000 ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ವಿನೋಬನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗೂಗಲ್‌ನಲ್ಲಿ ಶಿವಮೊಗ್ಗ ಲೈವ್ ಸುದ್ದಿಗಳು ನಿಮಗೆ ಮೊದಲು ಸಿಗಬೇಕೆ? ಕೆಳಗಿನ ಬಟನ್ ಒತ್ತಿ: