ತುಮರಿ ಸಮೀಪ ಗೂಡಂಗಡಿಯಲ್ಲಿ ಕಳ್ಳತನ, ನಗರದ ವ್ಯಕ್ತಿ ಅರೆಸ್ಟ್‌

ತುಮರಿ: ಗೂಡಂಗಡಿಯೊಂದರ ಬೀಗ ಒಡೆದು ಕಳ್ಳತನ ಮಾಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ನಗರ ಮೂಲದ ರಾಕೇಶ್ ಹೆಚ್.ಕೆ. ಬಂಧಿತ. (ಈ ಸುದ್ದಿಯನ್ನು ಇನ್ನು 25 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)

ನ. 21ರಂದು ರಾತ್ರಿ ಬೇರಾಳ ಗ್ರಾಮದ ಗೂಡಂಗಡಿಯಲ್ಲಿ ಕಳ್ಳತನ ನಡೆದಿತ್ತು. ಈ ಸಂಬಂಧ ಕಾರ್ಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ ಪಿಎಸ್‌ಐ ಶ್ರೀಪತಿ ಗಿನ್ನಿ ನೇತೃತ್ವದ ತಂಡ ಆರೋಪಿಯನ್ನು ಬಂಧಿಸಿದೆ. 

Arrest News Graphics

ಕಾರ್ಯಾಚರಣೆ ತಂಡದಲ್ಲಿ ಎಎಸ್‌ಐ ಹಾಲಪ್ಪ, ಹೆಡ್ ಕಾನ್‌ಸ್ಟೆಬಲ್‌ ಅಣ್ಣಪ್ಪ, ದಿನೇಶ್, ಸಂದೀಪ್, ಕಾನ್‌ಸ್ಟೆಬಲ್‌ ಪುರುಷೋತ್ತಮ್, ರಾಮ್ ನಾಯ್ಕ್, ಭರತ್, ಅರುಣ್, ಮಲ್ಲಪ್ಪ, ಹನೀಫ್ ಹಾಗೂ ಎಎನ್‌ಸಿ ವಿಭಾಗದ ಗುರುರಾಜ್ ಇಂದ್ರೇಶ್ ಪಾಲ್ಗೊಂಡಿದ್ದರು.

ಗೂಗಲ್‌ನಲ್ಲಿ ಶಿವಮೊಗ್ಗ ಲೈವ್ ಸುದ್ದಿಗಳು ನಿಮಗೆ ಮೊದಲು ಸಿಗಬೇಕೆ? ಕೆಳಗಿನ ಬಟನ್ ಒತ್ತಿ: