ಶಿವಮೊಗ್ಗದ ಸೆಂಟ್ರಲ್‌ ಜೈಲಿನಿಂದ ಪರಾರಿಯಾಗಲು ಯತ್ನಿಸಿದ ವಿಚಾರಣಾಧೀನ ಕೈದಿ

ಶಿವಮೊಗ್ಗ: ವಿಚಾರಣಾಧೀನ ಕೈದಿಯೊಬ್ಬ ಜೈಲಿನ ಗೋಡೆ ಮತ್ತು ಕಟ್ಟಡ ಏರಿ ಇಲ್ಲಿನ ಕೇಂದ್ರ ಕಾರಾಗೃಹದಿಂದ ಪರಾರಿಯಾಗಲು ಯತ್ನಿಸಿದ್ದಾನೆ. ಈಗ ಆತನ ವಿರುದ್ಧ ಪ್ರಕರಣ ದಾಖಲಾಗಿದೆ. (ಈ ಸುದ್ದಿಯನ್ನು ಇನ್ನು 36 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)

ಕಾರಾಗೃಹದ ಶರಾವತಿ ವಿಭಾಗದ ಕೊಠಡಿಯಲ್ಲಿ ಕೈದಿಗಳನ್ನು ಲಾಕ್ ಮಾಡುವಾಗ ಮನು ಅಲಿಯಾಸ್ ಮನೋಜ್ (21)‌ ಎಂಬ ವಿಚಾರಣಾಧೀನ ಕೈದಿಯೊಬ್ಬ ಕಣ್ಮರೆಯಾಗಿದ್ದ. ಇದರಿಂದ ತಕ್ಷಣವೇ ಎಚ್ಚೆತ್ತ ಜೈಲು ಸಿಬ್ಬಂದಿ ಕಾರಾಗೃಹದ ಒಳ ಆವರಣದಲ್ಲಿ ಶೋಧ ನಡೆಸಿದರು.

Shimoga-Central-Jail-Building

ಈ ವೇಳೆ ಜೆನರೇಟರ್ ಪ್ಯಾಸೇಜ್ ಸಮೀಪ ತುಂಗಾ ಬ್ಯಾರಕ್‌ ಮತ್ತು ಆಸ್ಪತ್ರೆ ವಿಭಾಗದ ಮೂಲೆಯ ಕಟ್ಟಡದ ಮೇಲೇರಿ ಮನು ಪರಾರಿಯಾಗಲು ಯತ್ನಿಸುತ್ತಿದ್ದದ್ದು ಸಿಬ್ಬಂದಿಯ ಕಣ್ಣಿಗೆ ಬಿದ್ದಿದೆ. ತಕ್ಷಣ ಆತನನ್ನು ಕೆಳಕ್ಕಿಳಿಸಿ ವಶಕ್ಕೆ ಪಡೆದ ಸಿಬ್ಬಂದಿ, ಭದ್ರತಾ ಕೊಠಡಿಗೆ ಸ್ಥಳಾಂತರಿಸಿದ್ದಾರೆ. ಈ ಕುರಿತು ಕಾರಾಗೃಹದ ಮುಖ್ಯ ಅಧೀಕ್ಷಕ ಡಾ. ರಂಗನಾಥ್.ಪಿ ಅವರು ನೀಡಿರುವ ದೂರಿನ ಹಿನ್ನೆಲೆ ತುಂಗಾ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗೂಗಲ್‌ನಲ್ಲಿ ಶಿವಮೊಗ್ಗ ಲೈವ್ ಸುದ್ದಿಗಳು ನಿಮಗೆ ಮೊದಲು ಸಿಗಬೇಕೆ? ಕೆಳಗಿನ ಬಟನ್ ಒತ್ತಿ: