ಶಿವಮೊಗ್ಗದ ಮಾತೃ ವಾತ್ಸಲ್ಯ ಹೈಟೆಕ್ ಆಸ್ಪತ್ರೆ ಉದ್ಘಾಟನೆ, ದಿನಾಂಕ ನಿಗದಿ, ಯಾವಾಗ?

ಶಿವಮೊಗ್ಗ: ನಗರದ ದುರ್ಗಿಗುಡಿಯಲ್ಲಿ ಅತ್ಯಾಧುನಿಕ ವೈದ್ಯಕೀಯ ಸೌಲಭ್ಯ ಒಳಗೊಂಡ 100 ಹಾಸಿಗೆಗಳ ಮಾತೃ ವಾತ್ಸಲ್ಯ ಹೆಲ್ತ್‌ಕೇರ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಉದ್ಘಾಟನಾ ಸಮಾರಂಭವು ನವೆಂಬರ್ 29 ರಂದು ಭಾನುವಾರ ಬೆಳಿಗ್ಗೆ 10 ಗಂಟೆಗೆ ನಡೆಯಲಿದೆ ಎಂದು ಸಂಸ್ಥೆಯ ಛೇರ್ಮನ್ ಡಾ. ಪೃಥ್ವಿ ಬಿ.ಸಿ. ತಿಳಿಸಿದರು. (ಈ ಸುದ್ದಿಯನ್ನು ಇನ್ನು 70 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)

ಆಸ್ಪತ್ರೆ ಆವರಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಮೊದಲು 40 ರಿಂದ 50 ಹಾಸಿಗೆಗಳಿದ್ದ ಆಸ್ಪತ್ರೆಯನ್ನು ಈಗ 100 ಹಾಸಿಗೆಗಳ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸಲಾಗಿದೆ ಎಂದರು.

Dr-Pruthvi-BC-Press-meet-about-Vatsalya-Hospital-in-Shivamogga

ಹಿರಿಯ ವೈದ್ಯರಾದ ಡಾ. ಪಿ. ನಾರಾಯಣ, ಡಾ. ಎಸ್.ಐ. ಬಿರಾದಾರ್, ಡಾ. ನಿರ್ಮಲ ಹೆಚ್.ಟಿ., ಡಾ. ರಜನಿ ವಿ. ಪೈ, ಡಾ. ಎ. ಶಿವರಾಮಕೃಷ್ಣ, ಡಾ. ಬಿ. ಲಕ್ಷ್ಮೀನಾರಾಯಣ ಆಚಾರ್ ಹಾಗೂ ಡಾ. ಧನಂಜಯ ಸರ್ಜಿ ಅವರು ಆಸ್ಪತ್ರೆಯನ್ನು ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದರು.

ನೀವು ಲೇಖನದ ಮಧ್ಯಭಾಗದಲ್ಲಿದ್ದೀರಿ. ಈ ಸುದ್ದಿಯ ಮುಂದಿನ 1 ಪ್ಯಾರಾಗಳು ಕೆಳಗಿವೆ

ಸುಸಜ್ಜಿತ ವ್ಯವಸ್ಥೆ

ಮಾತೃವಾತ್ಸಲ್ಯ ಆಸ್ಪತ್ರೆಯಲ್ಲಿ 30ಕ್ಕೂ ಹೆಚ್ಚು ಹಾಸಿಗೆಗಳ ಸುಸಜ್ಜಿತ ಐಸಿಯು , ಅತ್ಯಾಧುನಿಕ ಐವಾಸ್ ತಂತ್ರಜ್ಞಾನ ಹೊಂದಿರುವ 24 ಗಂಟೆಗಳ ಕ್ಯಾಥ್‌ಲ್ಯಾಬ್, ಆಂಜಿಯೋಗ್ರಾಮ್, ಆಂಜಿಯೋಪ್ಲಾಸ್ಟಿ ಹಾಗೂ ಪೇಸ್‌ಮೇಕರ್ ಅಳವಡಿಕೆ ಸೌಲಭ್ಯಗಳಿವೆ. ಕ್ಲಿಷ್ಟಕರ ಶಸ್ತ್ರಚಿಕಿತ್ಸೆಗಳಿಗಾಗಿ ಮಾಡ್ಯುಲರ್ ಆಪರೇಷನ್ ಥಿಯೇಟರ್ ನಿರ್ಮಿಸಲಾಗಿದೆ ಎಂದು ಡಾ. ಪೃಥ್ವಿ ತಿಳಿಸಿದರು.

ಏನೇನೆಲ್ಲ ಚಿಕಿತ್ಸೆ ಲಭ್ಯವಿದೆ?

ಜನರಲ್ ಮೆಡಿಸಿನ್, ಹೃದಯರೋಗ, ಜನರಲ್ ಹಾಗೂ ಲ್ಯಾಪರೋಸ್ಕೋಪಿಕ್ ಸರ್ಜರಿ, ಸ್ತ್ರೀರೋಗ ಮತ್ತು ಪ್ರಸೂತಿ, ಮಕ್ಕಳ ಚಿಕಿತ್ಸೆ, ಮೂಳೆರೋಗ, ಮೂತ್ರರೋಗ, ಚರ್ಮರೋಗ, ನರರೋಗ ಹಾಗೂ ಮೆದುಳು ಶಸ್ತ್ರಚಿಕಿತ್ಸಾ ವಿಭಾಗಗಳು ಒಂದೇ ಸೂರಿನಡಿ ಲಭ್ಯವಿವೆ. ಎಲ್ಲ ಬಗೆಯ ಇನ್ಸುರೆನ್ಸ್ ಸೇವೆ ದೊರೆಯಲಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಆಸ್ಪತ್ರೆಯ ತಜ್ಞ ವೈದ್ಯರಾದ ಡಾ. ಮಹೇಶ್‌ಮೂರ್ತಿ ಬಿ.ಆರ್., ಡಾ. ಗೀತಾ ರವಿ, ಡಾ. ನಾಗಮಣಿ ಎಂ.ಸಿ., ಡಾ. ಮಿಥುನ್ ಎನ್. ಕಗಲ್ಕರ್, ಡಾ. ಸಂತೋಷ್ ಕೊಪ್ಪಳ್, ಡಾ. ಸಚಿನ್ ಉತ್ನಾಳ್ ಸೇರಿ ಹಲವರು ಉಪಸ್ಥಿತರಿದ್ದರು.

ಗೂಗಲ್‌ನಲ್ಲಿ ಶಿವಮೊಗ್ಗ ಲೈವ್ ಸುದ್ದಿಗಳು ನಿಮಗೆ ಮೊದಲು ಸಿಗಬೇಕೆ? ಕೆಳಗಿನ ಬಟನ್ ಒತ್ತಿ: