ಸಂಬಳವಿಲ್ಲ, ಇಎಸ್‌ಐ ಕೂಡ ನೀಡಿಲ್ಲ, ಶಿವಮೊಗ್ಗದ ಐಟಿ ಪಾರ್ಕ್‌ನಲ್ಲಿದ್ದ ಸಂಸ್ಥೆ ದಿಢೀರ್‌ ನಾಪತ್ತೆ

ಶಿವಮೊಗ್ಗ: ನಗರದ ಮಾಚೇನಹಳ್ಳಿಯ ಐಟಿ ಪಾರ್ಕ್‌ನಲ್ಲಿರುವ ಖಾಸಗಿ ಸಂಸ್ಥೆಯೊಂದರ ಮುಖ್ಯಸ್ಥರು ಸಿಬ್ಬಂದಿಗೆ ನಾಲ್ಕು ತಿಂಗಳಿಂದ ವೇತನ ಹಾಗೂ ಪಿಎಫ್ ನೀಡದೆ ವಂಚಿಸಿ, ಕಂಪನಿ ಮುಚ್ಚಿ ಪರಾರಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ. ನೊಂದ ಸಿಬ್ಬಂದಿ ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದಾರೆ. (ಈ ಸುದ್ದಿಯನ್ನು ಇನ್ನು 36 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)

ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ನೌಕರರಿಗೆ ಜೂನ್‌ನಿಂದ ಸೆಪ್ಟೆಂಬರ್‌ವರೆಗೆ ನಾಲ್ಕು ತಿಂಗಳ ಒಟ್ಟು ₹ 3,83,800 ವೇತನ ಪಾವತಿಸಿರಲಿಲ್ಲ. ಜೊತೆಗೆ ಇಎಸ್‌ಐ ಹಾಗೂ ಪಿಎಫ್ ಹಣವನ್ನೂ ಸಂಸ್ಥೆಯ ಖಾತೆಗೆ ಜಮಾ ಮಾಡದೆ ವಂಚಿಸಲಾಗಿದೆ ಎಂದು ನೌಕರರು ದೂರಿನಲ್ಲಿ ಆರೋಪಿಸಿದ್ದಾರೆ.

Shivamogga-IT-Park-building-at-Machenahalli

ಸಂಬಳ ನೀಡುವಂತೆ ಆಡಳಿತ ಮಂಡಳಿಯನ್ನು ಕೇಳಿದರೂ ಯಾವುದೇ ಸ್ಪಂದನೆ ಸಿಕ್ಕಿರಲಿಲ್ಲ. ಇದರಿಂದ ಬೇಸತ್ತು ಸಂಸ್ಥೆಯಲ್ಲಿದ್ದ 33 ನೌಕರರು ಕೆಲಸ ತೊರೆದಿದ್ದರು. ಕಂಪನಿಯಲ್ಲೇ ಉಳಿದುಕೊಂಡಿದ್ದ ಏಳು ನೌಕರರಿಗೆ ಯಾವುದೇ ಮುನ್ಸೂಚನೆ ನೀಡದೆ ಏಕಾಏಕಿ ಕಂಪನಿಯನ್ನು ಮುಚ್ಚಿ ಆಡಳಿತ ಮಂಡಳಿ ಪರಾರಿಯಾಗಿದೆ.ಸಂತ್ರಸ್ತ ನೌಕರರು ತುಂಗಾನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

JOB NEWS

Jnanasudha Institutions Jobs
ಗೂಗಲ್‌ನಲ್ಲಿ ಶಿವಮೊಗ್ಗ ಲೈವ್ ಸುದ್ದಿಗಳು ನಿಮಗೆ ಮೊದಲು ಸಿಗಬೇಕೆ? ಕೆಳಗಿನ ಬಟನ್ ಒತ್ತಿ: