ಅನುಪಿನಕಟ್ಟೆಯಲ್ಲಿ ಸಂಜೆ ಮನೆಗೆ ಮರಳಿದ ವೃದ್ಧೆಗೆ ಕಾದಿತ್ತು ಆಘಾತ, ಆಗಿದ್ದೇನು?

ಶಿವಮೊಗ್ಗ: ತಾಲೂಕಿನ ಅನುಪಿನಕಟ್ಟೆ ಗ್ರಾಮದಲ್ಲಿ ಮನೆಯೊಂದರ ಬೀಗ ಮುರಿದು ₹2.15 ಲಕ್ಷ ನಗದು ಹಾಗೂ 70 ಗ್ರಾಂ ಚಿನ್ನಾಭರಣ ಕಳ್ಳತನ ಮಾಡಲಾಗಿದೆ. ಗ್ರಾಮದ ನಿವಾಸಿ ಕೆಂಗಮ್ಮ ಎಂಬುವವರ ಮನೆಯಲ್ಲಿ ಘಟನೆ ನಡೆದಿದೆ. (ಈ ಸುದ್ದಿಯನ್ನು ಇನ್ನು 41 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)

ಕೆಂಗಮ್ಮ ಅವರು ನವೆಂಬರ್ 19 ರಂದು ಸಂಜೆ ಮನೆಯ ಬಾಗಿಲಿಗೆ ಬೀಗ ಹಾಕಿ ನೆರೆಮನೆಗೆ ತೆರಳಿದ್ದರು. ಸಂಜೆ ವಾಪಸ್ ಬಂದಾಗ ಮನೆಯ ಬಾಗಿಲಿನ ಬೀಗ ಮುರಿದಿರುವುದು ಕಂಡುಬಂದಿದೆ. ಕಳ್ಳರು ಒಳಗೆ ನುಗ್ಗಿ ರಾಗಿ ಚೀಲವನ್ನು ಬಾಗಿಲಿಗೆ ಅಡ್ಡವಾಗಿ ಇಟ್ಟು, ಹಾಲ್‌ನಲ್ಲಿದ್ದ ಬೀರುವನ್ನು ಆಯುಧದಿಂದ ಮುರಿದಿದ್ದಾರೆ ಎಂದು ಆರೋಪಿಸಲಾಗಿದೆ.

Police-Jeep-in-Shimoga-city

ಬೀರುವಿನಲ್ಲಿದ್ದ ₹2,15,000 ನಗದು, 40 ಗ್ರಾಂ ಹಾಗೂ 20 ಗ್ರಾಂ ತೂಕದ ಚಿನ್ನದ ಚೈನ್‌ಗಳು, 5 ಗ್ರಾಂ ಮಗುವಿನ ಚೈನ್, 5 ಗ್ರಾಂ ಉಂಗುರ ಹಾಗೂ 100 ಗ್ರಾಂ ಬೆಳ್ಳಿಯ ಆಭರಣಗಳು ಸೇರಿದಂತೆ ಒಟ್ಟು ₹9,25,000 ಮೌಲ್ಯದ ವಸ್ತುಗಳನ್ನು ಕದ್ದು ಹಿಂಬದಿಯ ಬಾಗಿಲಿನ ಮೂಲಕ ಪರಾರಿಯಾಗಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಘಟನೆ ಸಂಬಂಧ ತುಂಗಾ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

JOB NEWS

Jnanasudha Institutions Jobs
ಗೂಗಲ್‌ನಲ್ಲಿ ಶಿವಮೊಗ್ಗ ಲೈವ್ ಸುದ್ದಿಗಳು ನಿಮಗೆ ಮೊದಲು ಸಿಗಬೇಕೆ? ಕೆಳಗಿನ ಬಟನ್ ಒತ್ತಿ: