ಶಿವಮೊಗ್ಗ ಡಿಸಿ ಕಚೇರಿ ಎದುರು ಡಿವೈಡರ್‌ ಮೇಲೆ ಟ್ರಾಕ್ಟರ್‌ ಹಾರಿಸಿದ್ದ ಚಾಲಕನಿಗೆ ಸಂಕಷ್ಟ

ಶಿವಮೊಗ್ಗ: ಜಿಲ್ಲಾಧಿಕಾರಿ ಕಚೇರಿ ಎದುರು ನಡೆದ ರೈತರ ಪ್ರತಿಭಟನೆ ವೇಳೆ ರಸ್ತೆಯ ಡಿವೈಡರ್ ಹಾಗೂ ಕಬ್ಬಿಣದ ಗ್ರಿಲ್ ಹಾನಿಗೊಳಿಸಿದ ಹಿನ್ನೆಲೆ ಟ್ರ್ಯಾಕ್ಟರ್ ಚಾಲಕನ ವಿರುದ್ಧ ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಈ ಸುದ್ದಿಯನ್ನು ಇನ್ನು 31 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)

ಭದ್ರಾ ನಾಲೆಗೆ ನೀರು ಹರಿಸುವಂತೆ ಆಗ್ರಹಿಸಿ ನವೆಂಬರ್ 25 ರಂದು ಜಿಲ್ಲಾಧಿಕಾರಿ ಕಚೇರಿ ಎದುರು ರೈತರು ಪ್ರತಿಭಟನೆ ನಡೆಸಿದ್ದರು. ಈ ವೇಳೆ ನಂಬರ್ ಪ್ಲೇಟ್ ಇಲ್ಲದ ನೀಲಿ ಬಣ್ಣದ ಟ್ರ್ಯಾಕ್ಟರ್ ಅನ್ನು ಅದರ ಚಾಲಕ ರಸ್ತೆಯ ಡಿವೈಡರ್ ಮೇಲೆ ಹಾರಿಸಿದ್ದರು. ಘಟನೆಯಲ್ಲಿ ಡಿವೈಡರ್ ಕಟ್ಟೆ ಹಾಗೂ ಅದರ ಮೇಲಿದ್ದ ಕಬ್ಬಿಣದ ಗ್ರಿಲ್ ಮುರಿದಿದೆ. ಸರ್ಕಾರಿ ಸ್ವತ್ತಿಗೆ ಹಾನಿ ಮಾಡಿದ ಹಿನ್ನೆಲೆ ಜಯನಗರ ಠಾಣೆ ಇನ್ಸ್‌ಪೆಕ್ಟರ್ ರವಿ ಪಾಟೀಲ್ ಅವರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿದ್ದಾರೆ.

JOB NEWS

Jnanasudha Institutions Jobs
ಗೂಗಲ್‌ನಲ್ಲಿ ಶಿವಮೊಗ್ಗ ಲೈವ್ ಸುದ್ದಿಗಳು ನಿಮಗೆ ಮೊದಲು ಸಿಗಬೇಕೆ? ಕೆಳಗಿನ ಬಟನ್ ಒತ್ತಿ:

Case-Filed-against-Tractor-Driver-who-hit-divider