ಶಿವಮೊಗ್ಗ ಲೈವ್
ಶಿವಮೊಗ್ಗ: ಆರ್‌ಟಿಒ ಇ-ಚಲನ್ ಹೆಸರಿನಲ್ಲಿ ವಾಟ್ಸಪ್‌ಗೆ ಬಂದ ಆ್ಯಪ್ ಲಿಂಕ್ ಓಪನ್ ಮಾಡಿದ ವ್ಯಕ್ತಿಯೊಬ್ಬರು ₹3.11 ಲಕ್ಷ ಹಣ ಕಳೆದುಕೊಂಡಿದ್ದಾರೆ. (ಈ ಸುದ್ದಿಯನ್ನು ಇನ್ನು 31 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)
ಶಿವಮೊಗ್ಗದ ವ್ಯಕ್ತಿಯೊಬ್ಬರಿಗೆ ಸಂಚಾರ ನಿಯಮ ಉಲ್ಲಂಘನೆಯ ಚಲನ್ ಎಂಬಂತೆ ವಾಟ್ಸ್‌ಆಪ್‌ಗೆ RTO E-challan.apk ಫೈಲ್ ಬಂದಿತ್ತು. ಅದನ್ನು ಓಪನ್ ಮಾಡಿ ಪರಿಶೀಲಿಸಿದ ಕೆಲವೇ ಸಮಯದಲ್ಲೇ ಮೊಬೈಲ್‌ಗೆ ಸರಣಿ ಓಟಿಪಿಗಳು ಬರಲು ಆರಂಭವಾಗಿದ್ದವು ಎಂದು ಆರೋಪಿಸಲಾಗಿದೆ.

ಯಾರಿಗೂ ಓಟಿಪಿ ನೀಡದಿದ್ದರೂ, ಕೆನರಾ ಬ್ಯಾಂಕ್ ಖಾತೆಯಿಂದ ಹಂತ ಹಂತವಾಗಿ ಮೊದಲಿಗೆ ₹94,342 ಹಾಗೂ ನಂತರ ₹2,17,260 ಹಣ ವರ್ಗಾವಣೆಯಾದ ಮೆಸೇಜ್‌ಗಳು ಬಂದಿವೆ. ತಕ್ಷಣ ಬ್ಯಾಂಕ್ ಶಾಖೆಗೆ ತೆರಳಿ ವಿಚಾರಿಸಿದಾಗ ಆನ್‌ಲೈನ್ ವಂಚನೆ ನಡೆದಿರುವುದು ಬೆಳಕಿಗೆ ಬಂದಿದೆ. ಘಟನೆ ಸಂಬಂಧ ಶಿವಮೊಗ್ಗದ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
JOB NEWS

ಗೂಗಲ್‌ನಲ್ಲಿ ಶಿವಮೊಗ್ಗ ಲೈವ್ ಸುದ್ದಿಗಳು ನಿಮಗೆ ಮೊದಲು ಸಿಗಬೇಕೆ? ಕೆಳಗಿನ ಬಟನ್ ಒತ್ತಿ: