ಶಿವಮೊಗ್ಗ – ಬೆಂಗಳೂರು ನಡುವೆ ಮತ್ತೊಂದು ಹೊಸ ರೈಲು, ಟೈಮಿಂಗ್ಸ್ ಏನು? ಎಲ್ಲೆಲ್ಲಿದೆ ಗೊತ್ತಾ ಸ್ಟಾಪ್?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗ ಲೈವ್.ಕಾಂ | SHIMOGA | 22 ಜನವರಿ 2020

2019 readers copy new

ಶಿವಮೊಗ್ಗ – ಯಶವಂತಪುರ ನಡುವೆ ಜ.23ರಿಂದ ತತ್ಕಾಲ್‌ ಎಕ್ಸ್‌ಪ್ರೆಸ್‌ ಹೊಸ ರೈಲು (06539-06540) ವಾರದಲ್ಲಿ ನಾಲ್ಕು ದಿನ (ಮಂಗಳವಾರ, ಬುಧವಾರ, ಗುರುವಾರ ಮತ್ತು ಶುಕ್ರವಾರ) ಸಂಚರಿಸಲಿದೆ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ರೈಲು ಸೇವೆಗೆ ಜ.23ರಂದು ಮಧ್ಯಾಹ್ನ 3ಕ್ಕೆ ಶಿವಮೊಗ್ಗ ನಗರ ರೈಲ್ವೆ ನಿಲ್ದಾಣದಲ್ಲಿ ಚಾಲನೆ ದೊರೆಯಲಿದೆ. ಸಚಿವ ಕೆ.ಎಸ್. ಈಶ್ವರಪ್ಪ ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಉಪಸ್ಥಿತರಿರುವರು ಎಂದು ಹೇಳಿದ್ದಾರೆ.

ಬೆಳಗ್ಗೆ 9ಕ್ಕೆ ಯಶವಂತಪುರದಿಂದ ಹೊರಟು ಮಧ್ಯಾಹ್ನ 2.45ಕ್ಕೆ ಶಿವಮೊಗ್ಗ ತಲುಪಿ ಶಿವಮೊಗ್ಗದಿಂದ ಮಧ್ಯಾಹ್ನ 3.30ಕ್ಕೆ ಹೊರಟು ರಾತ್ರಿ 9ಕ್ಕೆ ಯಶವಂತಪುರ ತಲುಪಲಿದೆ. ಮಾರ್ಗ ಮಧ್ಯೆ ತುಮಕೂರು, ತಿಪಟೂರು, ಅರಸೀಕೆರೆ, ಕಡೂರು, ಬೀರೂರು, ತರೀಕೆರೆ ಹಾಗೂ ಭದ್ರಾವತಿಯಲ್ಲಿ ರೈಲು ನಿಲುಗಡೆ ಮಾಡಲಿದೆ ಎಂದು ಸಂಸದ ರಾಘವೇಂದ್ರ ತಿಳಿಸಿದ್ದಾರೆ.

ಶಿವಮೊಗ್ಗ-ಯಶವಂತಪುರ ಮಾರ್ಗದಲ್ಲಿ ಇಂಟರ್’ಸಿಟಿ ರೈಲು ವಾರದ ಏಳು ದಿನ ಸಂಚರಿಸಲು ಲಭ್ಯವಾಗಲಿದೆ. ನಾಗರಿಕರು ತಮ್ಮ ಅಗತ್ಯತೆಗಳಿಗೆ ಸೌಲಭ್ಯ ಸದುಪಯೋಗಪಡಿಸಿಕೊಳ್ಳುವಂತೆ ಮನವಿ ಮಾಡಿದ್ದಾರೆ. ವಾಣಿಜ್ಯ ಚಟುವಟಿಕೆಗಳು, ವ್ಯವಹಾರ, ಪ್ರವಾಸೋದ್ಯಮ, ಉದ್ಯೋಗಾವಕಾಶಗಳ ಲಭ್ಯತೆ ಹಾಗೂ ಜಿಲ್ಲೆಯ ಸರ್ವಾಂಗೀಣ ವಿಕಾಸವನ್ನು ದೃಷ್ಟಿಯಲ್ಲಿಟ್ಟುಕೊಂಡು ಇನ್ನಷ್ಟು ರೈಲ್ವೆ ಯೋಜನೆಗಳ ಅನುಷ್ಠಾನಕ್ಕೆ ಯತ್ನಿಸಲಾಗುವುದು. ನೆರೆಯ ಜಿಲ್ಲೆ ಹಾಗೂ ರಾಜ್ಯಗಳಿಗೂ ಸಂಪರ್ಕ ಕಲ್ಪಿಸುವ ಮಾರ್ಗಗಳನ್ನು ಅನುಷ್ಠಾನಗೊಳಿಸಲು ಈಗಾಗಲೆ ಯೋಜನೆಗಳನ್ನು ರೂಪಿಸಿ, ಸಂಬಂಧಿಸಿದ ಕೇಂದ್ರ ಸಚಿವರೊಂದಿಗೆ ಸಮಾಲೋಚನೆ ನಡೆಸಲಾಗಿದೆ ಎಂದು ತಿಳಿಸಿದ್ದಾರೆ.

BY Raghavendra 1 1 1

ಬಿ.ಎಸ್.ಯಡಿಯೂರಪ್ಪ ಶಿವಮೊಗ್ಗ ಲೋಕಸಭಾ ಸದಸ್ಯರಾಗಿದ್ದಾಗ ಆರಂಭಿಸಿದ್ದ ಯಶವಂತಪುರ-ಶಿವಮೊಗ್ಗ ಎಕ್ಸ್ ಪ್ರೆಸ್ ರೈಲಿಗೆ ನೂತನವಾಗಿ ವಾರದಲ್ಲಿ 4 ದಿನಗಳ ಶಿವಮೊಗ್ಗ-ಯಶವಂತಪುರ ತತ್ಕಾಲ್ ವಿಶೇಷ ರೈಲು ಮಂಜೂರಾಗಿದೆ. ಇನ್ನು ಎರಡು ನಗರಗಳ ನಡುವೆ ಇಂಟರ್‌ಸಿಟಿ ರೈಲು ಇನ್ಮುಂದೆ ವಾರದ 7 ದಿನವೂ ಸಂಚರಿಸಲಿದೆ ಎಂದು ತಿಳಿಸಿದ್ದಾರೆ.

New Train to be launched between Bangalore And Shimoga.

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ

ಈಗಲೇ ಕರೆ ಮಾಡಿ
9972194422

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : January 22, 2020

ಕೂಡ್ಲಿಯಲ್ಲಿ ಸಾವಿರ ಸಾವಿರ ಜನರಿಂದ ಪುಣ್ಯ ಸ್ನಾನ, ಹೇಗಿದೆ ಈ ಬಾರಿ ಜಾತ್ರೆ?

ಕೂಡ್ಲಿಯಲ್ಲಿ ಸಾವಿರ ಸಾವಿರ ಜನರಿಂದ ಪುಣ್ಯ ಸ್ನಾನ, ಹೇಗಿದೆ ಈ ಬಾರಿ ಜಾತ್ರೆ?

ಶಿವಮೊಗ್ಗದಲ್ಲಿ ಯುಗಾದಿ ಚಂದ್ರ ದರ್ಶನ, ಜನರಿಂದ ಪೂಜೆ, ಶುಭಾಶಯ ವಿನಿಮಯ

ಶಿವಮೊಗ್ಗದಲ್ಲಿ ಯುಗಾದಿ ಚಂದ್ರ ದರ್ಶನ, ಜನರಿಂದ ಪೂಜೆ, ಶುಭಾಶಯ ವಿನಿಮಯ

ಇವತ್ತು ಎಲ್ಲೆಲ್ಲಿ ಎಷ್ಟಿದೆ ಅಡಿಕೆ ರೇಟ್‌ | 20 ಮಾರ್ಚ್‌ 2026 | ಅಡಿಕೆ ಧಾರಣೆ

ಇವತ್ತು ಎಲ್ಲೆಲ್ಲಿ ಎಷ್ಟಿದೆ ಅಡಿಕೆ ರೇಟ್‌ | 20 ಮಾರ್ಚ್‌ 2026 | ಅಡಿಕೆ ಧಾರಣೆ

ಕಾರು, ಬೈಕ್‌ ಡಿಕ್ಕಿ, ಯುವಕ ದಾರುಣ ಸಾವು, ಹೇಗಾಯ್ತು ಘಟನೆ?

ಕಾರು, ಬೈಕ್‌ ಡಿಕ್ಕಿ, ಯುವಕ ದಾರುಣ ಸಾವು, ಹೇಗಾಯ್ತು ಘಟನೆ?

ಉಷಾ ನರ್ಸಿಂಗ್‌ ಹೋಂ ಸಿಗ್ನಲ್‌ನಲ್ಲಿನ ಅಪಘಾತ, ಸಿಸಿಟಿವಿ ದೃಶ್ಯ ಲಭ್ಯ, ಇಲ್ಲಿದೆ ಡಿಕ್ಕಿಯ ಕಂಪ್ಲೀಟ್‌ ಡಿಟೇಲ್ಸ್‌

ಉಷಾ ನರ್ಸಿಂಗ್‌ ಹೋಂ ಸಿಗ್ನಲ್‌ನಲ್ಲಿನ ಅಪಘಾತ, ಸಿಸಿಟಿವಿ ದೃಶ್ಯ ಲಭ್ಯ, ಇಲ್ಲಿದೆ ಡಿಕ್ಕಿಯ ಕಂಪ್ಲೀಟ್‌ ಡಿಟೇಲ್ಸ್‌

ರಂಗಾಯಣದಲ್ಲಿ ನಾಟಕ ನಿರ್ದೇಶಕ, ಸಹಾಯಕ ನಿರ್ದೇಶಕರಿಂದ ಅರ್ಜಿ ಆಹ್ವಾನ

ರಂಗಾಯಣದಲ್ಲಿ ನಾಟಕ ನಿರ್ದೇಶಕ, ಸಹಾಯಕ ನಿರ್ದೇಶಕರಿಂದ ಅರ್ಜಿ ಆಹ್ವಾನ

ಭದ್ರಾವತಿಯ 3 ಮಹಿಳೆಯರು ಸೇರಿ 6 ಮಂದಿಗೆ 2 ವರ್ಷ ಜೈಲು, ₹1.74 ಲಕ್ಷ ದಂಡ, ಯಾಕೆ?

ಭದ್ರಾವತಿಯ 3 ಮಹಿಳೆಯರು ಸೇರಿ 6 ಮಂದಿಗೆ 2 ವರ್ಷ ಜೈಲು, ₹1.74 ಲಕ್ಷ ದಂಡ, ಯಾಕೆ?

ಮೇ 1ರಿಂದ ಶಿವಮೊಗ್ಗ – ಬೆಂಗಳೂರು ಇಂಡಿಗೋ ವಿಮಾನ ರದ್ದು, ಕಾರಣವೇನು?

ಮೇ 1ರಿಂದ ಶಿವಮೊಗ್ಗ – ಬೆಂಗಳೂರು ಇಂಡಿಗೋ ವಿಮಾನ ರದ್ದು, ಕಾರಣವೇನು?

ದುರ್ಗಿಗುಡಿಯಲ್ಲಿ ಅಂಗಡಿಯೊಳಗೆ ಹೋಗಿ ಬಂದ ಮಾಲೀಕನಿಗೆ ಆಘಾತ, ದಾಖಲಾಯ್ತು ಪ್ರಕರಣ, ಆಗಿದ್ದೇನು?

ದುರ್ಗಿಗುಡಿಯಲ್ಲಿ ಅಂಗಡಿಯೊಳಗೆ ಹೋಗಿ ಬಂದ ಮಾಲೀಕನಿಗೆ ಆಘಾತ, ದಾಖಲಾಯ್ತು ಪ್ರಕರಣ, ಆಗಿದ್ದೇನು?

ಶಿವಮೊಗ್ಗ JNNCEಯಲ್ಲಿ ಹ್ಯಾಕ್‌ಫೆಸ್ಟ್‌, ತಮಿಳುನಾಡು, ಮೈಸೂರು, ದಾವಣಗೆರೆ ಕಾಲೇಜುಗಳಿಗೆ ಬಹುಮಾನ

ಶಿವಮೊಗ್ಗ JNNCEಯಲ್ಲಿ ಹ್ಯಾಕ್‌ಫೆಸ್ಟ್‌, ತಮಿಳುನಾಡು, ಮೈಸೂರು, ದಾವಣಗೆರೆ ಕಾಲೇಜುಗಳಿಗೆ ಬಹುಮಾನ

Leave a Comment