ಶಿವಮೊಗ್ಗ ಲೈವ್.ಕಾಂ | SHIMOGA | 23 ಜನವರಿ 2020
ಗಣರಾಜ್ಯೋತ್ಸವ ಪ್ರಯುಕ್ತ ಜ.25ರಂದು ಶಿವಮೊಗ್ಗ ರಂಗಾಯಣದಿಂದ ಪ್ಲಾಸ್ಟಿಕ್ನ ಅನಾಹುತ ವಿವರಿಸುವ ‘ಪ್ಲಾಸ್ಟಿ ಸಿಟಿ’ ಪಪಟ್ ಶೋ (ಸೂತ್ರಧಾರಿ ಗೊಂಬೆಯಾಟ) ಹಮ್ಮಿಕೊಳ್ಳಲಾಗಿದೆ ಎಂದು ರಂಗಾಯಣದ ನಿರ್ದೇಶಕ ಸಂದೇಶ ಜವಳಿ ತಿಳಿಸಿದರು.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಅಂದು ಬೆಳಗ್ಗೆ 11ಕ್ಕೆ ಸುವರ್ಣ ಸಂಸ್ಕೃತಿ ಭವನದಲ್ಲಿ ಶಾಲಾ ಮಕ್ಕಳಿಗೆ ಉಚಿತ ಪ್ರದರ್ಶನ ಏರ್ಪಡಿಸಿದ್ದು ಸಂಜೆ 6.30ಕ್ಕೆ ಸಾರ್ವಜನಿಕರಿಗೆ ಪ್ರದರ್ಶನ ಏರ್ಪಡಿಸಿದ್ದು 20 ರೂ. ಶುಲ್ಕ ನಿಗದಿಪಡಿಸಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಹೆಗ್ಗೋಡಿನ ಶ್ರವಣ ನಿರ್ದೇಶನದ ಓಂದು ಗಂಟೆಯ ಪ್ಲಾಸ್ಟಿ ಸಿಟಿ ನಾಟಕ ಪ್ಲಾಸ್ಟಿಕ್ ಬಳಕೆಯಿಂದ ಉಂಟಾಗಿರುವ ಸಮಸ್ಯೆಗಳ ಬಗ್ಗೆ ವಿವರಿಸಲಿದೆ. ಸೂತ್ರಧಾರಿ ಗೊಂಬೆಯಾಟದ ಮೂಲಕ ಇದನ್ನು ಪ್ರಸ್ತುತಪಡಿಸುತ್ತಿರುವುದು ವಿಶೇಷವಾಗಿದೆ ಎಂದರು. ಶಿವಮೊಗ್ಗ ರಂಗಾಯಣ ಮಕ್ಕಳ ರಂಗಭೂಮಿ ಚಟುವಟಿಕೆಗೆ ಹೆಚ್ಚು ಒತ್ತು ನೀಡಲಿದೆ. ಮಕ್ಕಳಿಗೆ ರಂಗ ತರಬೇತಿ ಶಿಬಿರ ಏರ್ಪಡಿಸುವ ಜತೆಗೆ ಶಿಕ್ಷಕರಿಗೂ 15 ದಿನಗಳ ವಿಶೇಷ ಕಾರ್ಯಾಗಾರ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ರಂಗಾಯಣ ಆಡಳಿತಾಧಿಕಾರಿ ಶಫಿ ಸಾದುದ್ದೀನ್ ಇದ್ದರು.
- ತ್ಯಾವರೆಕೊಪ್ಪ ಸಫಾರಿಯ ಹುಲಿ ಅಂಜನಿ ಸಾವು, ಕಾರಣವೇನು?
- ಶಿವಮೊಗ್ಗ ತಾಲೂಕಿನ ಹಲವೆಡೆ ನಾಳೆ ಇಡೀ ದಿನ ಕರೆಂಟ್ ಇರಲ್ಲ, ಎಲ್ಲೆಲ್ಲಿ?
- ಅಮೆರಿಕದಿಂದಲೇ ಆನ್ಲೈನ್ ಮೀಟಿಂಗ್, ಜವಾಬ್ದಾರಿ ಮೆರೆದ ಮಿನಿಸ್ಟರ್, ಯಾವೆಲ್ಲ ಸಭೆ ನಡೆಸಿದ್ದಾರೆ?
- ಸಾವಿರ ಮೂಟೆ ಸಿಮೆಂಟ್ ಆರ್ಡರ್ ಮಾಡಿದ್ದ ಗುತ್ತಿಗೆದಾರನಿಗೆ ಕೊನೆಗೆ ಕಾದಿತ್ತು ಶಾಕ್, ಆಗಿದ್ದೇನು?
- ಶಿವಮೊಗ್ಗ ಜಿಲ್ಲೆಯ ಯಾವ್ಯಾವ ತಾಲೂಕಿನಲ್ಲಿ ಎಷ್ಟಿದೆ ತಾಪಮಾನ? ಇಲ್ಲಿದೆ ಲಿಸ್ಟ್
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]