ಶಿವಮೊಗ್ಗ ಲೈವ್.ಕಾಂ | SHIMOGA | 25 ಜನವರಿ 2020
ಶ್ರೀ ಕ್ಷೇತ್ರ ಕೂಡಲಿಯಲ್ಲಿ ಮರಳು ಗಣಿಗಾರಿಕೆ ನಿಲ್ಲಿಸುವಂತೆ ಆಗ್ರಹಿಸಿ ಕೂಡಲಿ ಗ್ರಾಮಸ್ಥರು ಸಚಿವ ಕೆ.ಎಸ್.ಈಶ್ವರಪ್ಪ ಅವರಿಗೆ ಮನವಿ ಸಲ್ಲಿಸಿದರು. ಕೂಡಲಿ ಪುರಾಣ ಪ್ರಸಿದ್ಧ ಮತ್ತು ಐತಿಹಾಸಿಕ ಗ್ರಾಮವಾಗಿದ್ದು ಇತ್ತೀಚೆಗೆ ಮರಳುಗಾರಿಕೆಯಿಂದ ಈ ಗ್ರಾಮ ಅಳಿವಿನ ಅಂಚಿಗೆ ಸಾಗುತ್ತಿದೆ ಎಂದು ಆರೋಪಿಸಿದರು.

ಮರಳು ಗಣಿಗಾರಿಕೆಯಿಂದ ಇಡೀ ಗ್ರಾಮವೇ ನಶಿಸಿ ಹೋಗುವಂತಹ ಸ್ಥಿತಿಗೆ ತಲುಪಿದೆ. ಕೂಡಲಿ ಶ್ರೀ ಕ್ಷೇತ್ರ ಶಂಕರಾಚಾರ್ಯರ ಸ್ಥಾಪಿತ ಮೂಲ ಶಾರದಾಂಬೆಯ ಮಹಾಸಂಸ್ಥಾನ, ಆರ್ಯ ಆರೋಭ್ಯ ತೀರ್ಥ ಮಹಾಸಂಸ್ಥಾನಗಳು ಇಲ್ಲಿದ್ದು, ಗ್ರಾಮದಲ್ಲಿ ಮುಜರಾಯಿ ಇಲಾಖೆಗೆ ಸೇರಿದ ಹತ್ತಾರು ದೇವಸ್ಥಾನಗಳಿವೆ. ಅಂದಾಜು 2,500 ಜನರು ಇಲ್ಲಿ ವಾಸಿಸುತ್ತಿದ್ದಾರೆ. ಪವಿತ್ರ ತುಂಗಾ ಮತ್ತು ಭದ್ರಾ ನದಿಗಳ ಸಂಗಮ ಇದಾಗಿದೆ. ಇಂತಹ ಪವಿತ್ರ ಕ್ಷೇತ್ರದಲ್ಲಿ ಅಕ್ರಮವಾಗಲಿ ಸಕ್ರಮವಾಗಲಿ ಮರಳು ಗಣಿಗಾರಿಕೆ ಮಾಡಬಾರದು ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಮರಳು ಗಣಿಗಾರಿಕೆಯಿಂದ ಶಾಲಾ ಮಕ್ಕಳ ಮೇಲೆ ಪರಿಣಾಮ ಬೀರುತ್ತಿದೆ. ಜನತೆಯ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ದನ ಕರುಗಳು ನೀರು ಕುಡಿಯಲು ಹೋಗಿ ಮಣ್ಣು ಕುಸಿದು ಪ್ರಾಣ ಕಳೆದುಕೊಂಡಿವೆ ಎಂದು ದೂರಿದರು. ಮರಳು ಗಣಿಗಾರಿಕೆ ನಿಲ್ಲಿಸಬೇಕು ಮತ್ತು ಕೂಡಲಿ ಗ್ರಾಮವನ್ನು ಉಳಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಗ್ರಾಮಸ್ಥರಾದ ನಿಂಗಪ್ಪ, ಶೇಖರಪ್ಪ, ಕೃಷ್ಣಪ್ಪ, ರಂಗನಾಥ, ಶ್ರೀನಿವಾಸ, ಹರೀಶ್ ಇದ್ದರು.
- Police shoot accused in the leg in Bhadravathi
- ಭದ್ರಾವತಿಯಲ್ಲಿ ಬೆಳ್ಳಂಬೆಳಗ್ಗೆ ಆರೋಪಿ ಕಾಲಿಗೆ ಗುಂಡು ಹಾರಿಸಿದ ಪೊಲೀಸ್, ಏನಿದು ಕೇಸ್?
- ಶಿವಮೊಗ್ಗ ಜಿಲ್ಲೆಯಲ್ಲಿ ಬಿಸಿಲ ಅಬ್ಬರ ಮುಂದುವರಿಕೆ, ಇವತ್ತು ಎಲ್ಲೆಲ್ಲಿ ಎಷ್ಟಿರುತ್ತೆ ತಾಪಮಾನ?
- ದಿನ ಭವಿಷ್ಯ | ಇವತ್ತು ಯಾವ್ಯಾವ ರಾಶಿಗೆ ಹೇಗಿದೆ? ಗ್ರಹಗಳ ಸ್ಥಿತಿ ಏನು? ಪರಿಹಾರಗಳೇನು?
- ಶಿರಾಳಕೊಪ್ಪದಲ್ಲಿ ಬೀದಿಗಿಳಿದ ಮುಸ್ಲಿಮ್ ಸಮುದಾಯ, ಕೇಂದ್ರದ ವಿರುದ್ಧ ಆಕ್ರೋಶ
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | shivamoggalive@gmail.com
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200