ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | 30 ಜೂನ್ 2020
ಮನೆಯ ಶೌಚ ಗುಂಡಿಯನ್ನು ಕೆಲವೇ ದಿನದಲ್ಲಿ ಕ್ಲೀನ್ ಮಾಡುವ ಪೌಡರನ್ನು ಶಿವಮೊಗ್ಗದ ಸಂಸ್ಥೆಯೊಂದು ಸಂಶೋಧನೆ ಮಾಡಿದೆ. ಆರಂಭದಲ್ಲೇ ಈ ಸಂಸ್ಥೆ ಸಂಶೋಧಿಸಿರುವ ಪೌಡರ್‍ಗೆ ಭಾರೀ ಡಿಮಾಂಡ್ ಬಂದಿದೆ. ಶಿವಮೊಗ್ಗ ಸೇರಿದಂತೆ ಹೊರ ಜಿಲ್ಲೆ, ರಾಜ್ಯದಲ್ಲು ಪೌಡರ್‍ಗೆ ಬೇಡಿಕೆ ಬಂದಿದೆ.
ಏನಿದು ಪೌಡರ್?
ಶಿವಮೊಗ್ಗದ ರೋಹಿಣಿ ಸೈಂಟಿಫಿಕ್ ಕಂಪನಿ ಸ್ಯಾನ್ ಡ್ರೈನ್ ಎಂಬ ಪೌಡರ್ ಸಂಶೋಧನೆ ಮಾಡಿದೆ. ಮನೆಯ ಶೌಚ ಗುಂಡಿ ಭರ್ತಿಯಾಗಿ, ದುರ್ವಾಸನೆ ಹರಡುವುದನ್ನು ತಪ್ಪಿಸಲು ಈ ಪೌಡರ್ ಉಪಯುಕ್ತ.
ಹೇಗೆ ಕೆಲಸ ಮಾಡುತ್ತೆ?
ಶೌಚ ಗುಂಡಿ ಭರ್ತಿಯಾದರೆ ದುರ್ವಾಸನೆ ತಪ್ಪಿದ್ದಲ್ಲ. ಆರೋಗ್ಯ ಸಮಸ್ಯೆಗಳು ನಿಶ್ಚಿತ. ಅದರಲ್ಲೂ ಹಿರಿಯರು, ಮಕ್ಕಳು ಬಹುಬೇಗ ಸಮಸ್ಯೆಗೆ ತುತ್ತಾಗುತ್ತಾರೆ. ಇದೇ ಕಾರಣಕ್ಕೆ ಕೆಲವರು ಸೆಪ್ಟಿಕ್ ಟ್ಯಾಂಕರ್ ಲಾರಿಗಳನ್ನು ಕರೆಯಿಸಿ ಕ್ಲೀನ್ ಮಾಡಿಸುತ್ತಾರೆ. ಆದರೆ ಈ ಮಾದರಿಯಿಂದ ಶೌಚ ಗುಂಡಿ ಸಂಪೂರ್ಣ ಕ್ಲೀನ್ ಆಗುವುದಿಲ್ಲ ಎಂಬ ವಾದವಿದೆ. ಇನ್ನು ಶೌಚ ಗುಂಡಿಗೆ ಜನರನ್ನು ಇಳಿಸಿ, ಕ್ಲೀನ್ ಮಾಡಿಸುವಂತಿಲ್ಲ. ಈ ಅನಿಷ್ಟ ಪದ್ಧತಿಗೆ ನಿಷೇಧವಿದೆ. ಇದು ಶಿಕ್ಷಾರ್ಹ ಅಪರಾಧವೂ ಹೌದು. ಆದರೆ ಶೌಚಗುಂಡಿ ಸಂಪೂರ್ಣ ಕ್ಲೀನ್ ಆಗದಿದ್ದರೆ ಯಾವಾಗ ಬೇಕಿದ್ದರು ಸಮಸ್ಯ ಉದ್ಭವವಾಗಬಹುದು. ಇಂತಹ ಸಮಸ್ಯೆಗಳನ್ನು ತಡೆಯುವ ಸಲುವಾಗಿಯೇ ಸ್ಯಾನ್ ಡ್ರೈನ್ ಪೌಡರ್ ಉಪಯುಕ್ತವಾಗಿದೆ. ಒಮ್ಮೆ ಈ ಪೌಡರ್ ಬಳಿಸಿದರೆ ಬಹುಕಾಲ ಶೌಚಗುಂಡಿ ಕ್ಲೀನ್ ಆಗುತ್ತದೆ.
ಬಳಕೆ ಹೇಗೆ? ಪರಿಣಾಮ ಏನು?
ಸ್ಯಾನ್ ಡ್ರೈನ್ ಪೌಡರನ್ನು ಅತ್ಯಾಧುನಿಕ ಬಯೋ ಆಗ್ಗುಮೆಂಟೇಷನ್ ತಂತ್ರಜ್ಞಾನದಿಂದ ತಯಾರಿಸಲಾಗಿದೆ. ರಾಸಾಯನಿಕ ವಸ್ತುಗಳ ಬಳಕೆ ಆಗದೆ ಇರುವುದರಿಂದ ಅಡ್ಡಪರಿಣಾಮ ಇಲ್ಲ ಅನ್ನುತ್ತಾರೆ ರೋಹಿಣಿ ಸೈಂಟಿಫಿಕ್ ಕಂಪನಿ ಮುಖ್ಯಸ್ಥ ಡಾ.ಬಿ.ಕೆ.ಚೇತನ್. ಇದರ ಬಳಕೆಯು ಸುಲಭ. ಈ ಪೌಡರನ್ನು ಶೌಚಾಲಯದ ಬೇಸಿನ್‍ಗೆ ಹಾಕಿ, ನೀರು ಸುರಿದರೆ ಸಾಕು. ಪೌಡರ್ ಶೌಚಗುಂಡಿಗೆ ತಲುಪುತ್ತದೆ. ಕೆಲಸ ಆರಂಭಿಸುತ್ತದೆ. ಶೌಚ ಗುಂಡು ಭರ್ತಿಯಾಗುವುದನ್ನು ತಡೆಯುತ್ತದೆ.
ಕ್ಷಮತೆಯ ಕಾರಣಕ್ಕೆ ಸ್ಯಾನ್ ಡ್ರೈನ್ ದೊಡ್ಡ ಡಿಮಾಂಡ್ ಸೃಷ್ಟಿಯಾಗಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಡಿಮಾಂಡ್ ಹೆಚ್ಚಿದಂತೆ, ಹೊರ ಜಿಲ್ಲೆ, ಹೊರ ರಾಜ್ಯಕ್ಕೂ ಈಗ ಸ್ಯಾನ್ ಡ್ರೈನ್ ಪೂರೈಕೆಯಾಗುತ್ತಿದೆ. ಅಂದಹಾಗೆ ಸ್ಯಾನ್ ಡ್ರೈನ್ ಖರೀದಿ ಅಥವಾ ಈ ಕುರಿತು ಇನ್ನಷ್ಟು ಮಾಹಿತಿ ಬೇಕಿದ್ದರೆ 8073246761 ಮೊಬೈಲ್ ನಂಬರ್ ಸಂಪರ್ಕ ಮಾಡಬಹುದು.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422