ರಿಪ್ಪನ್‌ಪೇಟೆ, ಸೊರಬ ಪೊಲೀಸರ ದಾಳಿ, ಗಾಂಜಾ ಗಿಡಗಳು ವಶಕ್ಕೆ, ಒಬ್ಬ ಅರೆಸ್ಟ್, ಮತ್ತೊಬ್ಬ ಎಸ್ಕೇಪ್

260920 Soraba Police Raid On Ganja 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 26 ಸೆಪ್ಟಂಬರ್ 2020 ಸೊರಬ ಮತ್ತು ಹೊಸನಗರ ತಾಲೂಕು ರಿಪ್ಪನ್‍ಪೇಟೆಯಲ್ಲಿ ಪೊಲೀಸರು ದಾಳಿ ನಡೆಸಿ ಜಮೀನಿನಲ್ಲಿ ಬೆಳೆದಿದ್ದ ಗಾಂಜಾ ಗಿಡಗಳನ್ನು ವಶಕ್ಕೆ ಪಡೆದಿದ್ದಾರೆ. ಸೊರಬ ರಿಪೋರ್ಟ್ ಹೆಚ್ಚೆ ಗ್ರಾಮದಲ್ಲಿ ಜಯಪ್ಪ ಎಂಬಾತ ಶುಂಠಿ ಬೆಳೆಯ ನಡುವೆ ಗಾಂಜಾ ಬೆಳೆದಿರುವ ಕುರಿತು ಪೊಲೀಸರಿಗೆ ಖಚಿತ ಮಾಹಿತಿ ಲಭ್ಯವಾಗಿತ್ತು. ದಾಳಿ ನಡೆಸಿ 20 ಗಾಂಜಾ ಗಿಡಗಳನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿ ಜಯಪ್ಪ ಪರಾರಿಯಾಗಿದ್ದು, ಈತನ ಪತ್ತೆ ಕಾರ್ಯ ನಡೆಯುತ್ತಿದೆ. ಎಎಸ್‍ಪಿ ಶ್ರೀನಿವಾಸಲು, … Read more

ಮಾಸ್ಕ್ ಧರಿಸದವರಿಗೆ ಶಿವಮೊಗ್ಗ ಪೊಲೀಸರಿಂದ ದಂಡದ ಬಿಸಿ, ಎಷ್ಟು ಕೇಸ್ ದಾಖಲಿಸಲಾಗಿದೆ? ವಿಧಿಸಲಾದ ದಂಡವೆಷ್ಟು?

police jeep

ಶಿವಮೊಗ್ಗ ಲೈವ್.ಕಾಂ | SHIMOGA NEWS | 26 ಸೆಪ್ಟಂಬರ್ 2020 ಕರೋನ ವ್ಯಾಪಕವಾಗಿ ಹರಡುತ್ತಿದೆ. ಹಾಗಿದ್ದೂ ಮಾಸ್ಕ್ ಧರಿಸದೆ ಓಡಾಡುವವರಿಗೆ ಶಿವಮೊಗ್ಗ ಪೊಲೀಸರು ಬಿಸಿ ಮುಟ್ಟಿಸುತ್ತಿದ್ದಾರೆ. ದಂಡ ಹಾಕುತ್ತಿದ್ದಾರೆ. ಜಿಲ್ಲೆಯಾದ್ಯಂತ ಹಲವು ಕಡೆ  ದಿಢೀರ್ ಕಾರ್ಯಾಚರಣೆ ನಡೆಸಿರುವ ಪೊಲೀಸರು, ಹಲವರಿಗೆ ದಂಡ ಹಾಕಿದ್ದಾರೆ. ಸೆಪ್ಟೆಂಬರ್ 24 ಮತ್ತು 25ರಂದು ಕಾರ್ಯಾಚರಣೆ ನಡೆಸಿ ಒಟ್ಟು 1225 ಪ್ರಕರಣ ದಾಖಲಿಸಿ, 1,84,600 ರೂ. ದಂಡ ವಿಧಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಸೆಪ್ಟೆಂಬರ್ 24ರಂದು 477 ಪ್ರಕರಣ ದಾಖಲಿಸಿ, 81,400 … Read more

ಗಾಜನೂರು ಸಮೀಪ ಅಬಕಾರಿ ಇಲಾಖೆ ದಾಳಿ, ಜಮೀನಿನಲ್ಲಿ ಬೆಳೆದಿದ್ದ 75 ಸಾವಿರ ಮೌಲ್ಯದ ಗಾಂಜಾ ಗಿಡ ವಶಕ್ಕೆ

250920 Ganja Raid by Excise Department 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 25 ಸೆಪ್ಟಂಬರ್ 2020 ಮಾರಾಟದ ಉದ್ದೇಶದಿಂದ ಜಮೀನಿನಲ್ಲಿ ಬೆಳೆದ ಗಾಂಜಾ ಗಿಡಗಳನ್ನು ಅಬಕಾರಿ ಅಧಿಕಾರಿಗಳು ದಾಳಿ ಮಾಡಿ ವಶಕ್ಕೆ ಪಡೆದಿದ್ದಾರೆ. ಗಾಜನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೂಡಲಮನೆ ಗ್ರಾಮದಲ್ಲಿ ದಾಳಿ ನಡೆಸಲಾಯಿತು. ಮೂಡಲಮನೆ ಟಿ.ಆರ್.ಮಂಜುನಾಥ್ ಎಂಬಾತ ಇಲ್ಲಿನ ಸರ್ವೆ ನಂಬರ್ 27ರಲ್ಲಿ ಗಾಂಜಾ ಗಿಡಗಳನ್ನು ಬೆಳೆಸಿದ್ದರು. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ, ಹನ್ನೊಂದು ಗಾಂಜಾ ಗಿಡಗಳನ್ನು ವಶಕ್ಕೆ ಪಡೆಯಲಾಗಿದೆ. ಇದರ ಮೌಲ್ಯ 75 ಸಾವಿರ ರೂ. ಎಂದು … Read more

ಆಯನೂರು ಸರ್ಕಲ್‌ನಲ್ಲಿ ಬೈಕ್‌ಗೆ ಜೀಪ್ ಡಿಕ್ಕಿ, ನವುಲೆ ಯುವಕ ಸಾವು

240920 Jeep Bike Accident at Ayanur Circle 1

ಶಿವಮೊಗ್ಗ ಲೈವ್.ಕಾಂ | AYANUR NEWS | 24 ಸೆಪ್ಟಂಬರ್ 2020 ಆಯನೂರು ಸರ್ಕಲ್‍ನಲ್ಲಿ ಡಿಯೋ ಬೈಕ್‍ಗೆ ಜೀಪ್‍ ಡಿಕ್ಕಿ ಹೊಡೆದು ಯುವಕನೊಬ್ಬ ಸಾವನ್ನಪ್ಪಿದ್ದಾನೆ. ಈ ಸಂಬಂಧ ಕುಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನವುಲೆಯ ರವಿಕುಮಾರ್ (20) ಮೃತ ಯುವಕ. ಸ್ನೇಹಿತನೊಬ್ಬನ ಮನೆಗೆ ಹೋಗಿ ಶಿವಮೊಗ್ಗಕ್ಕೆ ಹಿಂತಿರುಗುತ್ತಿದ್ದ ವೇಳೆ ಘಟನೆ ಸಂಭವಿಸಿದೆ. ಆಯನೂರು ಸರ್ಕಲ್‍ ಬಳಿ ಎದುರಿನಿಂದ ವೇಗವಾಗಿ ಬಂದ ಜೀಪ್‍ ರವಿಕುಮಾರ್ ಬೈಕ್‍ಗೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ತಲೆ ಮತ್ತು ಎದೆ ಭಾಗಕ್ಕೆ ಗಂಭಿರ … Read more

ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ, ಕೆಳಗಿಳಿದ ಮೂವರು ಸಾವು, ಕಾರಿನಲ್ಲಿದ್ದ ಮೂವರ ರಕ್ಷಣೆ, ಹೇಗಾಯ್ತು ಘಟನೆ?

240920 Garthikere Car Accident 1

ಶಿವಮೊಗ್ಗ ಲೈವ್.ಕಾಂ | HOSANAGARA NEWS | 24 ಸೆಪ್ಟಂಬರ್ 2020 ತಾಲೂಕು ಗರ್ತಿಕೆರೆ ಗ್ರಾಮದಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ಕಾರಿನಲ್ಲಿದ್ದ ಮೂವರು ಸಾವನ್ನಪ್ಪಿದ್ದಾರೆ. ಕಾರು ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿದ್ದು, ಕಾರಿನಿಂದ ಕೆಳಗಿಳಿದವರು ಸಾವನ್ನಪ್ಪಿದ್ದಾರೆ. ಆತಂಕದಿಂದ ಕಾರಿನಲ್ಲೇ ಕುಳಿತ ಮೂವರ ರಕ್ಷಣೆ ಮಾಡಲಾಗಿದೆ. ಹೇಗಾಯ್ತು ಅಪಘಾತ? ಹೊಸನಗರ ಕಡೆಯಿಂದ ರಾತ್ರಿ ರಿಪ್ಪನ್‍ಪೇಟೆಗೆ ಬರುತ್ತಿದ್ದ ಕಾರು, ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಪರಿಶೀಲಿಸಲು ಕಾರಿನಿಂದ ಕೆಳಗಿಳಿದ ಚಾಲಕ ಲೋಹಿತ್ (34) ದಿಢೀರ್ ಕುಸಿದು ಬಿದ್ದಿದ್ದಾರೆ. … Read more

ತೀರ್ಥಹಳ್ಳಿಗೆ ಗಾಂಜಾ ಸಾಗಣೆ, ಓರ್ವ ಮಹಿಳೆ ಸೇರಿ ನಾಲ್ವರು ಅರೆಸ್ಟ್

220920 Thirthahalli Police Arest Ganja Peddlers 1

ಶಿವಮೊಗ್ಗ ಲೈವ್.ಕಾಂ | THIRTHAHALLI NEWS | 22 ಸೆಪ್ಟಂಬರ್ 2020 ಕಾರ್ಕಳದಿಂದ ತೀರ್ಥಹಳ್ಳಿಗೆ ಕಾರಿನಲ್ಲಿ ಸಾಗಿಸುತ್ತಿದ್ದ ಗಾಂಜಾವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪ್ರಕರಣ ಸಂಬಂಧ ಓರ್ವ ಮಹಿಳೆ ಸೇರಿ ನಾಲ್ವರನ್ನು ಬಂಧಿಸಲಾಗಿದೆ. ಜೀನತ್, ಜೀಶನ್, ಜಬೀರ್ ಮತ್ತು ಮುಬಾರಕ್ ಬಂಧಿತರು. ಕಾರ್ಕಳದಿಂದ ಸ್ವಿಫ್ಟ್ ಕಾರಿನಲ್ಲಿ ಎರಡು ಕೆ.ಜಿ.ಯಷ್ಟು ಗಾಂಜಾ ಸಾಗಿಸುತ್ತಿದ್ದರು. ತೀರ್ಥಹಳ್ಳಿ ತಾಲೂಕು ಬಾಳೆಬೈಲು ಬಳಿ ಚೆಕ್‍ಪೋಸ್ಟ್‍ನಲ್ಲಿ ಪೊಲೀಸರು ಕಾರು ತಡೆದು ಪರಿಶೀಲನೆ ನಡೆಸಿದಾಗ ಗಾಂಜಾ ಇರುವುದು ಪತ್ತೆಯಾಗಿತ್ತು. ತೀರ್ಥಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಾಲ್ವರನ್ನು … Read more

ಅಬಕಾರಿ ಇಲಾಖೆ ಅಧಿಕಾರಿಗಳ ದಾಳಿ, 20 ಸಾವಿರ ಮೌಲ್ಯದ ಗಾಂಜಾ ಗಿಡಗಳು ವಶಕ್ಕೆ

shivamogga graphics map

ಶಿವಮೊಗ್ಗ ಲೈವ್.ಕಾಂ | SHIMOGA NEWS | 16 ಸೆಪ್ಟಂಬರ್ 2020 ಬನ್ನಿಕೆರೆ ಗ್ರಾಮದಲ್ಲಿ ಅಕ್ರಮವಾಗಿ ಗಾಂಜಾ ಬೆಳೆದಿದ್ದ ಸ್ಥಳದ ಮೇಲೆ ಅಬಕಾರಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ, 20 ಸಾವಿರ ಮೌಲ್ಯದ ಗಾಂಜಾ ಗಿಡಗಳನ್ನು ವಶಕ್ಕೆ ಪಡೆಯಲಾಗಿದೆ. ಅಬಕಾರಿ ಉಪ ಆಯುಕ್ತ ಕ್ಯಾಪ್ಟನ್ ಅಜಿತ್ ಕುಮಾರ್ ನಿರ್ದೇಶನದ ಮೇರೆಗೆ ದಾಳಿ ಬನ್ನಿಕೆರೆ ಗ್ರಾಮದಲ್ಲಿ ಮೂರ್ತಿ ನಾಯ್ಕ ಅಲಿಯಾಸ್ ಮಾರುತಿ ನಾಯ್ಕ ಎಂಬಾತ ಬೆಳೆದಿದ್ದ ಗಾಂಜಾ ಗಿಡಗಳನ್ನು ವಶಕ್ಕ ಪಡೆಯಲಾಗಿದೆ. ಆರೋಪಿ ಮೂರ್ತಿ ನಾಯ್ಕ ಪರಾರಿಯಾಗಿದ್ದು, ಆರೋಪಿಯ … Read more

ಶಿವಮೊಗ್ಗದ ಇನ್ಸ್‌ಪೆಕ್ಟರ್‌, ನಿವೃತ್ತ ಸಬ್ ಇನ್ಸ್‌ಪೆಕ್ಟರ್‌ ಫೇಸ್ ಬುಕ್ ಹ್ಯಾಕ್, ಸ್ನೇಹಿತರಿಂದ ಹಣಕ್ಕೆ ಡಿಮಾಂಡ್

police cap

ಶಿವಮೊಗ್ಗ ಲೈವ್.ಕಾಂ | SHIMOGA NEWS | 16 ಸೆಪ್ಟಂಬರ್ 2020 ಪೊಲೀಸರ ಫೇಸ್‍ಬುಕ್ ಖಾತೆ ಮೇಲೆ ಖದೀಮರ ಕಣ್ಣು ಬಿದ್ದಿದೆ. ಕೆಲವರ ಫೇಸ್‍ಬುಕ್‍ ಖಾತೆ ಹ್ಯಾಕ್ ಮಾಡಿ, ಇನ್ನೂ ಕೆಲವರ ನಕಲಿ ಖಾತೆಗಳನ್ನು ಸೃಷ್ಟಿಸಿ, ಅವರ ಪರಿಚಿತರಿಂದ ಹಣ ವಸೂಲಿ ಮಾಡಲಾಗುತ್ತಿದೆ. ಈ ಖದೀಮರ ಹಾವಳಿಯಿಂದ ಪೊಲೀಸರು ಮುಜುಗರಕ್ಕೀಡಾಗಿದ್ದಾರೆ. ಯಾರೆಲ್ಲರ ಫೇಸ್‍ಬುಕ್‍ ಹ್ಯಾಕ್ ಆಗಿದೆ? ಕೇಸ್ 1 ಶಿವಮೊಗ್ಗ ಮಹಿಳಾ ಪೊಲೀಸ್ ಠಾಣೆಯ ಇನ್ಸ್‍ಪೆಕ್ಟರ್ ಅಭಯ ಪ್ರಕಾಶ್ ಅವರ ಹೆಸರಿನಲ್ಲಿ ಫೇಸ್‍ಬುಕ್‍ನಲ್ಲಿ ನಕಲಿ ಖಾತೆಯನ್ನು ಸೃಷ್ಟಿಸಲಾಗಿದೆ. … Read more

ಕಾಚಿನಕಟ್ಟೆ ಸಮೀಪ ಕಾರು ಅಪಘಾತ ಕೇಸ್, ಮತ್ತೊಬ್ಬ ಯುವಕ ಸಾವು

130920 Car Accident at Kachinakatte 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 14 ಸೆಪ್ಟಂಬರ್ 2020 ಶಿವಮೊಗ್ಗದ ಕಾಚಿನಕಟ್ಟೆ ಸಮೀಪ ಸಂಭವಿಸಿದ ಭೀಕರ ಅಪಘಾತದಲ್ಲಿ ಮತ್ತೊಬ್ಬ ಯುವಕ ಮೃತನಾಗಿದ್ದಾನೆ. ಕಾರಿನಲ್ಲಿದ್ದ ನಾಲ್ವರ ಪೈಕಿ ಇಬ್ಬರು ಮೃತರಾಗಿದ್ದು, ಇನ್ನಿಬ್ಬರು ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದೊಡ್ಡಿಬೀಳು ಬಳಿ ಕಾರು ಅಪಘಾತಕ್ಕೀಡಾಯಿತು. ಎನ್‍.ಆರ್.ಪುರದ ಜೈಸನ್ (20) ಸ್ಥಳದಲ್ಲೆ ಮೃತರಾಗಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಅನುರಾಗ್ (21) ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಚಿಕಿತ್ಸೆಗೆ ಮುನ್ನೆವೆ ಮೃತರಾಗಿದ್ದಾರೆ. ವಿದ್ಯುತ್ ಕಂಬ, ಮರಕ್ಕೆ ಡಿಕ್ಕಿ ಜೈಸನ್, ಅನುರಾಗ್, … Read more

ಕಾಚಿನಕಟ್ಟೆ ಸಮೀಪ ಭೀಕರ ಅಪಘಾತ, ಕಾರಿನಲಿದ್ದ‌ ಓರ್ವ ಸಾವು, ಮೂವರ ಸ್ಥಿತಿ ಗಂಭೀರ

130920 Car Accident at Kachinakatte 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 13 ಸೆಪ್ಟಂಬರ್ 2020 ಕಾರು ಮರಕ್ಕೆ ಡಿಕ್ಕಿ ಹೊಡೆದು ಓರ್ವ ಸ್ಥಳದಲ್ಲೆ ಸಾವನ್ನಪ್ಪಿದ್ದಾನೆ‌. ಶಿವಮೊಗ್ಗ ತಾಲೂಕು ಕಾಚಿನಕಟ್ಟೆ ಗ್ರಾಮದ ಬಳಿ ಘಟನೆ ಸಂಭವಿಸಿದೆ. ಶಿವಮೊಗ್ಗದಿಂದ ಎನ್‍.ಆರ್.ಪುರಕ್ಕೆ ಕಾರು ತೆರಳುತ್ತಿತ್ತು ಎಂದು ತಿಳಿದು ಬಂದಿದೆ. ಕಾಚಿನಕಟ್ಟೆ ಸಮೀಪ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಗುದ್ದಿದೆ. ಅಪಘಾತದ ರಭಸಕ್ಕೆ ಕಾರಿನಲ್ಲಿದ್ದ ಓರ್ವ ಮೃತಪಟ್ಟಿದ್ದಾನೆ. ಮೂವರ ಸ್ಥಿತಿ ಗಂಭೀರವಾಗಿದೆ. ಜೈಸನ್ (20) ಮೃತ ಯುವಕ. ಅಪಘಾತದ ರಭಸಕ್ಕೆ ಜೈಸನ್ ಸ್ಥಳದಲ್ಲೆ ಸಾವನ್ನಪ್ಪಿದ್ದಾನೆ. ಗಾಯಾಳುಗಳನ್ನು … Read more