ಪ್ರಿಯಾ ಹೆಸರಿನ ಗ್ರೂಪ್‌ ಸೇರಿದ್ದ ಶಿವಮೊಗ್ಗದ ಯುವಕನಿಗೆ ಸ್ವಲ್ಪ ದಿನದ ಬಳಿಕ ಕಾದಿತ್ತು ಬಿಗ್‌ ಶಾಕ್‌, ಆಗಿದ್ದೇನು?

SMS-Fraud-Shimoga-CEN-Police-Station.

ಶಿವಮೊಗ್ಗ : ಆನ್‌ಲೈನ್‌ ಜಾಬ್‌ ಹೆಸರಿನಲ್ಲಿ ಶಿವಮೊಗ್ಗ ಜಿಲ್ಲೆಯ ಯುವಕನೊಬ್ಬನಿಗೆ 6.43 ಲಕ್ಷ ರೂ. ವಂಚಿಸಲಾಗಿದೆ. ಆನ್‌ಲೈನ್‌ ಜಾಬ್‌ (Online Job) ಎಂದು ವಾಟ್ಸಪ್‌ಗೆ ಬಂದ ಲಿಂಕ್‌ ಕ್ಲಿಕ್‌ ಮಾಡಿದಾಗ ಟೆಲಿಗ್ರಾಂನಲ್ಲಿ ಪ್ರಿಯಾ ಎಂಬ ಗ್ರೂಪ್‌ಗೆ ಯುವಕನ ನಂಬರ್‌ ಜಾಯಿನ್‌ ಮಾಡಲಾಗಿತ್ತು. ಬಳಿಕ ಯುವಕನ ವಿಳಾಸ ಸೇರಿದಂತೆ ಅಗತ್ಯ ಮಾಹಿತಿ ಪಡೆದು ರಿವ್ಯು ಮಾಡಿದರೆ ಸಂಬಳ ನೀಡುವುದಾಗಿ ನಂಬಿಸಲಾಯಿತು. ಆರಂಭದಲ್ಲಿ ಒಂದೆರಡು ಸ್ಕ್ರೀನ್‌ ಶಾಟ್‌ ಕಳುಹಿಸಿ ರಿವ್ಯು ಪಡೆದುಕೊಂಡರು. 100 ರೂ. ಅನ್ನು ಯುವಕನ ಬ್ಯಾಂಕ್‌ ಖಾತೆಗೆ … Read more

ಶಿವಮೊಗ್ಗದಲ್ಲಿ ಶೆಡ್‌ನಲ್ಲಿ ನೇಣು ಬಿಗಿದುಕೊಂಡ ವ್ಯಕ್ತಿ

Crime-News-General-Image

ಶಿವಮೊಗ್ಗ : ಇಟ್ಟಿಗೆ ನಿರ್ಮಾಣದ ಶೆಡ್‌ನಲ್ಲಿ (Shed) ವ್ಯಕ್ತಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಶಿವಮೊಗ್ಗ ತಾಲೂಕು ತೋಟದಕೆರೆ ಗ್ರಾಮದಲ್ಲಿ ಬುಧವಾರ ಘಟನೆ ಸಂಭವಿಸಿದೆ. ಉಂಬ್ಳೆಬೈಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುರಳಿಹಳ್ಳಿಯ ಜಾನಕಿರಾಮ್‌ (34) ಮೃತರು. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಘಟನೆ ಸಂಬಂಧ ತುಂಗಾ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ » ಶಿವಮೊಗ್ಗದಲ್ಲಿ ಸ್ನೇಹಿತನಿಂದಲೇ ವ್ಯಕ್ತಿಯ ಕೊಲೆ, ಹೇಗಾಯ್ತು ಘಟನೆ?

ಶಿವಮೊಗ್ಗದಲ್ಲಿ ಸ್ನೇಹಿತನಿಂದಲೇ ವ್ಯಕ್ತಿಯ ಕೊಲೆ, ಹೇಗಾಯ್ತು ಘಟನೆ?

Police-Jeep-With-Light-New.

ಶಿವಮೊಗ್ಗ : ಸ್ನೇಹಿತರ ನಡುವಿನ ಭಿನ್ನಾಭಿಪ್ರಾಯದಿಂದ ಆರಂಭವಾದ ಜಗಳ (Altercation) ಕೊಲೆಯಲ್ಲಿ ಅಂತ್ಯವಾಗಿದೆ. ತಾಲೂಕಿನ ತ್ಯಾವರೆಕೊಪ್ಪದಲ್ಲಿ ಬುಧವಾರ ಘಟನೆ ಸಂಭವಿಸಿದೆ. ತ್ಯಾವರೆಕೊಪ್ಪ ಗ್ರಾಮದ ದೇವರಾಜು (31) ಮೃತರು. ಈತನ ಸ್ನೇಹಿತ ವೆಂಕಟೇಶ್‌ (36) ಹತ್ಯೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ಇಬ್ಬರ ಮಧ್ಯೆ ಗಲಾಟೆಯಾಗಿದ್ದು (Altercation) ಈ ಸಂದರ್ಭ ವೆಂಕಟೇಶ್‌, ದೇವರಾಜನಿಗೆ ಗುದ್ದಲಿಯಿಂದ ತಲೆಗೆ ಹೊಡೆದಿದ್ದಾನೆ ಎಂದು ಆರೋಪಿಸಲಾಗಿದೆ. ತೀವ್ರ ಗಾಯಗೊಂಡಿದ್ದ ದೇವರಾಜು ಸ್ಥಳದಲ್ಲಿ ಸಾವನ್ನಪ್ಪಿದ್ದಾನೆ. ಘಟನೆ ಸಂಬಂಧ ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ … Read more

ಮಹಿಳೆ ಸ್ನಾನ ಮಾಡುವಾಗ ಇಣುಕಿದ ಯುವಕ, ಅರೆಸ್ಟ್‌

Bhadravathi-News-Update

ಭದ್ರಾವತಿ : ಮಹಿಳೆಯೊಬ್ಬರು ಸ್ನಾನ ಮಾಡುವಾಗ ಇಣುಕಿ ನೋಡಿದ ಯುವಕನನ್ನು (Youth) ಪೊಲೀಸರು ಬಂಧಿಸಿದ್ದಾರೆ. ಭದ್ರಾವತಿಯ ಹೊಸಮನೆ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭಸಿದೆ. ಮನೋಜ್‌ (25) ಎಂಬಾತನನ್ನು ಬಂಧಿಸಲಾಗಿದೆ. ಮಹಿಳೆಯೊಬ್ಬರು ಸ್ನಾನ ಮಾಡುವಾಗ ಮನೋಜ್‌ ಇಣುಕಿ ನೋಡುತ್ತಿದ್ದ. ಮಹಿಳೆಯ ಪತಿ ಇದನ್ನು ಗಮನಿಸಿದಾಗ ಮನೋಜ್‌ ಅಲ್ಲಿಂದ ಪರಾರಿಯಾಗಿದ್ದ ಎಂದು ಆರೋಪಿಸಲಾಗಿದೆ. ದೂರು ನೀಡಿದ ಹಿನ್ನೆಲೆ ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ » ಸ್ನೇಹಿತರೊಂದಿಗೆ ತೆರಳಿದ್ದ ಬಾಲಕ, ನೀರಿನಲ್ಲಿ ಮುಳುಗಿ ಸಾವು

ಸ್ನೇಹಿತರೊಂದಿಗೆ ತೆರಳಿದ್ದ ಬಾಲಕ, ನೀರಿನಲ್ಲಿ ಮುಳುಗಿ ಸಾವು

boy-missing-at-mattur-check-dam-in-Shimoga-taluk

ಶಿವಮೊಗ್ಗ : ಸ್ನೇಹಿತರೊಂದಿಗೆ ಈಜಲು ತೆರಳಿದ್ದ ಬಾಲಕನೊಬ್ಬ ಚೆಕ್‌ ಡ್ಯಾಮ್‌ನಲ್ಲಿ (dam) ಮುಳುಗಿ ಸಾವನ್ನಪ್ಪಿದ್ದಾನೆ ಎಂದು ಶಂಕಿಸಲಾಗಿದೆ. ಮತ್ತೊರು – ಹೊಸಹಳ್ಳಿ ಚೆಕ್‌ ಡ್ಯಾಮ್‌ನಲ್ಲಿ ಮಂಗಳವಾರ ಘಟನೆ ಸಂಭವಿಸಿದೆ. ರಾಗಿಗುಡ್ಡದ ರಹಮತ್‌ (16) ಮೃತ ಬಾಲಕ. ಘಟನೆ ಕುರಿತು ಮಾಹಿತಿ ಲಭ್ಯವಾಗುತ್ತಿದ್ದಂತೆ ತುಂಗಾ ನಗರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲಿಸಿದರು. ಮೃತದೇಹವನ್ನು ಹೊರ ತಗೆಯಲಾಗಿದ್ದು, ಮರಣೋತ್ತರ ಪರೀಕ್ಷೆಗೆ ಮೆಗ್ಗಾನ್‌ ಆಸ್ಪತ್ರೆಗೆ ರವಾನಿಸಲಾಗಿದೆ. ಇದನ್ನೂ ಓದಿ » ರಾತ್ರೋರಾತ್ರಿ ಸರಣಿ ಕಳ್ಳತನ, ಲಕ್ಷ ಲಕ್ಷದ ಚಿನ್ನಾಭರಣ, ಹಣ ಹೊತ್ತೊಯ್ದ … Read more

ರಾತ್ರೋರಾತ್ರಿ ಸರಣಿ ಕಳ್ಳತನ, ಲಕ್ಷ ಲಕ್ಷದ ಚಿನ್ನಾಭರಣ, ಹಣ ಹೊತ್ತೊಯ್ದ ಖದೀಮರು

Crime-News-General-Image

ಶಿಕಾರಿಪುರ : ಸಿಟಿಯ ಚನ್ನಕೇಶವ ನಗರದಲ್ಲಿ ಸರಣಿ ಮನೆಗಳ್ಳತನವಾಗಿದೆ (theft). ಲಕ್ಷಾಂತರ ರೂಪಾಯಿ ಮೌಲ್ಯದ ಬಂಗಾರ, ನಗದು ಕಳವುವಾಗಿದೆ ಎಂದು ಆರೋಸಪಿಸಲಾಗಿದೆ. ಸೋಮವಾರ ರಾತ್ರಿ ಘಟನೆ ಸಂಭವಿಸಿದೆ. ಚನ್ನಕೇಶವ ನಗರದ 15ನೇ ಅಡ್ಡರಸ್ತೆ ನಿವಾಸಿ ನಂದ ಬಣಕಾರ್ ಅವರು ಧಾರ್ಮಿಕ ಕಾರ್ಯಕ್ರಮಕ್ಕೆ ತೆರಳಿದ್ದರು. ಕಳ್ಳರು ಅವರ ಮನೆ ಬಾಗಿಲು ಮುರಿದು ಮಾಂಗಲ್ಯ ಸರ ಸೇರಿದಂತೆ ಅಂದಾಜು 14 ಲಕ್ಷ ರೂ. ಮೌಲ್ಯದ ಒಡವೆ ಹಾಗೂ 50 ಸಾವಿರ ರೂ. ನಗದು ಕಳವು ಮಾಡಿದ್ದಾರೆ.  ಇದೇ ಕೇರಿಯಲ್ಲಿರುವ ಮೆಸ್ಕಾಂ … Read more

ಹೊಸಮನೆ ಚಾನಲ್‌ ಏರಿ ಮೇಲೆ ಭೀಕರ ಅಪಘಾತ, ಯುವಕನ ಸ್ಥಿತಿ ಗಂಭೀರ

car-and-bike-mishap-at-sharavathi-nagara

ಶಿವಮೊಗ್ಗ : ಕಾರು ಮತ್ತು ಬೈಕ್‌ ಮುಖಾಮುಖಿ ಡಿಕ್ಕಿಯಾಗಿ (Mishap), ಯುವಕನೊಬ್ಬ ಗಂಭೀರವಾಗಿ ಗಾಯಗೊಂಡಿದ್ದಾನೆ. ಹೊಸಮನೆ ಬಡಾವಣೆಯ ಚಾನಲ್‌ ಏರಿ ಮೇಲೆ ಸಂಜೆ ಘಟನೆ ಸಂಭವಿಸಿದೆ. ಅಪಘಾತದಲ್ಲಿ ಬೈಕ್‌ ಸವಾರ ಮತ್ತು ಓರ್ವ ಯುವತಿಗೆ ಗಂಭೀರ ಗಾಯವಾಗಿದೆ. ಗಾಯಾಳುಗಳನ್ನು ಕೂಡಲೆ ಆಸ್ಪತ್ರೆಗೆ ಸಾಗಿಸಲಾಗಿದೆ. ಘಟನೆಯಲ್ಲಿ ಕಾರು ಮತ್ತು ಬೈಕ್‌ಗಳ ಮುಂಭಾಗ ನಜ್ಜುಗುಜ್ಜಾಗಿದೆ. ಕಾರು ಶರಾವತಿ ನಗರದಿಂದ ಲಕ್ಷ್ಮೀ ಟಾಕೀಸ್‌ ಕಡೆಗೆ ತೆರಳುತ್ತಿತ್ತು. ಬೈಕು ಶರಾವತಿ ನಗರದ ಕಡೆಗೆ ತೆರಳುತ್ತಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ. ಇದನ್ನೂ ಓದಿ » ಸೇತುವೆ … Read more

ಸೇತುವೆ ಬಳಿ ದಾಳಿ, ಕಾರು, ಬೈಕು ಸಹಿತ ನಾಲ್ವರು ಅರೆಸ್ಟ್‌, ಏನಿದು ಕೇಸ್‌?

Four-arrest-with-car-and-bike-NDPS-Case-at-shikaripura

ಶಿಕಾರಿಪುರ : ಸೇತುವೆ ಬಳಿ ಗಾಂಜಾ ಮಾರಾಟ ಮಾಡುತ್ತಿರುವ ಖಚಿತ ಮಾಹಿತಿ ಮೇರೆಗೆ ದಾಳಿ (RAID) ನಡೆಸಿದ ಸಿ.ಇ.ಎನ್‌ ಠಾಣೆ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. 70 ಸಾವಿರ ರೂ. ಮೌಲ್ಯದ 2 ಕೆ.ಜಿ 52 ಗ್ರಾಂ ಗಾಂಜಾ, ಕೃತ್ಯಕ್ಕೆ ಬಳಸಿದ ಒಂದು ಕಾರು ಮತ್ತು ಬೈಕ್‌ ವಶಕ್ಕೆ ಪಡೆದಿದ್ದಾರೆ. ಶಿಕಾರಿಪುರ ಗ್ರಾಮಾಂತರ ಠಾಣೆ ವ್ಯಾಪ್ತಿಯ ಕೆಸರಗಟ್ಟೆ ಮೀಸಲು ಅರಣ್ಯ ಪ್ರದೇಶದ ಸೇತುವೆ ಬಳಿ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಮಾರಾಟ ಮಾಡುತ್ತಿರುವ ಮಾಹಿತಿ ಲಭ್ಯವಾಗಿತ್ತು ಎಂದು ಪ್ರಕಟಣೆಯಲ್ಲಿ … Read more

ಶಿವಮೊಗ್ಗದಲ್ಲಿ ಡಿವೈಎಸ್‌ಪಿಯನ್ನು ವಶಕ್ಕೆ ಪಡೆದ ಲೋಕಾಯುಕ್ತ, ಇಲ್ಲಿದೆ ಕಂಪ್ಲೀಟ್‌ ಡಿಟೇಲ್ಸ್‌

Lokayukta-raid-on-DYSP-Krishnamurthy-in-Shimoga.

ಶಿವಮೊಗ್ಗ : ಜಿಲ್ಲಾ ಸಶಸ್ತ್ರ ಮೀಸಲು ಪಡೆ (ಡಿ.ಎ.ಆರ್‌) ಡಿವೈಎಸ್‌ಪಿ ಕೃಷ್ಣಮೂರ್ತಿ ಮತ್ತು ಎ.ಆರ್‌.ಎಸ್‌.ಐ ರವಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ಲೋಕಾಯುಕ್ತ (Lokayukta) ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಅಲ್ಲದೆ ಘಟನೆ ಕುರಿತು ಲೋಕಾಯುಕ್ತ ಪ್ರಕಟಣೆಯಲ್ಲಿ ವಿವರ ನೀಡಲಾಗಿದೆ. ಲೋಕಾಯುಕ್ತ ಪ್ರಕಟಣೆಯಲ್ಲಿ ಏನಿದೆ? ಡಿ.ಎ.ಆರ್.‌ ಪೊಲೀಸ್‌ನ ಎಹೆಚ್‌ಸಿ ಪ್ರಸನ್ನ ಕುಮಾರ್‌ ಅವರನ್ನು ಭದ್ರಾವತಿಯ ತಾಲೂಕು ಕಚೇರಿಯ ಖಜಾನೆಯ ಗಾರ್ಡ್‌ ಕರ್ತವ್ಯದಲ್ಲೇ ಮುಂದುವರೆಸಲು ಡಿವೈಎಸ್‌ಪಿ ಕೃಷ್ಣಮೂರ್ತಿ 5 ಸಾವಿರ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದರು. ಹಣವನ್ನು ಎಆರ್‌ಎಸ್‌ಐ ರವಿಗೆ ಅವರಿಗೆ ತಲುಪಿಸುವಂತೆ … Read more

BREAKING NEWS – ಭದ್ರಾವತಿಯಲ್ಲಿ ರೌಡಿ ಶೀಟರ್‌ ಕಾಲಿಗೆ ಗುಂಡು ಹಾರಿಸಿದ ಲೇಡಿ ಇನ್ಸ್‌ಪೆಕ್ಟರ್‌

breaking news graphics

ಭದ್ರಾವತಿ : ಬಂಧಿಸಲು ತೆರಳಿದ್ದ ಪೊಲೀಸ್‌ ಸಿಬ್ಬಂದಿ ಮೇಲೆ ದಾಳಿ ನಡೆಸಿ ಎಸ್ಕೇಪ್‌ ಆಗಲು ಯತ್ನಿಸಿದ್ದ ರೌಡಿ ಶೀಟರ್‌ (Rowdy Sheeter) ಕಡೇಕಲ್‌ ಅಬೀದ್‌ ಕಾಲಿಗೆ ಗುಂಡು ಹಾರಿಸಲಾಗಿದೆ. ಪೇಪರ್‌ ಟೌನ್‌ ಇನ್ಸ್‌ಪೆಕ್ಟರ್‌ ನಾಗಮ್ಮ, ರೌಡಿ ಶೀಟರ್‌ ಕಡೇಕಲ್‌ ಅಬೀದ್‌ ಕಾಲಿಗೆ ಗುಂಡು ಹಾರಿಸಿದ್ದಾರೆ ಎಂದು ಜಿಲ್ಲಾ ರಕ್ಷಣಾಧಿಕಾರಿ ತಿಳಿಸಿದ್ದಾರೆ. ಕೊಲೆ ಯತ್ನ ಪ್ರಕರಣದರಲ್ಲಿ ರೌಡಿ ಶೀಟರ್‌ (Rowdy Sheeter) ಕಡೇಕಲ್‌ ಅಬೀದ್‌ ತಲೆ ಮರೆಸಿಕೊಂಡಿದ್ದ. ಕಳೆದ ಒಂದು ತಿಂಗಳಿನಿಂದ ಈತನಿಗಾಗಿ ಪೊಲೀಸರು ಶೋಧಿಸುತ್ತಿದ್ದರು. ಇಂದು ಈತನ … Read more