ಶಿವಮೊಗ್ಗದಲ್ಲಿ ವಿಷ ಸೇವಿಸಿದ ಆಟೋ ಚಾಲಕ, ಕಾರಣವೇನು?

160125 mc gann hospital general image

SHIVAMOGGA LIVE NEWS, 29 JANUARY 2025 ಶಿವಮೊಗ್ಗ : ಖಾಸಗಿ ಫೈನಾನ್ಸ್‌ ಸಂಸ್ಥೆಯ ಕಿರುಕುಳಕ್ಕೆ ಬೇಸತ್ತು ಆಟೋ ಚಾಲಕರೊಬ್ಬರು (Driver) ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಶಿವಮೊಗ್ಗದ ಪುರಲೆಯ ಆಟೋ ಚಾಲಕ ನಾಗೇಶ್‌ (35) ಆತ್ಮಹತ್ಯೆಗೆ ಯತ್ನಿಸಿದವರು. ಪುರಲೆ ಸಮೀಪ ನಾಗೇಶ್‌ ವಿಷ ಸೇವಿಸಿ ಪ್ರಜ್ಞಾಹೀನರಾಗಿದ್ದರು. ಇದನ್ನು ಗಮನಿಸಿದ ಸ್ಥಳೀಯರು ನಾಗೇಶ್‌ನನ್ನು ಕೂಡಲೆ ಆಸ್ಪತ್ರೆಗೆ ದಾಖಲಿಸಿದ್ದರು. ಮೆಗ್ಗಾನ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಸದ್ಯ ನಾಗೇಶ್‌ ಗುಣವಾಗಿದ್ದಾರೆ. ಪತ್ನಿಯ ಚಿಕಿತ್ಸೆಗಾಗಿ ಫೈನಾನ್ಸ್‌ ಸಂಸ್ಥೆಗಳಿಂದ 3 ಲಕ್ಷ ರೂ. … Read more

ಶಿವಮೊಗ್ಗದ ಟ್ಯಾಂಕ್‌ ಮೊಹಲ್ಲಾದಲ್ಲಿ ಗೃಹಿಣಿ ಆತ್ಮಹತ್ಯೆ

Crime-News-General-Image

SHIVAMOGGA LIVE NEWS, 28 JANUARY 2025 ಶಿವಮೊಗ್ಗ : ಕೌಟುಂಬಿಕ ವಿಷಯಕ್ಕೆ ಮನನೊಂದು ಮಹಿಳೆಯೊಬ್ಬರು (Woman) ಅತ್ಮಹತ್ಯೆ ಮಾಡಿಕೊಂಡಿದ್ದಾರೆ. ನಗರದ ಟ್ಯಾಂಕ್‌ ಮೊಹಲ್ಲಾದ ಮನೆಯಲ್ಲಿ ಘಟನೆ ಸಂಭವಿಸಿದೆ. ಭಾಗ್ಯಲಕ್ಷ್ಮಿ (37) ಆತ್ಮಹತ್ಯೆ ಮಾಡಿಕೊಂಡ ಗೃಹಿಣಿ. ಕೌಟುಂಬಿಕ ಕಲಹವೆ ಆತ್ಮಹತ್ಯೆಗೆ ಕಾರಣ ಎಂದು ಭಾಗ್ಯಲಕ್ಷ್ಮಿಯ ಪೋಷಕರು ಆರೋಪಿಸಿದ್ದಾರೆ. ಘಟನೆ ಸಂಬಂಧ ಕೋಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ » ಮಿಳಘಟ್ಟ, ಖಾಸಗಿ ಬಸ್‌ ವಶಕ್ಕೆ ಪಡೆದ ಟ್ರಾಫಿಕ್‌ ಪೊಲೀಸ್‌, 5 ಸಾವಿರ ರೂ. ದಂಡ, ಕಾರಣವೇನು?

ಶಿವಮೊಗ್ಗದಲ್ಲಿ ರಸ್ತೆ ದಾಟುತ್ತಿದ್ದ ಮಹಿಳೆಗೆ ಸ್ಕೂಲ್‌ ಬಸ್‌ ಡಿಕ್ಕಿ, ಮಹಿಳೆ ಸಾವು

School-Bus-incident-at-Shimoga-sangolli-rayanna-circle

SHIVAMOGGA LIVE NEWS, 28 JANUARY 2025 ಶಿವಮೊಗ್ಗ : ಖಾಸಗಿ ಶಾಲೆಯ ಬಸ್‌ (School bus) ಡಿಕ್ಕಿಯಾಗಿ ಮಹಿಳೆಯೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ನಗರದ ಸಂಗೊಳ್ಳಿ ರಾಯಣ್ಣ ಸರ್ಕಲ್‌ನಲ್ಲಿ ಘಟನೆ ಸಂಭವಿಸಿದೆ. ಬಾಪೂಜಿನಗರ ನಿವಾಸಿ ಕೆಂಪಮ್ಮ ಮೃತರು. ಸರ್ಕಲ್‌ನಲ್ಲ ರಸ್ತೆ ದಾಟುತ್ತಿದ್ದಾಗ ಖಾಸಗಿ ಬಸ್‌ ಡಿಕ್ಕಿ ಹೊಡೆದಿದೆ. ಚಾಲಕನ ನಿರ್ಲಕ್ಷ್ಯವೆ ಅಪಘಾತಕ್ಕೆ ಕಾರಣ ಎಂದು ಆರೋಪಿಸಲಾಗಿದೆ. ಕೆಂಪಮ್ಮ ಅವರು ಸೊಪ್ಪು ಮಾರಾಟ ಮಾಡಿ ಜೀವನ ನಿರ್ವಹಣೆ ಮಾಡುತ್ತಿದ್ದರು. ಪೂರ್ವ ಸಂಚಾರ ಠಾಣೆ ಪಿಎಸ್‌ಐ ನವೀನ್‌ ಮಠಪತಿ ಮತ್ತು … Read more

ಮಿಳಘಟ್ಟ, ಖಾಸಗಿ ಬಸ್‌ ವಶಕ್ಕೆ ಪಡೆದ ಟ್ರಾಫಿಕ್‌ ಪೊಲೀಸ್‌, 5 ಸಾವಿರ ರೂ. ದಂಡ, ಕಾರಣವೇನು?

fine-for-private-bus-in-Shimoga-city

SHIVAMOGGA LIVE NEWS, 28 JANUARY 2025 ಶಿವಮೊಗ್ಗ : ಇನ್ಸುರೆನ್ಸ್‌ (Insurance) ಇಲ್ಲದ ಖಾಸಗಿ ಬಸ್‌ಗೆ ಶಿವಮೊಗ್ಗದ ಸಂಚಾರ ಪೊಲೀಸರು 5 ಸಾವಿರ ರೂ. ದಂಡ ವಿಧಿಸಿದ್ದಾರೆ. ನಗರದ ಮಿಳಘಟ್ಟ ಬಳಿ ಪರಿಶೀಲನೆ ವೇಳೆ ಖಾಸಗಿ ಬಸ್ಸಿಗೆ ಇನ್ಸುರೆನ್ಸ್‌ ಇಲ್ಲದಿರುವುದು ಗೊತ್ತಾಗಿತ್ತು. ಪಶ್ಚಿಮ ಸಂಚಾರ ಠಾಣೆ ಪೊಲೀಸರು ಕೂಡಲೆ ಬಸ್ಸನ್ನು ವಶಕ್ಕೆ ಪಡೆದು, ಇನ್ಸುರೆನ್ಸ್‌ ಕಟ್ಟುವಂತೆ ಸೂಚಿಸಿದ್ದರು. ಇನ್ಸುರೆನ್ಸ್‌ ಇಲ್ಲದ್ದಕ್ಕೆ ಬಸ್‌ ಮಾಲೀಕರಿಗೆ 5 ಸಾವಿರ ರೂ. ದಂಡ ವಿಧಿಸಲಾಗಿದೆ. 51 ಸಾವಿರ ರೂ. ಇನ್ಸುರೆನ್ಸ್‌ … Read more

ಶಿವಮೊಗ್ಗ ಸಿಟಿಯಲ್ಲಿ ATMನಿಂದ ಹಣ ದರೋಡೆಗೆ ಯತ್ನ, ಇಲ್ಲಿದೆ ಘಟನೆಯ ಕಂಪ್ಲೀಟ್‌ ಡಿಟೇಲ್‌

ATM-theft-attempt-at-Shimoga-nehru-road

SHIVAMOGGA LIVE NEWS, 27 JANUARY 2025 ಶಿವಮೊಗ್ಗ : ATM ಮೆಷಿನ್‌ ಮುರಿದು ಹಣ ಕಳ್ಳತನಕ್ಕೆ ವಿಫಲ ಯತ್ನವಾಗಿದೆ. ನೆಹರು ರಸ್ತೆಯ ಕೆನರಾ ಬ್ಯಾಂಕ್‌ ಎಟಿಎಂ ಕೇಂದ್ರದಲ್ಲಿ ಕಳ್ಳತನಕ್ಕೆ ಪ್ರಯತ್ನವಾಗಿದೆ. ಘಟನೆ ನಡೆದು ಕೆಲವೇ ಹೊತ್ತಿಗೆ ಪೊಲೀಸರು ಆರೋಪಿಯೊಬ್ಬನನ್ನು ವಶಕ್ಕೆ ಪಡೆದಿದ್ದಾರೆ. ಕೆಲವೇ ಹೊತ್ತಿನಲ್ಲಿ ಆರೋಪಿ ವಶಕ್ಕೆ ಎಟಿಎಂನಲ್ಲಿ ಕಳ್ಳತನ ಯತ್ನದ ಕುರಿತು ಮಾಹಿತಿ ಲಭ್ಯವಾಗುತ್ತಿದ್ದಂತೆ ಕೋಟೆ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಬ್ಯಾಂಕ್‌ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಯಿಸಿ, ಸಿಸಿಟಿವಿ ಪರಿಶೀಲಿಸಿದರು. ತಕ್ಷಣದಿಂದಲೇ … Read more

ಭದ್ರಾವತಿಯ ದೊಡ್ಡೇರಿಯಲ್ಲಿ ಮಚ್ಚಿನಿಂದ ಕೊಚ್ಚಿ ಕೊಲೆ, ಜಿಲ್ಲಾ ರಕ್ಷಣಾಧಿಕಾರಿ ಹೇಳಿದ್ದೇನು?

Dodderi-Shantha-kumar-deceased-over-transformer-issue

SHIVAMOGGA LIVE NEWS, 23 JANUARY 2025 ಭದ್ರಾವತಿ : ವಿದ್ಯುತ್‌ ಟ್ರಾನ್ಸ್‌ಫಾರ್ಮರ್‌ (Transformer) ಅಳವಡಿಕೆ ವಿಚಾರವಾಗಿ ಜಗಳವಾಗಿ ಒಬ್ಬನ ಹತ್ಯೆಯಾಗಿದೆ. ಭದ್ರಾವತಿ ತಾಲೂಕು ದೊಡ್ಡೇರಿ ಗ್ರಾಮದಲ್ಲಿ ಕಳೆದ ರಾತ್ರಿ ಘಟನೆ ನಡೆದಿದೆ. ದೊಡ್ಡೇರಿಯ ಶಾಂತಕುಮಾರ್‌ (35) ಮೃತ ವ್ಯಕ್ತಿ. ಲೇಪಾಕ್ಷಿ ಸೇರಿದಂತೆ ಮೂವರು ಹತ್ಯೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಘಟನೆ ಸಂಬಂಧ ಭದ್ರಾವತಿ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಇದನ್ನೂ ಓದಿ » ಆಯನೂರು ATMನಲ್ಲಿ ಹಣ ಬಿಡಿಸಿದ ರೈತ, 20 ನಿಮಿಷದಲ್ಲೇ … Read more

2022ರಲ್ಲಿ ಅಪ್‌ಲೋಡ್‌ ಆಗಿದ್ದ ವಿಡಿಯೋ, ಶಿವಮೊಗ್ಗದ ಯುವಕನಿಗೆ ಈಗ ಶುರು ಸಂಕಷ್ಟ

SMS-Fraud-Shimoga-CEN-Police-Station.

SHIVAMOGGA LIVE NEWS, 22 JANUARY 2025 ಶಿವಮೊಗ್ಗ : ಮಕ್ಕಳ ಅಶ್ಲೀಲ ವಿಡಿಯೋವನ್ನು (Video) ಫೇಸ್‌ಬುಕ್‌ನಲ್ಲಿ ಅಪ್‌ಲೋಡ್‌ ಮಾಡಿ, ಷೇರ್‌ ಮಾಡಿದ್ದ ಆರೋಪದ ಹಿನ್ನೆಲೆ ಶಿವಮೊಗ್ಗ ಜಿಲ್ಲೆಯ ಯುವಕನೊಬ್ಬನ ವಿರುದ್ಧ ಪ್ರಕರಣ ದಾಖಲಾಗಿದೆ. ಸೈಬರ್‌ ಟಿಪ್‌ ಲೈನ್‌ ದೂರು ಆಧರಿಸಿ ಪ್ರಕರಣ ದಾಖಲಿಸಲಾಗಿದೆ. ಮಗುವೊಂದರ ಅಶ್ಲೀಲ ವಿಡಿಯೋವನ್ನು ಶಿವಮೊಗ್ಗ ಜಿಲ್ಲೆಯ ಯುವಕನೊಬ್ಬ 2022ರ ಜುಲೈ ತಿಂಗಳಲ್ಲಿ ಫೇಸ್‌ಬುಕ್‌ನಲ್ಲಿ ಅಪ್‌ಲೋಡ್‌ ಮಾಡಿ, ಷೇರ್‌ ಮಾಡಿದ್ದ ಎಂದು ಆರೋಪಿಸಲಾಗಿದೆ. ನ್ಯಾಷನಲ್‌ ಸೈಬರ್‌ ಕ್ರೈಮ್‌ ರಿಪೋರ್ಟ್‌ ಪೋರ್ಟಲ್‌ (ಎನ್‌ಸಿಸಿಆರ್‌ಬಿ) ಪರಿಶೀಲನೆ … Read more

ಸೈನ್ಸ್‌ ಮೈದಾನ, ಸಂಜೆ ಪಾರ್ಕಿಂಗ್‌ ಸ್ಥಳಕ್ಕೆ ಬಂದ ವ್ಯಕ್ತಿಗೆ ಕಾದಿತ್ತು ಆಘಾತ

bike theft reference image

SHIVAMOGGA LIVE NEWS, 22 JANUARY 2025 ಶಿವಮೊಗ್ಗ : ಬಿ.ಹೆಚ್.ರಸ್ತೆಯಲ್ಲಿ ಪಾರ್ಕಿಂಗ್‌ (Parking) ಸ್ಥಳದಲ್ಲಿ ನಿಲ್ಲಿಸಿದ್ದ ಬೈಕ್‌ ಕಳ್ಳತನವಾಗಿದೆ. ಸತೀಶ್‌ ಎಂಬುವವರಿಗೆ ಸೇರಿದ ಸ್ಪ್ಲೆಂಡರ್‌ ಪ್ಲಸ್‌ ಬೈಕ್‌ ಕಳುವಾಗಿದೆ ಎಂದು ಆರೋಪಿಸಿ ದೂರು ದಾಖಲಾಗಿದೆ. ಸೈನ್ಸ್‌ ಮೈದಾನದ ಎದುರು ಮೆಡಿಕಲ್‌ ಶಾಪ್‌ ಮುಂಭಾಗ ಬಿ.ಹೆಚ್.ರಸ್ತೆಯಲ್ಲಿ ಬೈಕ್‌ ನಿಲ್ಲಿಸಿದ್ದರು. ಬೆಳಗ್ಗೆ ಬೈಕ್‌ ನಿಲ್ಲಿಸಿದ್ದು ಕೆಲಸಕ್ಕೆ ತೆರಳಿದ್ದರು.‌ ಸಂಜೆ ಮರಳಿದಾಗ ಬೈಕ್‌ ಇರಲಿಲ್ಲ. ಘಟನೆ ಸಂಬಂಧ ಕೋಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ » ಇನ್ಮುಂದೆ ಕಾಗೋಡು … Read more

ಮಕ್ಕಳಿಗೆ ಚಿನ್ನದ ಸರ ಹಾಕುವ ಪೋಷಕರೆ ಹುಷಾರ್‌, ಶಿವಮೊಗ್ಗದಲ್ಲಿ ಎರಡು ಪ್ರತ್ಯೇಕ ಕೇಸ್‌ ದಾಖಲು

Crime-News-General-Image

SHIVAMOGGA LIVE NEWS, 20 JANUARY 2025 ಶಿವಮೊಗ್ಗ : ಹತ್ತು ದಿನದ ಅಂತರದಲ್ಲಿ ನಗರದ ಎರಡು ಕಲ್ಯಾಣ ಮಂಟಪದಲ್ಲಿ ಮಕ್ಕಳ ಕೊರಳಲಿದ್ದ ಚಿನ್ನದ ಸರ (Gold Chain) ಕಳವು ಮಾಡಲಾಗಿದೆ. ಪೋಷಕರು ಗಮನಿಸಿದಾಗ ಚಿನ್ನದ ಸರ ಇಲ್ಲದಿರುವುದು ಗೊತ್ತಾಗಿದೆ. ಈ ಸಂಬಂಧ ಪ್ರತ್ಯೇಕವಾಗಿ ಪ್ರಕರಣ ದಾಖಲಾಗಿದೆ. ದೊಡ್ಡಪೇಟೆ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ಇದನ್ನೂ ಓದಿ » ಶಿವಮೊಗ್ಗದಲ್ಲಿ ಮಲ್ನಾಡ್‌ ಸ್ಟಾರ್ಟ್‌ಅಪ್‌ ಸಮ್ಮೇಳನಕ್ಕೆ ಚಾಲನೆ, ಕೇಂದ್ರ ಸಚಿವರು ಏನೆಲ್ಲ ಹೇಳಿದರು?

ಭದ್ರಾವತಿಯಲ್ಲಿ ಭೀಕರ ಅಪಘಾತ, ವೈದ್ಯಕೀಯ ವಿದ್ಯಾರ್ಥಿನಿ ಸ್ಥಳದಲ್ಲೇ ಸಾವು

BHADRAVATHI-BREAKING-NEWS.jpg

SHIVAMOGGA LIVE NEWS, 18 JANUARY 2025 ಭದ್ರಾವತಿ : ಟ್ರಾಕ್ಟರ್‌ (Tractor) ಮತ್ತು ಕಾರಿನ ಮಧ್ಯೆ ಭೀಕರ ಅಪಘಾತ ಸಂಭವಿಸಿದ್ದು, ವೈದ್ಯಕೀಯ ವಿದ್ಯಾರ್ಥಿನಿ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ನಾಲ್ವರು ಗಂಭೀರ ಗಾಯಗೊಂಡಿದ್ದಾರೆ. ಭದ್ರಾವತಿ ತಾಲೂಕು ಬಾರಂದೂರು ಕ್ರಾಸ್‌ ಬಳಿ ಅಪಘಾತ ಸಂಭವಿಸಿದೆ. ವೈದ್ಯಕೀಯ ವಿದ್ಯಾರ್ಥಿನಿ ಕೃತಿ (21) ಸ್ಥಳದಲ್ಲೆ ಸಾವನ್ನಪ್ಪಿದ್ದಾಳೆ. ಶಿವಮೊಗ್ಗದಿಂದ ಕುಟುಂಬದೊಂದಿಗೆ ತಮ್ಮೂರು ತರೀಕೆರೆಯ ಅಮೃತಾಪುರಕ್ಕೆ ತೆರಳುತ್ತಿದ್ದಾಗ ಘಟನೆ ಸಂಭವಿಸಿದೆ. ಪೇಪರ್‌ ಟೌನ್‌ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ. ಇದನ್ನೂ ಓದಿ » ಶಿವಮೊಗ್ಗ ಸಿಟಿ ಬಸ್ಸುಗಳ … Read more