SHIVAMOGGA LIVE NEWS, 20 JANUARY 2025
ಶಿವಮೊಗ್ಗ : ಹತ್ತು ದಿನದ ಅಂತರದಲ್ಲಿ ನಗರದ ಎರಡು ಕಲ್ಯಾಣ ಮಂಟಪದಲ್ಲಿ ಮಕ್ಕಳ ಕೊರಳಲಿದ್ದ ಚಿನ್ನದ ಸರ (Gold Chain) ಕಳವು ಮಾಡಲಾಗಿದೆ. ಪೋಷಕರು ಗಮನಿಸಿದಾಗ ಚಿನ್ನದ ಸರ ಇಲ್ಲದಿರುವುದು ಗೊತ್ತಾಗಿದೆ. ಈ ಸಂಬಂಧ ಪ್ರತ್ಯೇಕವಾಗಿ ಪ್ರಕರಣ ದಾಖಲಾಗಿದೆ.
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ. ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200
ಡಿ.25ರಂದು ಮದುವೆಗೆ ಸಮಾರಂಭಕ್ಕೆ ಪೋಷಕರ ಜೊತೆಗೆ ಬಂದಿದ್ದ ಬಾಲಕನ ಕೊರಳಲ್ಲಿದ್ದ 9.100 ಗ್ರಾಂ ತೂಕದ ಬಂಗಾರದ ಸರ ನಾಪತ್ತೆಯಾಗಿತ್ತು. ಕಲ್ಯಾಣ ಮಂಟಪದಲ್ಲಿ ಮಕ್ಕಳ ಜೊತೆಗೆ ಬಾಲಕ ಆಟವಾಡುತ್ತಿದ್ದ. ಊಟದ ಸಮಯಕ್ಕೆ ಪೋಷಕರ ಬಳಿ ಬಂದಾಗ ಚಿನ್ನದ ಸರ ಇರಲಿಲ್ಲ ಎಂದು ಆರೋಪಿಸಲಾಗಿದೆ. ತಮ್ಮ ಪುತ್ರನ ಕೊರಳಲ್ಲಿದ್ದ 55 ಸಾವಿರ ರೂ. ಮೌಲ್ಯದ ಚಿನ್ನದ ಸರ ಕಳುವಾಗಿದೆ ಎಂದು ಆರೋಪಿಸಿ ಹೊಸಮನೆ ಶ್ರೀಧರ್ ದೂರು ನೀಡಿದ್ದಾರೆ.ಪ್ರಕರಣ 1
ಸ್ಥಳ : ಈಡಿಗರ ಭವನ, ಶಿವಮೊಗ್ಗ
ಜ.4ರಂದು ನಡೆದ ಮದುವೆ ಸಮಾರಂಭದಲ್ಲಿ 7 ವರ್ಷದ ಬಾಲಕಿ ಕೊರಳಲ್ಲಿದ್ದ 90 ಸಾವಿರ ರೂ. ಮೌಲ್ಯದ ಚಿನ್ನದ ಸರ ಕಳುವಾಗಿದೆ. ಮಕ್ಕಳೊಂದಿಗೆ ಆಟವಾಡುತ್ತಿ ಬಾಲಕಿಯ ಕೂದಲು ಸರಿಪಡಿಸಲು ತಾಯಿ ಹತ್ತಿರ ಕರೆದಾಗ ಪ್ರಕರಣ ಬೆಳಕಿಗೆ ಬಂದಿದೆ. ಇಬ್ಬರು ಮಹಿಳೆಯರು ಬಾಲಕಿಯನ್ನು ಡ್ರೆಸ್ಸಿಂಗ್ ರೂಂಗೆ ಕರೆದೊಯ್ದು ಕೊರಳಲಿದ್ದ ಚಿನ್ನದ ಸರ ಬಿಚ್ಚಿಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಬಾಲಕಿಯ ತಾಯಿ ನಾಹಿಲಾ ಬಾನು ದೂರು ನೀಡಿದ್ದಾರೆ.ಪ್ರಕರಣ 2
ಸ್ಥಳ : ಕ್ರೌನ್ ಪ್ಯಾಲೇಸ್, ಬೈಪಾಸ್ ರಸ್ತೆ.
ದೊಡ್ಡಪೇಟೆ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
ಇದನ್ನೂ ಓದಿ » ಶಿವಮೊಗ್ಗದಲ್ಲಿ ಮಲ್ನಾಡ್ ಸ್ಟಾರ್ಟ್‌ಅಪ್ ಸಮ್ಮೇಳನಕ್ಕೆ ಚಾಲನೆ, ಕೇಂದ್ರ ಸಚಿವರು ಏನೆಲ್ಲ ಹೇಳಿದರು?