ಚಿನ್ನ, ಷೇರಿನ ಮೇಲೆ ಹೂಡಿಕೆ ಮಾಡುವವರೆ ಎಚ್ಚರ, ಶಿವಮೊಗ್ಗದಲ್ಲಿ ದಾಖಲಾಯ್ತು ಪ್ರಕರಣ, ಆಗಿದ್ದೇನು?

Online-Fraud-Case-image

ಶಿವಮೊಗ್ಗ: ಷೇರು ಮಾರುಕಟ್ಟೆ ಮತ್ತು ಚಿನ್ನದ ಮೇಲೆ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಾಂಶ ನೀಡುವುದಾಗಿ ನಂಬಿಸಿದ ಸೈಬರ್ ವಂಚಕರು (cyber fraudsters), ಶಿವಮೊಗ್ಗದ ವ್ಯಕ್ತಿಯೊಬ್ಬರಿಗೆ ₹61 ಲಕ್ಷ ವಂಚಿಸಿದ್ದಾರೆ. ಖಾಸಗಿ ಕಂಪನಿಯ ಹೆಸರಿನಲ್ಲಿ ನಕಲಿ ಜಾಲ ಸೃಷ್ಟಿಸಿ ಬೃಹತ್ ಮೊತ್ತದ ಹಣ ಲೂಟಿ ಮಾಡಲಾಗಿದೆ. ಇದನ್ನೂ ಓದಿ – ಗೋಬಿ ತಿಂದು ವಾಪಸ್‌ ತೆರಳುವಾಗ ಗೊಂದಿಚಟ್ನಹಳ್ಳಿ ಬಳಿ ದುರ್ಘಟನೆ, ಯುವಕ ಸಾವು, ಆಗಿದ್ದೇನು? ಅಪರಿಚಿತ ವ್ಯಕ್ತಿಗಳು ಒಂದು ಕಂಪನಿಯ ಪ್ರತಿನಿಧಿಗಳಂತೆ ನಟಿಸಿ ಶಿವಮೊಗ್ಗದ ವ್ಯಕ್ತಿಯನ್ನು ಸಂಪರ್ಕಿಸಿದ್ದಾರೆ. ತಮ್ಮ ಕಂಪನಿಯಲ್ಲಿ … Read more

ಶಿವಮೊಗ್ಗದಲ್ಲಿ ರೈಲಿಗೆ ಸಿಲುಕಿದ ವ್ಯಕ್ತಿ ಸಾವು, ಎರಡು ಭಾಗವಾದ ದೇಹ

man-breathed-last-on-railway-track-near-sominakoppa

ಶಿವಮೊಗ್ಗ: ನಗರದ ಸೋಮಿನಕೊಪ್ಪ ಮೇಲ್ಸೇತುವೆ ಬಳಿ ಇಂದು ಮಧ್ಯಾಹ್ನ ರೈಲಿಗೆ (passenger train) ಸಿಲುಕಿ ವೃದ್ಧರೊಬ್ಬರು ದಾರುಣವಾಗಿ ಸಾವನ್ನಪ್ಪಿದ್ದಾರೆ. ಮೃತರನ್ನು ವಿನೋಬನಗರದ ಕಲ್ಲಹಳ್ಳಿಯ ನಿವಾಸಿ ಈಶ್ವರಪ್ಪ (68) ಎಂದು ಗುರುತಿಸಲಾಗಿದೆ. ತಾಳಗುಪ್ಪ – ಶಿವಮೊಗ್ಗ ಪ್ಯಾಸೆಂಜರ್‌ ರೈಲಿಗೆ ಸಿಲುಕಿದ್ದಾರೆ ಎಂದು ಶಂಕಿಸಲಾಗಿದೆ. ಘಟನೆಯಲ್ಲಿ ಈಶ್ವರಪ್ಪ ಅವರ ದೇಹ ಎರಡು ಭಾಗವಾಗಿ ಹಳಿಯ ಮೇಲೆ ಬಿದ್ದಿತ್ತು. ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಭೇಟಿ ನೀಡಿದ ರೈಲ್ವೆ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಶಿವಮೊಗ್ಗ ರೈಲ್ವೆ ಪೊಲೀಸ್‌ ಠಾಣೆಯಲ್ಲಿ … Read more

ಪೆಸೆಟ್‌ ಕಾಲೇಜು ಬಳಿ ಅಪಘಾತ, ವೃದ್ಧೆಯ ಮೂಳೆ ಕಟ್‌, ಆಗಿದ್ದೇನು?

Sagara-Road-Gadikoppa-Shimoga-city

ಶಿವಮೊಗ್ಗ: ರಾಷ್ಟ್ರೀಯ ಹೆದ್ದಾರಿ 206ರಲ್ಲಿ ರಸ್ತೆ ದಾಟುತ್ತಿದ್ದ ವೃದ್ಧೆಯೊಬ್ಬರಿಗೆ (woman) ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದಿದ್ದು, ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಬೊಮ್ಮನಕಟ್ಟೆ ನಿವಾಸಿ ನೀಲಮ್ಮ (65) ಪೆಸಿಟ್ ಕಾಲೇಜ್ ಬಳಿ ರಸ್ತೆ ದಾಟುತ್ತಿದ್ದಾಗ ಸಾಗರ ಕಡೆಯಿಂದ ಬಂದ ಕಾರು ಡಿಕ್ಕಿ ಹೊಡೆದಿದೆ. ನೀಲಮ್ಮ ಅವರ ಬಲಗಾಲು, ಬಲಗೈ ಹಾಗೂ ಕತ್ತಿನ ಭಾಗಕ್ಕೆ ತೀವ್ರ ಪೆಟ್ಟಾಗಿದ್ದು, ಮೂಳೆಯು ಮುರಿದಿದೆ. ಸಂಕ್ರಾಂತಿ ಹಬ್ಬ ಮುಗಿಸಿ ತಂಗಿಯ ಮನೆಗೆ ಹೋಗುತ್ತಿದ್ದಾಗ ಘಟನೆ ನಡೆದಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಇದನ್ನೂ ಓದಿ … Read more

ಕಸ ತುಂಬುವಾಗ ಪಾಲಿಕೆ ಕಾರ್ಮಿಕನ ಪಕ್ಕ ದಿಢೀರ್‌ ಹೋಯ್ತು ಬೈಕ್‌, ಕೆಲವೇ ಕ್ಷಣದಲ್ಲಿ ನಡೆಯಿತು ಅಟ್ಯಾಕ್

Jail-Road-In-shimoga-city

ಶಿವಮೊಗ್ಗ: ಮಹಾನಗರ ಪಾಲಿಕೆಯ ಪೌರ ಕಾರ್ಮಿಕರೊಬ್ಬರ (Civic worker) ಮೇಲೆ ನಾಲ್ವರು ಯುವಕರು ಹಲ್ಲೆ ನಡೆಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಘಟನೆ ನಡೆದಿದೆ. ಪಾಲಿಕೆಯ 29ನೇ ವಾರ್ಡ್‌ನಲ್ಲಿ ಕಸ ತುಂಬುವ ಕೆಲಸ ಮಾಡುವ ಆಂಜಿನಿ ಎಂಬುವವರು ಭಾನುವಾರ ಬೆಳಿಗ್ಗೆ ಲಕ್ಷ್ಮೀ ಟಾಕೀಸ್ ರಸ್ತೆಯಲ್ಲಿ ಕೆಲಸ ಮಾಡುತ್ತಿದ್ದರು. ಈ ವೇಳೆ ಒಂದೇ ಬೈಕ್‌ನಲ್ಲಿ ಬಂದ ನಾಲ್ವರು ಯುವಕರು ಸೌಂಡ್ ಬಾಕ್ಸ್‌ನಲ್ಲಿ ಜೋರಾಗಿ ಹಾಡು ಹಾಕಿಕೊಂಡು ಆಂಜಿನಿ ಅವರ ಪಕ್ಕದಲ್ಲೆ ಹೋಗಿದ್ದಾರೆ. ಹಾಗಾಗಿ ಆಂಜಿನಿ ಅವರು ಕೂಗಿದ್ದಾರೆ. ಇದರಿಂದ ಆಕ್ರೋಶಗೊಂಡ … Read more

ಓಂ ಶಕ್ತಿ ದೇಗುಲದಿಂದ ಶಿವಮೊಗ್ಗದ ಮನೆಗೆ ಮರಳಿದಾಗ ತೆರೆದಿತ್ತು ಮುಂದಿನ ಬಾಗಿಲು, ಕುಟುಂಬಕ್ಕೆ ಶಾಕ್‌

crime name image

ಶಿವಮೊಗ್ಗ: ಕುಟುಂಬ ಸಮೇತ ತಮಿಳುನಾಡಿನ ದೇವಸ್ಥಾನಕ್ಕೆ ಹೋಗಿದ್ದ ಸಂದರ್ಭ ಮನೆಯ ಬೀಗ ಮುರಿದು ನಗದು ಮತ್ತು ಚಿನ್ನಾಭರಣ (gold) ದೋಚಲಾಗಿದೆ. ಶಿವಮೊಗ್ಗದ ನಗರದ ಇಂದಿರಾ ಗಾಂಧಿ ಬಡಾವಣೆಯಲ್ಲಿ ನಡೆದಿದೆ. ಹೆಚ್.ಕೆ. ರಂಗನಾಥ್ ಎಂಬುವವರ ಮನೆಯಲ್ಲಿ ಕಳ್ಳತನವಾಗಿದೆ. ರಂಗನಾಥ್ ಅವರು ಕುಟುಂಬದೊಂದಿಗೆ ತಮಿಳುನಾಡಿನ ಓಂ ಶಕ್ತಿ ದೇವಸ್ಥಾನಕ್ಕೆ ಹೋಗಿದ್ದರು. ವಾಪಸ್ ಬಂದು ನೋಡಿದಾಗ ಮನೆಯ ಮುಂಭಾಗದ ಬಾಗಿಲಿನ ಬೀಗ ಮುರಿದಿರುವುದು ಕಂಡುಬಂದಿದೆ. ಒಳಗೆ ಪರಿಶೀಲಿಸಿದಾಗ ಬೀರುವಿನ ಲಾಕ್ ಮುರಿದು ಅದರಲ್ಲಿದ್ದ ಸುಮಾರು ₹21,000 ಮೌಲ್ಯದ ಬಂಗಾರದ ಒಡವೆಗಳು ಮತ್ತು … Read more

ಹಣ್ಣಿನ ತಳ್ಳುಗಾಡಿ ವಿಚಾರವಾಗಿ ಗಲಾಟೆ, ವ್ಯಾಪಾರಿ ಮೇಲೆ ಹಲ್ಲೆ, ಆಗಿದ್ದೇನು?

Crime-News-General-Image

ಶಿವಮೊಗ್ಗ: ಹಣ್ಣಿನ ತಳ್ಳುಗಾಡಿ (fruit vendor) ಇಡುವ ವಿಚಾರವಾಗಿ ನಡೆದ ಗಲಾಟೆಯಲ್ಲಿ ವ್ಯಕ್ತಿಯೊಬ್ಬರ ಮೇಲೆ ಮಹಿಳೆ ಹಾಗೂ ಅವರ ಇಬ್ಬರು ಮಕ್ಕಳು ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿರುವ ಘಟನೆ ಶಿವಮೊಗ್ಗ ನಗರದ ತೀರ್ಥಹಳ್ಳಿ ರಸ್ತೆಯ ಪಂಪ್ ಹೌಸ್ ಬಳಿ ನಡೆದಿದೆ. ಹಣ್ಣಿನ ವ್ಯಾಪಾರಿ ಅಲ್ತಾಫ್ (43) ಹಲ್ಲೆಗೊಳಗಾದವರು. ಕಳೆದ 20 ವರ್ಷಗಳಿಂದ ಪಂಪ್ ಹೌಸ್ ಬಳಿ ತಳ್ಳುಗಾಡಿಯಲ್ಲಿ ಹಣ್ಣಿನ ವ್ಯಾಪಾರ ಮಾಡುತ್ತಿದ್ದಾರೆ. ಈಚೆಗೆ ಅಲ್ತಾಫ್ ಅವರು ವ್ಯಾಪಾರ ಮಾಡುತ್ತಿದ್ದಾಗ ಅಲ್ಲಿಗೆ ಬಂದ ಮಹಿಳೆ ಮತ್ತು ಇಬ್ಬರು … Read more

ಶಿವಮೊಗ್ಗದಲ್ಲಿ ಖಾಸಗಿ ಬಸ್‌ ಮಾಲೀಕನ ಮೇಲೆ ಮತ್ತೊಂದು ಬಸ್ಸಿನ ಕಂಡಕ್ಟರ್‌, ಡ್ರೈವರ್‌ಗಳಿಂದ ಹಲ್ಲೆ

Crime-News-General-Image

ಶಿವಮೊಗ್ಗ: ಖಾಸಗಿ ಬಸ್ ಸಮಯದ ವಿಚಾರವಾಗಿ ಶಿವಮೊಗ್ಗದ ರವೀಂದ್ರ ನಗರದಲ್ಲಿ ಗಲಾಟೆ ನಡೆದಿದೆ. ಬಸ್ ಮಾಲೀಕರೊಬ್ಬರ (bus owner) ಮೇಲೆ ಮತ್ತೊಂದು ಸಂಸ್ಥೆಯ ಬಸ್ಸಿನ ಚಾಲಕ ಮತ್ತು ಕಂಡಕ್ಟರ್ ದೊಣ್ಣೆ ಹಾಗೂ ರಾಡ್‌ಗಳಿಂದ ಹಲ್ಲೆ ನಡೆಸಿದ್ದಾರೆ. ಕೃಷ್ಣ ಮೋಟಾರ್ ಸರ್ವಿಸ್‌ ಬಸ್‌ನ ಮಾಲೀಕ ವಿಜಯಕುಮಾರ್ ಎಂಬುವವರು ತಮ್ಮ ಬಸ್ಸುಗಳ ಸಮಯದ ವಿಚಾರವಾಗಿ ಶಿವಮೊಗ್ಗದ ಉಷಾ ಸರ್ಕಲ್ ಸಮೀಪದ ರವೀಂದ್ರ ನಗರ ಬಸ್ ನಿಲ್ದಾಣದ ಬಳಿ ವಿಚಾರಿಸಲು ತೆರಳಿದ್ದರು. ಆಗ ಮತ್ತೊಂದು ಬಸ್ಸು ನಿಗದಿತ ಸಮಯವನ್ನು ಮೀರಿ ನಿಲ್ದಾಣದಿಂದ … Read more

ಶಿವಮೊಗ್ಗದ ಮೆಗ್ಗಾನ್‌ ಆಸ್ಪತ್ರೆ ಆವರಣದಲ್ಲಿ ಹೊನ್ನಾಳಿಯ ಯುವಕನ ಮೇಲೆ ಹಲ್ಲೆ, ಕೊಲೆ ಬೆದರಿಕೆ, ಯಾಕೆ?

160125 mc gann hospital general image

ಶಿವಮೊಗ್ಗ: ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಯುವಕನಿಗೆ ಕಲ್ಲಿನಿಂದ (stones) ಹೊಡೆದು ಆತನ ಸಂಬಂಧಿಕರೆ ಹಲ್ಲೆ ನಡೆಸಿದ್ದಾರೆ. ಘಟನೆಗೆ ಕಾರಣವೇನು? ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ಶಾಂತ ಕುಮಾರ್ ಎಂಬುವವರು ತಮ್ಮ ತಾಯಿ ವಿಷ ಸೇವಿಸಿದ್ದರಿಂದ ಚಿಕಿತ್ಸೆ ಕೊಡಿಸಲು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ್ದರು. ಶಾಂತ ಕುಮಾರ್ ಅವರು ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕದ ಹೊರಗೆ ನಿಂತಿದ್ದಾಗ, ಅವರ ಸಂಬಂಧಿಕರು ಅಲ್ಲಿಗೆ ಬಂದಿದ್ದಾರೆ. ಆಸ್ತಿ ವಿಚಾರದ ಹಳೆ ದ್ವೇಷದ ಹಿನ್ನೆಲೆ ಮತ್ತು ತಾಯಿಯ ಅನಾರೋಗ್ಯದ ವಿಷಯ ತಮಗೆ ತಿಳಿಸಿಲ್ಲ … Read more

ವೈನ್‌ ಶಾಪ್‌ನಲ್ಲಿ ಬಿಯರ್‌ ಬಾಟಲಿಯಿಂದ ಯುವಕನ ತಲೆಗೆ ಹೊಡೆದ ವ್ಯಕ್ತಿ, ಕಾರಣವೇನು?

Crime-News-General-Image

ಶಿವಮೊಗ್ಗ: ಕುಡಿಯಲು ಹಣ ನೀಡಲಿಲ್ಲ ಎಂಬ ಕಾರಣಕ್ಕೆ ವ್ಯಕ್ತಿಯೊಬ್ಬರ ಮೇಲೆ ಬಿಯರ್ ಬಾಟಲಿಯಿಂದ (Bottle) ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಲಾಗಿದೆ. ಗೋಪಾಳ ಬಡಾವಣೆಯ ನಿವಾಸಿ ಹೆಚ್.ಜಿ. ಕಿರಣ್ (32) ಹಲ್ಲೆಗೊಳಗಾದವರು. ಶಿವಮೊಗ್ಗ ಎಪಿಎಂಸಿ ಸಮೀಪ ಇರುವ ವೈನ್‌ ಶಾಪ್‌ಗೆ ಕಿರಣ್ ತಮ್ಮ ಸ್ನೇಹಿತರ ಜೊತೆಗೆ ತೆರಳಿದ್ದರು. ಈ ವೇಳೆ ಅಲ್ಲಿಗೆ ಬಂದ ವ್ಯಕ್ತಿ, ಕಿರಣ್ ಅವರ ಬಳಿ ಮದ್ಯ ಸೇವಿಸಲು ಹಣ ಕೇಳಿದ್ದಾನೆ. ಕಿರಣ್ ಹಣ ನೀಡಲು ನಿರಾಕರಿಸಿದಾಗ, ಅವಾಚ್ಯವಾಗಿ ಬೈದು ಪಕ್ಕದಲ್ಲೇ ಇದ್ದ ಬಿಯರ್ … Read more

ಮೇಯಲು ಹೋದ ಹಸು ಮನೆಗೆ ಬರಲಿಲ್ಲ, ಸಮೀಪದ ಜಮೀಗೆ ಹೋದಾಗ ಕಾದಿತ್ತು ಆಘಾತ, ಆಗಿದ್ದೇನು?

301123-Shimoga-Rural-Police-Station.webp

ಶಿವಮೊಗ್ಗ: ಮೇಯಲು ಹೋಗಿದ್ದ ಹಸುವನ್ನು ಹತ್ಯೆ (Cow slaughtered) ಮಾಡಿರುವ ಘಟನೆ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ರಾಗಿಗುಡ್ಡದಲ್ಲಿ ನಡೆದಿದೆ. ಸಯ್ಯದ್‌ ಕರೀಂ ಎಂಬುವವರಿಗೆ ಸೇರಿದ ಹಸುವನ್ನು ಮಾಂಸಕ್ಕಾಗಿ ಹತ್ಯೆ ಮಾಡಿಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಕಾಣೆಯಾದ ಹಸು, ಹಗ್ಗದಿಂದ ಗುರುತು ಸಯ್ಯದ್‌ ಕರೀಂ ಎಂಬುವವರ ಹಸು ಸಾಕಿದ್ದರು. ಈಚೆಗೆ ಅದನ್ನು ಮೇಯಲು ಬಿಟ್ಟಿದ್ದ ಮನೆಗೆ ಮರಳಿರಲಿಲ್ಲ. ಹುಡುಕಾಟ ನಡೆಸಿದಾಗ ಜಮೀನೊಂದರ ಬಳಿ ಹಸುವಿನ ರಕ್ತ, ಹೊಟ್ಟೆಯ ಭಾಗದ ತ್ಯಾಜ್ಯ ಮತ್ತು ಹಸುವನ್ನು ಕಟ್ಟಲು ಬಳಸುತ್ತಿದ್ದ … Read more