ಶಿವಮೊಗ್ಗದಲ್ಲಿ ಖಾಸಗಿ ಬಸ್‌ ಮಾಲೀಕನ ಮೇಲೆ ಮತ್ತೊಂದು ಬಸ್ಸಿನ ಕಂಡಕ್ಟರ್‌, ಡ್ರೈವರ್‌ಗಳಿಂದ ಹಲ್ಲೆ

Published On : ಜನವರಿ 19, 2026

Published By : ನಿತಿನ್‌ ಆರ್‌.ಕೈದೊಟ್ಲು 

ಶಿವಮೊಗ್ಗ: ಖಾಸಗಿ ಬಸ್ ಸಮಯದ ವಿಚಾರವಾಗಿ ಶಿವಮೊಗ್ಗದ ರವೀಂದ್ರ ನಗರದಲ್ಲಿ ಗಲಾಟೆ ನಡೆದಿದೆ. ಬಸ್ ಮಾಲೀಕರೊಬ್ಬರ (bus owner) ಮೇಲೆ ಮತ್ತೊಂದು ಸಂಸ್ಥೆಯ ಬಸ್ಸಿನ ಚಾಲಕ ಮತ್ತು ಕಂಡಕ್ಟರ್ ದೊಣ್ಣೆ ಹಾಗೂ ರಾಡ್‌ಗಳಿಂದ ಹಲ್ಲೆ ನಡೆಸಿದ್ದಾರೆ.

ಕೃಷ್ಣ ಮೋಟಾರ್ ಸರ್ವಿಸ್‌ ಬಸ್‌ನ ಮಾಲೀಕ ವಿಜಯಕುಮಾರ್ ಎಂಬುವವರು ತಮ್ಮ ಬಸ್ಸುಗಳ ಸಮಯದ ವಿಚಾರವಾಗಿ ಶಿವಮೊಗ್ಗದ ಉಷಾ ಸರ್ಕಲ್ ಸಮೀಪದ ರವೀಂದ್ರ ನಗರ ಬಸ್ ನಿಲ್ದಾಣದ ಬಳಿ ವಿಚಾರಿಸಲು ತೆರಳಿದ್ದರು. ಆಗ ಮತ್ತೊಂದು ಬಸ್ಸು ನಿಗದಿತ ಸಮಯವನ್ನು ಮೀರಿ ನಿಲ್ದಾಣದಿಂದ ತಡವಾಗಿ ಹೊರಡುತ್ತಿರುವುದನ್ನು ಗಮನಿಸಿದ್ದರು. ಈ ಸಂಬಂಧ ಬಸ್ಸಿನ ಕಂಡಕ್ಟರ್‌ಗೆ ಪ್ರಶ್ನಿಸಿದ್ದಾರೆ.

Crime-News-General-Image

ಇದನ್ನೂ ಓದಿ » ಭದ್ರಾ ನಾಲೆಯಲ್ಲಿ ಒಂದೇ ಕುಟುಂಬದ ನಾಲ್ವರು ನಾಪತ್ತೆ

ಆಗ ಕಂಡಕ್ಟರ್‌, ಡ್ರೈವರ್‌ ಮತ್ತು ಅವರ ಜೊತೆಯಲ್ಲಿದ್ದ ಮೂರ್ನಾಲ್ಕು ಮಂದಿ ವಿಜಯಕುಮಾರ್ ಅವರಿಗೆ ಅವಾಚ್ಯವಾಗಿ ಬೈದು, ದೊಣ್ಣೆ ಹಾಗೂ ರಾಡ್‌ಗಳಿಂದ ತಲೆ ಮತ್ತು ಸೊಂಟಕ್ಕೆ ಹೊಡೆದು ಗಾಯಗೊಳಿಸಿ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ. ಗಾಯಾಳು ವಿಜಯ್‌ ಕುಮಾರ್‌ ಮೆಗ್ಗಾನ್‌ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ. ಘಟನೆ ಸಂಬಂಧ ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Total-Readers-of-Shivamogga-Live
JNN College of Engineering Admissions started

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : ಜನವರಿ 19, 2026

Leave a Comment